ನಿತ್ಯ ಭವಿಷ್ಯ: ಫೆ.12, ಗುರುವಾರ ಈ ರಾಶಿಯವರಿಗೆ ತಂದೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಧನಲಾಭ.

ಇಂದಿನ ಗ್ರಹಗತಿಗಳ ಪ್ರಕಾರ, ದ್ವಾದಶ ರಾಶಿಗಳಲ್ಲಿ ಕೆಲವರಿಗೆ ಮಿಶ್ರ ಫಲವಿದ್ದರೆ, ಇನ್ನು ಕೆಲವರಿಗೆ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಶಾಲಿವಾಹನ ಶಕವರ್ಷ 1948ರ ಮಾಘ ಮಾಸದ ಈ ದಿನದಂದು ನಿಮ್ಮ ರಾಶಿಫಲ ಹೇಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಇಂದಿನ ಪಂಚಾಂಗ (12-02-2026):

  • ಸಂವತ್ಸರ: ವಿಶ್ವಾವಸು, ಉತ್ತರಾಯಣ
  • ಮಾಸ: ಮಾಘ, ಪಕ್ಷ: ಕೃಷ್ಣ ಪಕ್ಷ
  • ತಿಥಿ: ದಶಮೀ
  • ನಕ್ಷತ್ರ: ಪೂರ್ವಾಷಾಢ (ದಿನಪೂರ್ತಿ)
  • ರಾಹುಕಾಲ: ಮಧ್ಯಾಹ್ನ 02:06 ರಿಂದ 03:13 ರವರೆಗೆ
  • ಯಮಗಂಡಕಾಲ: ಬೆಳಿಗ್ಗೆ 06:50 ರಿಂದ 08:17 ರವರೆಗೆ
  • ಗುಳಿಕಕಾಲ: ಬೆಳಿಗ್ಗೆ 09:45 ರಿಂದ 11:12 ರವರೆಗೆ

ಮೇಷ ರಾಶಿ: ಇಂದು ನೀವು ಇತರರಿಗಿಂತ ಭಿನ್ನವಾಗಿ ಆಲೋಚಿಸುವಿರಿ. ನಿಮ್ಮ ಹಠಮಾರಿ ಸ್ವಭಾವದಿಂದ ಮನೆಯ ವಾತಾವರಣದಲ್ಲಿ ಏರುಪೇರಾಗುವ ಸಾಧ್ಯತೆಯಿದೆ, ಆದ್ದರಿಂದ ತಾಳ್ಮೆ ಅಗತ್ಯ. ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಥಿತಿ ಇರಲಿ. ಕಳೆದುಹೋದ ವಿಚಾರಗಳ ಬಗ್ಗೆ ಚಿಂತಿಸುವುದಕ್ಕಿಂತ ಮುಂದಿನ ದಾರಿಯನ್ನು ನೋಡುವುದು ಉತ್ತಮ. ನಿಮ್ಮ ಅರ್ಹತೆಗೆ ತಕ್ಕ ಕೆಲಸಗಳನ್ನು ಮಾತ್ರ ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಯ ಸಹಾಯದಿಂದ ನಿಮ್ಮ ಕೆಲಸಗಳು ಸುಗಮವಾಗಲಿವೆ.

ವೃಷಭ ರಾಶಿ: ಸಂಗಾತಿಯ ಮಾತುಗಳು ಇಂದು ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ತಂದೆಯಿಂದ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಧನಲಾಭವಾಗುವ ಯೋಗವಿದೆ. ಕಚೇರಿಯಲ್ಲಿ ಅಥವಾ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಶ್ರದ್ಧೆ ಅಗತ್ಯ. ದೈವದರ್ಶನ ಅಥವಾ ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅನಗತ್ಯ ಮಾತುಗಳನ್ನು ಕಡಿಮೆ ಮಾಡುವುದು ಒಳಿತು.

ಮಿಥುನ ರಾಶಿ: ಇಂದು ನಿಮ್ಮ ಸೃಜನಶೀಲತೆ ಹೆಚ್ಚಾಗಲಿದೆ. ಆಸ್ತಿ ಅಥವಾ ಮನೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಸ್ಪಷ್ಟ ಮಾಹಿತಿ ದೊರೆಯಲಿದೆ. ಒಂಟಿತನವನ್ನು ದೂರಮಾಡಿ, ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸಿ. ಯಂತ್ರೋಪಕರಣಗಳು ಅಥವಾ ವಾಹನ ದುರಸ್ತಿಗೆ ಖರ್ಚು ಬರಬಹುದು. ಹೊಸ ವಸ್ತುಗಳ ಖರೀದಿಯಿಂದ ಸಂತೋಷ ಸಿಗಲಿದೆ. ಆದರೆ, ವ್ಯಾಪಾರ ವ್ಯವಹಾರಗಳಲ್ಲಿ ಇಂದು ಪೂರ್ಣ ಲಾಭ ನಿರೀಕ್ಷಿಸುವುದು ಕಷ್ಟ.

ಕರ್ಕಾಟಕ ರಾಶಿ: ಉದ್ಯಮ ಅಥವಾ ವ್ಯಾಪಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗಬಹುದು, ಆದರೆ ತಜ್ಞರ ಸಲಹೆಯಿಂದ ಪರಿಹಾರ ಕಂಡುಕೊಳ್ಳುವಿರಿ. ಆತುರದ ನಿರ್ಧಾರಗಳು ಬೇಡ. ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಅದನ್ನು ಬಗೆಹರಿಸಿಕೊಂಡು ಮುನ್ನಡೆಯಿರಿ. ಇಂದು ನೀವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದಿನ ಕಳೆಯುವಿರಿ.

ಸಿಂಹ ರಾಶಿ: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಭೂಮಿ ಅಥವಾ ನಿವೇಶನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಸಿಗದೇ ಹೋಗಬಹುದು. ಮನಸ್ಸಿನ ಗೊಂದಲ ನಿವಾರಣೆಗೆ ದೈವ ಭಕ್ತಿ ಸಹಕಾರಿ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ನಿಂತುಹೋದ ಕೆಲಸಗಳಿಗೆ ಮರುಜೀವ ನೀಡುವ ಪ್ರಯತ್ನ ಮಾಡಿ.

ಕನ್ಯಾ ರಾಶಿ: ಹಳೆಯ ನೆನಪುಗಳು ಅಥವಾ ಘಟನೆಗಳು ಇಂದು ನಿಮ್ಮನ್ನು ಕಾಡಬಹುದು. ಷೇರು ಮಾರುಕಟ್ಟೆ ಅಥವಾ ಹೂಡಿಕೆಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಹಳ ದಿನಗಳಿಂದ ಅಂದುಕೊಂಡಿದ್ದ ಕೆಲಸವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯೊಂದಿಗೆ ಹೊಂದಾಣಿಕೆ ಕೊರತೆ ಕಂಡುಬರಬಹುದು.

ತುಲಾ ರಾಶಿ: ವಿದ್ಯಾಭ್ಯಾಸದ ಕುರಿತಾದ ನಿಮ್ಮ ಕನಸುಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವಿರಿ. ಕಳೆದುಕೊಂಡ ವಸ್ತುವನ್ನು ಅಥವಾ ಗೌರವವನ್ನು ಮರಳಿ ಪಡೆಯುವ ಪ್ರಯತ್ನ ನಡೆಯಲಿದೆ. ಮದುವೆಯ ವಿಷಯದಲ್ಲಿ ಗೊಂದಲಗಳು ಉಂಟಾಗಬಹುದು. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿದರೆ ದಿನವು ಉತ್ತಮವಾಗಿರುತ್ತದೆ. ಜಾಣ್ಮೆಯ ನಡೆ ಇಂದು ಅತ್ಯಗತ್ಯ.

