ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಕೆ. ಮಂಜುನಾಥ ಪದಗ್ರಹಣ – 2028ರ ಚುನಾವಣೆಗೆ ಪಕ್ಷ ಸಂಘಟನೆಗೆ ಕರೆ.

ಚಿತ್ರದುರ್ಗ ಫೆ. 23

ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದರ ಮೂಲಕ ಮುಂಬರುವ ವಿವಿಧ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದರ ಮೂಲಕ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಲಾಗುವುದೆಂದು ಚಿತ್ರದುರ್ಗ ಜಿಲ್ಲಾ ಜೆಡಿಎಸ್‍ನ ನೂತನ ಅಧ್ಯಕ್ಷರಾದ ಕೆ. ಮಂಜುನಾಥ ತಿಳಿಸಿದರು.

ಸೋಮವಾರ ನಗರದ ಜೆಡಿಎಸ್, ಕಚೇರಿಯಲ್ಲಿ ಹೆಚ್,ಡಿ,ದೇವೇಗೌಡ ಭವನದ ಜೆ.ಪಿ. ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕಕ್ಕೆ ನೂತನವಾಗಿ ಅಧ್ಯಕ್ಷರಾಗಿ ನೇಮಕವಾದ ಕೆ. ಮಂಜುನಾಥ ಹಾಗೂ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾಗಿ ನೇಮಕವಾದ ಸಣ್ಣ ತಿಮ್ಮಪ್ಪ ರವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಂಜುನಾಥ್ ಅವರು, ಪಕ್ಷದ ವರಿಷ್ಟರು ನನಗೆ ಜಿಲ್ಲೆಯ ಜವಾಬ್ದಾರಿಯನ್ನು ನೀಡಿದ್ದಾರೆ ಇದನ್ನು ನಿಮ್ಮಗಳ ಸಹಯೋಗದೊಂದಿಗೆ ಸಮರ್ಪಕವಾಗಿ ನಿಬಾಯಿಸುತ್ತೇನೆ ಎಂಬ ನಂಬಿಕೆ ಇದೆ. ಇಂದು ಕಾಲದಲ್ಲಿ ಚಿತ್ರದುರ್ಗ ಜಿಲ್ಲೆ ಎಂದರೆ ಜೆಡಿಎಸ್ ಭದ್ರ ಕೋಟೆ ಎನ್ನುತ್ತಿದ್ದರು ಆದರೆ ಈಗ ಸ್ವಲ್ಪ ಬದಲಾಗಿದೆ ಇದನ್ನು ಪುನಃ ಜೆಡಿಎಸ್‍ನ ಭದ್ರ ಕೋಟೆಯನ್ನಾಗಿ ಮಾಡಬೇಕಿದೆ ಇದಕ್ಕೆ ನಿಮ್ಮೆಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಬೇಕಿದೆ ನಮ್ಮ ಪಕ್ಷಕ್ಕೆ ನಮ್ಮದೇ ಆದ ಕಾರ್ಯಕರ್ತರ ಪಡೆ ಇದೆ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ನಮ್ಮ ಪಕ್ಷದ ಶಾಸಕರು ಇಲ್ಲದಿದ್ದರು ಸಹಾ ಅವರು ಬೇರೆ ಪಕ್ಷಗಳಿಗೆ ಹೋಗಿಲ್ಲ, ನಮ್ಮಲ್ಲಿಯೇ ಗಟ್ಟಿಯಾಗಿ ನಿಂತಿದ್ದಾರೆ. ಇಂತಹ ಕಾರ್ಯಕರ್ತರನ್ನು ಹುರಿದುಂಬಿಸಿ ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ಮಾಡಲಾಗುವುದು. ನಮ್ಮ ಪಕ್ಷ ನನ್ನನ್ನು ಗುರುತಿಸಿ ಹೆಚ್ಚಿನ ರೀತಿಯಾದ ಜವಾಬ್ದಾರಿಯನ್ನು ನೀಡಿದೆ ಇದಕ್ಕೆ ಚುತಿಬಾರದ ರೀತಿಯಲ್ಲಿ ಕೆಲಸವನ್ನು ಮಾಡಲಾಗುವುದು. ತಾಲ್ಲೂಕುಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲೂ ಸಹಾ ಪಕ್ಷವನ್ನು ಸಂಘಟಿಸಲಾಗುವುದು, ಶೀಘ್ರದಲ್ಲಿ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಿ ಜಿಲ್ಲೆಯಲ್ಲಿ ಪಕ್ಷವನ್ನು ಬೆಳಸಲಾಗುವುದು ಎಂದು ಮಂಜುನಾಥ್ ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಕಾಂತರಾಜ್ ಮಾತನಾಡಿ, ಒಂದು ಕಾಲದಲ್ಲಿ ಚಿತ್ರದುರ್ಗ ಜಿಲ್ಲೆ ಎಂದರೆ ಜೆಡಿಎಸ್, ಜೆಡಿಎಸ್ ಎಂದರೆ ಚಿತ್ರದುರ್ಗ ಎನ್ನುವಂತಿತ್ತು ಈಗ ಸ್ವಲ್ಪ ಬದಲಾಗಿದೆ ಹಲವಾರು ವರ್ಷಗಳಿಂದ ನಮ್ಮ ಕಾರ್ಯಕರ್ತರಿಗೆ ಸಂಸದರು, ಶಾಸಕರು ಇರಲಿಲ್ಲ, ಆದರೂ ಸಹಾ ನಮ್ಮ ಕಾರ್ಯಕರ್ತರು ಎಲ್ಲಿಯೂ ಸಹಾ ಹೋಗಿಲ್ಲ, ಚುನಾವಣೆಯಲ್ಲಿ ನಿಲ್ಲುವವರು ಎಲ್ಲರನ್ನು ಸಹಾ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಗೆಲ್ಲಬೇಕಿದೆ, ಚುನಾವಣೆ ಎಂದರೆ ಒಂದು ಸಮುದಾಯ ಮತಗಳಿಂದ ಗೆಲ್ಲುವು ಸಾಧ್ಯವಿಲ್ಲ ಎಲ್ಲ ಸಮುದಾಯದವರ ಮತಗಳು ಅಗತ್ಯವಾಗಿದೆ, ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ವರು ಎಲ್ಲರ ಜೊತೆಯಲ್ಲಿ ಚನ್ನಾಗಿ ಇರಬೇಕಿದೆ ನಿಮ್ಮ ಗಲಾಟೆ, ಜಗಳ ಏನ್ನಿದದೂ ಸಹಾ ನಾಲ್ಕು ಗೋಡೆಗಳ ಮಧ್ಯೆ ಇರಲಿ ಅದು ಚುನಾವಣೆಯವರೆಗೂ ಬರಬಾರದು ಎಂದು ಕಿವಿ ಮಾತು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷ ಬೇರೆ ಪಕ್ಷದೊಂದಿಗೆ ಹೊಂದಾಣಿಕೆಯನ್ನು ಮಾಡಿ ಕೊಂಡಿದೆ ಈ ಹಿನ್ನಲೆಯಲ್ಲಿ ಯಾವುದೇ ಒಂದು ಕ್ಷೇತ್ರಕ್ಕೆ ನಮ್ಮವರು ಹಾಗೂ ಮೈತ್ರಿ ಪಕ್ಷದವರು ಸಹಾ ಟೀಕೇಟ್ ಕೇಳ ಬಹುದು ಈ ಸಮಯದಲ್ಲಿ ನಮ್ಮವರು ಜೋರಾಗಿ ಇದ್ದು ಜನ ಮನ್ನಣೆಯನ್ನು ಗಳಿಸಿದ್ದರೆ ಮಾತ್ರ ಟೀಕೇಟು ಪಡೆಯಬಹುದಾಗಿದೆ ಈ ಹಿನ್ನಲೆಯಲ್ಲಿ ಈಗಿನಿಂದಲೇ ಜನ ಸಂಪರ್ಕವನ್ನು ಬೆಳೆಸಿಕೊಳ್ಳಿ ಮುಂಬರುವ 2028ರ ಚುನಾವಣೆಯಲ್ಲಿ ನಮ್ಮ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿ ಗಳಾಗಲಿದ್ದಾರೆ, ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಮುಂಬರುವ 2028ರ ಚುನಾವಣೆಯಲ್ಲಿ 2-3 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಬೇಕಿದೆ ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕಾಂತರಾಜ್ ಕರೆ ನೀಡಿದರು.

