ಮಕ್ಕಳು ಸಂವಹನ ಹಾಗೂ ವ್ಯಾಪಾರ ಕೌಶಲ್ಯ ಕಲಿಕೆಯಲು ಚಿಣ್ಣರ ಸಂತೆಯಂತಹ ಕಾರ್ಯಕ್ರಮಗಳು ಸಹಕಾರಿ. _ ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜು ಅಭಿಪ್ರಾಯ.
ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಸೊಂಡೆಕೆರೆ: ಫೆ.27.

ಹಿರಿಯೂರು ತಾಲ್ಲೂಕು ಸೊಂಡೆಕೆರೆ ಗ್ರಾಮ ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯೂರು ಇವರ ಸಹಕಾರದಲ್ಲಿ ಮಕ್ಕಳಿಗಾಗಿ ಚಿಣ್ಣರ ಸಂತೆ ಹಾಗೂ ವಿಜ್ಞಾನ ಮೇಳ ಏರ್ಪಡಿಸಲಾಗಿತ್ತು ಮಕ್ಕಳು ಬೆಳಿಗ್ಗೆ ಹತ್ತುಗಂಟೆಗೆ ಸರಿಯಾಗಿ ವ್ಯಾಪಾರ ಮಾಡಲು ತಾವು ತಂದಿದ್ದ ವಸ್ತುಗಳನ್ನು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಕುಳಿತು “ಅಣ್ಣ ಬನ್ನಿ ತಾಜಾ ಎಳನೀರು ತಗೋಳಿ…ಅಕ್ಕ ಬನ್ನಿ ಈರೇಕಾಯಿ ಬದ್ನೆಕಾಯಿ ಬರೀ ಹತ್ ರೂಪಾಯಿ ” ಎಂದು ಜೋರಾಗಿ ಕೂಗುತ್ತಾ ಅನುಭವಿ ವ್ಯಾಪಾರಿಗಳನ್ನೂ ನಾಚಿಸುವಂತೆ ಸರಿಯಾದ ತೂಕಮಾಡಿ ಕೊಟ್ಟು ಹಣ ಎಣಿಸಿಕೊಂಡರು. ಇದಕ್ಕೂ ಮೊದಲು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜು ಟೇಪನ್ಜು ಕಟ್ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸಂವಹನ ವ್ಯಾಪಾರ ಕೌಶಲ್ಯ, ಸಹಕಾರ ಮನೋಭಾವ ಮತ್ತು ಸೃಜನಾತ್ಮಕತೆ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕಾಂತಬಾಬು ಮಾತನಾಡಿ ಚಿಣ್ಣರ ಸಂತೆ ಕಾರ್ಯಕ್ರಮ ಏರ್ಪಡಿಸಿದ ಮುಖ್ಯ ಉದ್ದೇಶ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ವ್ಯಾಪಾರ ಮನೋಭಾವವನ್ನು ಬೆಳೆಸುವುದು. ಮಕ್ಕಳು ಆಟಿಕೆಗಳು, ಹಸ್ತಕಲಾ ವಸ್ತುಗಳು, ಚಿತ್ರಗಳು, ಸಣ್ಣ ತಿಂಡಿಗಳು ಇತ್ಯಾದಿಗಳನ್ನು ಮಾರಾಟಕ್ಕೆ ಇಟ್ಟಿ ಅವರು ಗ್ರಾಹಕರೊಂದಿಗೆ ವ್ಯವಹಾರ ಮಾಡುವುದು ಮಾತನಾಡುವುದು, ಹಣ ಪಡೆಯುವುದು, ಚಿಲ್ಲರೆ ನೀಡುವುದು ಈರೀತಿ ಮಾಡುವುದರಿಂದ ಅವರ ಗಣಿತದ ಕಲಿಕೆ ಸುಲಭವಾಗುತ್ತದೆ ಮತ್ತು ಬಾಲ್ಯದಲ್ಲೇ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಕಲಿಯುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂಧರ್ಭದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಮಕ್ಕಳು ಸ್ವಯಂ ತಾವೇ ಮಾಡಿದ ವಿವಿಧ ವಿಜ್ಞಾನದ ವಸ್ತುಗಳನ್ನು ಹಾಗೂ ವಿವಿಧ ವಿಜ್ಞಾನಿಗಳ ಚಿತ್ರಪಟಗಳನ್ನು ಪ್ರದರ್ಶಿಸಿ ಸಂದರ್ಶಕರಿಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶಿವರುದ್ರಪ್ಪ ಶೈಲಜ ಮಹಾಲಕ್ಷ್ಮೀ ಮಂಜುಳಾಪೂಜಾರ್ತಿ ದಯಾನಂದಗೌಡ ವಿಶಾಲಾಕ್ಷಿ ಗೌತಮಿ, ಸುಧಾ ಎಸ್ಡಿಎಂಸಿ ಸದಸ್ಯರು, ಪೋಷಕರು ಗ್ರಾಮದ ಮುಖಂಡರು ನಾಗರೀಕರು ಮಕ್ಕಳಿಂದ ಹಣ್ಣು ತರಕಾರಿ ಎಳನೀರು ಇತರೆ ವಸ್ತುಗಳನ್ನು ಖರೀದಿ ಮಾಡಿ ಮಕ್ಕಳ ವ್ಯಾಪಾರ ಕುಶಲತೆ ನೋಡಿ ಬೆರಗಾದರು.