ವೃಶ್ಚಿಕ ರಾಶಿ: ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗುವಿರಿ. ವ್ಯಾಪಾರದಲ್ಲಿ ಹೊಸ ಅನುಭವಗಳು ನಿಮಗೆ ಅಚ್ಚರಿ ಮೂಡಿಸಲಿವೆ. ಸಾಮಾಜಿಕವಾಗಿ ಮನ್ನಣೆ ಮತ್ತು ಗೌರವ ಸಿಗಲಿದೆ. ಮಕ್ಕಳ ಹಠದ ಸ್ವಭಾವ ನಿಮಗೆ ಕಿರಿಕಿರಿ ಉಂಟುಮಾಡಬಹುದು. ಉದ್ಯಮ ವಿಸ್ತರಣೆಗೆ ನೀವು ತೆಗೆದುಕೊಳ್ಳುವ ಕ್ರಮಗಳು ಯಶಸ್ವಿಯಾಗಲಿವೆ.

ಧನು ರಾಶಿ: ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಆಸ್ತಿ ವಿಚಾರವಾಗಿ ಓಾಡಾಟ ನಡೆಸಬೇಕಾಗಬಹುದು. ವಿದೇಶಕ್ಕೆ ಸಂಬಂಧಿಸಿದ ವ್ಯವಹಾರಗಳು ಅಷ್ಟೊಂದು ಲಾಭದಾಯಕವಾಗಿ ಇರುವುದಿಲ್ಲ. ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿರುವವರಿಗೆ ಇದು ಉತ್ತಮ ಸಮಯ. ಇತರರು ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ.

ಮಕರ ರಾಶಿ: ಹಣಕಾಸಿನ ವ್ಯವಹಾರದಲ್ಲಿ ಇಂದು ಹೆಚ್ಚಿನ ಜಾಗ್ರತೆ ಅಗತ್ಯ. ಆದಾಯವಿದ್ದಷ್ಟೇ ಖರ್ಚು ಕೂಡ ಇರಲಿದೆ. ನಿಮ್ಮ ಪ್ರೇಮ ಜೀವನಕ್ಕೆ ಅಥವಾ ಸಂಬಂಧಗಳಿಗೆ ಅಧಿಕೃತ ಮು್ರೆ ಬೀಳುವ ಸಾಧ್ಯತೆಯಿದೆ, ಇದು ನಿಮಗೆ ಸಂತಸ ತರಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಸಲಹೆಗಳು ಪ್ರಮುಖವಾಗಲಿವೆ.

ಕುಂಭ ರಾಶಿ: ಅನಗತ್ಯ ಸಂಶಯಗಳು ಸಂಬಂಧವನ್ನು ಹಾಳುಮಾಡಬಹುದು, ಎಚ್ಚರವಿರಲಿ. ವ್ಯಾಪಾರದಲ್ಲಿ ಗ್ರಾಹಕರಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಅನಿರೀಕ್ಷಿತವಾಗಿ ಮನೆಯ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ನಿಮ್ಮದೇ ಸಂಕಷ್ಟಗಳಿದ್ದರೂ, ಪರರಿಗೆ ಸಹಾಯ ಮಾಡಲು ಮುಂದಾಗುವಿರಿ. ಶತ್ರುಗಳ ಕಾಟ ಕಡಿಮೆಯಾಗಲಿದೆ.

ಮೀನ ರಾಶಿ: ಅಪರಿಚಿತ ವ್ಯಕ್ತಿಗಳಿಂದ ನಿಮಗೆ ಸಹಾಯ ಹಸ್ತ ದೊರೆಯಲಿದೆ. ಕುಟುಂಬಕ್ಕಾಗಿ ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಅತ್ಯಗತ್ಯ. ಒಳ್ಳೆಯ ಸುದ್ದಿಯೊಂದು ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ಮಕ್ಕಳೊಂದಿಗೆ ಸಣ್ಣಪುಟ್ಟ ವಾಗ್ವಾದಗಳು ನಡೆಯಬಹುದು. ವಿದೇಶ ಪ್ರಯಾಣದ ಆಸೆ ಚಿಗುರೊಡೆಯಲಿದೆ.

Leave a Reply

Your email address will not be published. Required fields are marked *