ಜಿಲ್ಲಾ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷರಾದ ಎಂ ಜಯಣ್ಣ ಮಾತನಾಡಿ, ನಿಮ್ಮಗಳ ಪರಿಶ್ರಮದಿಂದ ಇಂದು ನಾವುಗಳು ವೇದಿಕೆಯ ಮೇಲೆ ಇದ್ದೇವೆ, ನೀವುಗಳು ಕೆಳಗಡೆ ಇದ್ಧಿರಾ ಇದು ನನ್ನ ಒಬ್ಬನ ಶ್ರಮವಲ್ಲ ಎಲ್ಲರ ಸಹಾಯ ಸಹಕಾರದಿಂದ ಸಿಕ್ಕಿದೆ, ನೂತನ ಜಿಲ್ಲಾಧ್ಯಕ್ಷರು ಹಲವಾರು ವರ್ಷಗಳಿಂದ ಪಕ್ಷದಲ್ಲಿ ಇದ್ದು ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ಈಗ ಜಿಲ್ಲಾಧ್ಯಕ್ಷರಾಗಿದ್ದಾರೆ, ನಮ್ಮ ಪಕ್ಷದ ವರಿಷ್ಟರು ಅಳೆದು ತೂಗಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ, ನಾನು ಸಹಾ ಎರಡುವರೆ ವರ್ಷ ಜಿಲ್ಲಾ ಅಧ್ಯಕ್ಷನಾಗಿ ಕೆಲಸವನ್ನು ಮಾಡಿದ್ದೇನೆ ಇದರ ಅನುಭವ ನನಗೆ ಇದೆ, ಈ ಹಿನ್ನಲೆಯಲ್ಲಿನ ನೂತನ ಅಧ್ಯಕ್ಷರಿಗೆ ನನ್ನ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿ, ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕಿದೆ, ಈಗಿನ ಚುನಾವಣೆಗಳು ಹಣದ ಮೇಲೆ ನಿಂತಿವೆ, ಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಹಾ ಪರಿಶ್ರಮದಿಂದ ಗೆಲುವನ್ನು ಸಾಧಿಸಲಾಗಿದೆ. ಇದೇ ರೀತಿ ಮುಂದಿನ ಚುನಾವಣೆಯಲ್ಲಿಯೂ ಸಹಾ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸುವಂತಾ ಗಬೇಕಿದೆ ಎಂದರು.

ಪದಗ್ರಹಣ ಸಮಾರಂಭದಲ್ಲಿ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಣ್ಣ ತಿಮ್ಮಪ್ಪ, ಕಾರ್ಯಾಧ್ಯಕ್ಷರಾದ ಜಿ.ಬಿ.ಶೇಖರ್, ಜಿಲ್ಲಾ ಜೆ ಡಿ ಎಸ್ ಘಟಕದ ಮಾಜಿ ಅಧ್ಯಕ್ಷರಾದ ಡಿ ಯಶೋಧರ್, ತಿಪ್ಪೇಸ್ವಾಮಿ, ರವೀಂದ್ರಪ್ಪ ಮಾತನಾಡಿದರು. ಚಿತ್ರದುರ್ಗ ಜಿಲ್ಲಾ ಜೆಡಿ ಎಸ್ ಘಟಕದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಮಠದ ಹಟ್ಟಿವೀರಣ್ಣ ನಗರಸಭೆಯ ಮಾಜಿ ಸದಸ್ಯರಾದ ನಸುರುಲ್ಲಾ, ದೀಪಕ್, ತಿಪ್ಪೇಸ್ವಾಮಿ, ಪ್ರತಾಪ್‍ಜೋಗಿ, ಅಬ್ಬು ಲಲಿತಾ ಕೃಷ್ಣಮೂರ್ತಿ ಗೀತಮ್ಮ ನಿಜಲಿಂಗಪ್ಪ, ಲಿಂಗರಾಜು, ಮಂಜು ನಾಥ ಜಾಲಿಕಟ್ಟೆ ರುದ್ರಣ್ಣ ಚಿದಾನಂದ ಮತ್ತು ಜಿಲ್ಲೆಯ ನೂತನ ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಪರಾಜಿತ ಅಭ್ಯರ್ಥಿಗಳಾದ ರವೀಶ್, ವೀರಭದ್ರಪ್ಪ, ಶಿವಶಂಕರ ಯಾದವ್ ಶಿವಪ್ರಸಾದ್ ಗೌಡ ಮತ್ತು ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *