ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯು ಕ್ರೀಡಾ ಕೋಟಾ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ (Pr. CCIT) ಕಚೇರಿಯ ಮೂಲಕ ಒಟ್ಟು 97 ಖಾಲಿ ಹುದ್ದೆಗಳು ಭರ್ತಿಯಾಗಲಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಜನವರಿ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯಲ್ಲಿ ಸ್ಟೆನೋಗ್ರಾಫರ್ ಗ್ರೇಡ್–2 (12 ಹುದ್ದೆಗಳು), ತೆರಿಗೆ ಸಹಾಯಕ (47 ಹುದ್ದೆಗಳು) ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ (38 ಹುದ್ದೆಗಳು) ಸೇರಿವೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕರಿಗೆ ಇದು ಉತ್ತಮ ಕೇಂದ್ರ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ.
ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಅಥ್ಲೆಟಿಕ್ಸ್, ಈಜು, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಲಾನ್ ಟೆನ್ನಿಸ್, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ, ಫುಟ್‌ಬಾಲ್, ಬಿಲಿಯರ್ಡ್ಸ್ ಸೇರಿದಂತೆ ಸರ್ಕಾರದಿಂದ ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಭಾಗವಹಿಸಿರುವ ಪ್ರಮಾಣಪತ್ರ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷಗಳೊಳಗೆ ಇರಬೇಕು. ಮೀಸಲಾತಿ ವರ್ಗದವರಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.
ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಕ್ರೀಡಾ ಸಾಧನೆ ಹಾಗೂ ಅರ್ಹತೆಯ ಆಧಾರದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಸೌಲಭ್ಯ ಲಭ್ಯವಾಗಲಿದೆ. ಸ್ಟೆನೋಗ್ರಾಫರ್ ಹಾಗೂ ತೆರಿಗೆ ಸಹಾಯಕ ಹುದ್ದೆಗಳಿಗೆ ತಿಂಗಳಿಗೆ 25,500 ರೂ. ರಿಂದ 81,100 ರೂ. ವರೆಗೆ ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18,000 ರೂ. ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ.
ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯು ಮನವಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.