ಮೈಸೂರು: ದಿನಾಂಕ 27.02.2026ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಕರ್ನಾಟಕ ಸ್ಟೇಟ್ ಯೂತ್ ನೆಟ್ವರ್ಕ್ ಹಾಗೂ ‘ಪರಿಸರಕ್ಕಾಗಿ ನಾವು’ ಸಂಘಟನೆ ಸಂಯುಕ್ತಾಶ್ರಯದಲ್ಲಿ “ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ” ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿ ಇನ್ಟಿಟ್ಯೂಟ್ ಆಫ್ ಇಂಜಿನಿರ್ಸ್ (ಇಂಡಿಯಾ), ಜೆ.ಎಲ್.ಬಿ ರೋಡ್, ಮೈಸೂರು ಇಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪಿ ಶಿವರಾಜು ಕೆ.ಎ.ಎಸ್. ಮಾನ್ಯ ಅಪರ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲೆ ನಮ್ಮ ಬದುಕಿನ ಪ್ರತಿಯೊಂದು ಕ್ಷಣವೂ ಪರಿಸರದ ಆಶೀರ್ವಾದದಿಂದ ಸಾಗುತ್ತಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಳೆ ಬೆಳೆಸುವ ಮಣ್ಣು ಮತ್ತು ನೆರಳು ನೀಡುವ ಮರಗಳು—ಎಲ್ಲವು ಪ್ರಕೃತಿಯ ಅಮೂಲ್ಯ ಕೊಡುಗೆಗಳು. ಆದರೆ ಇಂದಿನ ವೇಗವಾದ ಅಭಿವೃದ್ಧಿಯ ನಡುವೆಯೇ ಪರಿಸರ ಹಾನಿಯ ಸಂಕಟ ಗಂಭೀರವಾಗುತ್ತಿದೆ. ಹವಾಮಾನ ಬದಲಾವಣೆ, ಅರಣ್ಯ ನಾಶ, ನೀರಿನ ಕೊರತೆ ಮತ್ತು ಪ್ಲಾಸ್ಟಿಕ್ ಮಾಲಿನ್ಯವು ನಮ್ಮ ಭವಿಷ್ಯಕ್ಕೆ ಸವಾಲಾಗಿವೆ. ಈ ಸಂದರ್ಭದಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯುವಕರು ಕೇವಲ ನಾಳೆಯ ನಾಯಕರು ಮಾತ್ರವಲ್ಲ, ಇಂದಿನ ಬದಲಾವಣೆಯ ಶಿಲ್ಪಿಗಳು. ನಿಮ್ಮಲ್ಲಿರುವ ಶಕ್ತಿ, ಹೊಸ ಚಿಂತನೆ ಮತ್ತು ತಂತ್ರಜ್ಞಾನ ಜ್ಞಾನವು ಪರಿಸರ ಸಂರಕ್ಷಣೆಗೆ ಬಲವಾದ ಸಾಧನಗಳಾಗಿವೆ.

ನಮ್ಮಲ್ಲಿ ಪ್ರತಿಯೊಬ್ಬರೂ ಸಣ್ಣ ಸಣ್ಣ ಕ್ರಮಗಳನ್ನು ಕೈಗೊಂಡರೆ ದೊಡ್ಡ ಬದಲಾವಣೆಯನ್ನು ತರಬಹುದು. ಒಂದು ಮರವನ್ನು ನೆಡುವುದು ಮತ್ತು ಅದನ್ನು ಪೋಷಿಸುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು—ಇವುಗಳು ಸರಳ ಕ್ರಮಗಳಾಗಿದ್ದರೂ ಮಹತ್ತರ ಪರಿಣಾಮ ಉಂಟುಮಾಡುತ್ತವೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಯುವಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಢಿಸಬೇಕು. ಶಾಲೆ ಮತ್ತು ಕಾಲೇಜುಗಳಲ್ಲಿ ಹಸಿರು ಕ್ಲಬ್ಗಳನ್ನು ಸ್ಥಾಪಿಸಿ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ನಾವು ಇಂದು ಕೈಗೊಂಡ ಸಂಕಲ್ಪವೇ ನಾಳೆಯ ಸುರಕ್ಷಿತ ಭವಿಷ್ಯವನ್ನು ರೂಪಿಸುತ್ತದೆ. ಹಸಿರು ಮತ್ತು ಸ್ವಚ್ಛ ಪರಿಸರವೇ ಸಮೃದ್ಧ ಸಮಾಜದ ಗುರುತು. ಆದ್ದರಿಂದ “ಹಸಿರು ಭೂಮಿ – ಸುಂದರ ಭವಿಷ್ಯ” ಎಂಬ ದೃಢ ನಂಬಿಕೆಯಿAದ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
ಯುವಕರು ಇಲಾಖೆಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಶ್ರೀಮತಿ ಸರಸ್ವತಿ ನಿರ್ದೇಶಕರು, ಆರ್.ಎಲ್.ಹೆಚ್.ಪಿ. ಸಂಸ್ಥೆ, ಪ್ರಾಸ್ಥಾವಿಕವಾಗಿ ಮಾತನಾಡುತ್ತ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಒಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಿದ್ದು ಕಳೆದ 40 ವರ್ಷಗಳಿಂದಲೂ ಕರ್ನಾಟಕದ 8 ಜಿಲ್ಲೆಗಳಲ್ಲಿ, ಮಕ್ಕಳಾಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾಭಿವೃದ್ಧಿ ಸಮೂದಾಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಯೋಜನೆಗಳ ಸದುಪಯೋಗ ಕುರಿತು ಸುಮಾರು 1.85 ಲಕ್ಷ ಜನರೊಟ್ಟಗೆ ಶ್ರಮಿಸುತ್ತದೆ. ಖಐಊP ವತಿಯಿಂದ ಮೈಸೂರು, ಗುಂಡ್ಲುಪೇಟೆ, ಗುಲ್ಬರ್ಗ ಮತ್ತು ಬೀದರ್ ತಾಲ್ಲೂಕಿನಲ್ಲಿ 40 ಯುವಕರ ಗುಂಪುಗಳನ್ನು ರಚನೆಮಾಡಿದ್ದು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಯೂತ್ನೆಟ್ವರ್ಕ್ ಎಂಬ ಗುಂಪು ರಚನೆಯಾಗಿದೆ. ಯುವಜನರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಪರಿಸರ ಸಂಬAಧಿತ ಕಾರ್ಯಕ್ರಮಗಳು, ಸಾವಯವ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಘನತ್ಯಾಜ್ಯ ಘಟಕ, ಜಾಗತಿಕ ತಾಪಮಾನ ಹಾಗೂ ಪ್ರಕೃತಿ ವಿಕೋಪ ಹೀಗೆ ಹಲವಾರು ಪರಿಸರಕ್ಕೆ ಸಂಬAಧಿಸಿದ ವಿಷಯಗಳ ಕುರಿತು ಮಕ್ಕಳು, ಮಹಿಳೆಯರು, ಯುವಜನರು ಮತ್ತು ಸಮುದಾಯಕ್ಕೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ ಅಂಗಡಿ, ತೋಟಗಾರಿಕೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶ್ರೀ ಬಿ.ಡಿ. ಜಯರಾಮ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಶ್ರೀ ಪ್ರಭುಸ್ವಾಮಿ ವಿ.ಎಂ ಸಹಾಯಕ ನಿರ್ದೇಶಕರು ಪ್ರವಾಸೋಧ್ಯಮ ಇಲಾಖೆ, ಶ್ರೀ ನಾಗರಾಜಯ್ಯ ಉಪನಿರ್ದೇಶಕರು(ಶೈಕ್ಷಣಿಕ) ಡಯಟ್, ಶ್ರೀ ಪರಶುರಾಮೇಗೌಡ ಪ್ರದಾನ ಕಾರ್ಯದರ್ಶಿ ಪರಿಸರಕ್ಕಾಗಿ ನಾವು ಸಂಘಟನೆ, ಇವರು ಯುವಜನರಿಗೆ ಪರಿಸರ ಸಂರಕ್ಷಣೆಯ ತುರ್ತು ವಿಷಯದ ಕುರಿತು ಮಾಹಿತಿ ನೀಡಿದರು. 180ಕ್ಕು ಹೆಚ್ಚು ಯುವಜನರು ಬಾಗವಹಿಸಿದ್ದರು.
ನಿರ್ದೇಶಕರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ,
ಮೈಸೂರು ಮೊ. 7022252030/9008333090