ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ವಿಜ್ಞಾನ ಅಧ್ಯಯನ ವಿದ್ಯಾರ್ಥಿಗಳಿಗೆ ಅವಶ್ಯಕ- ಶ್ರೀನಿವಾಸ್.

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಬೊಮ್ಮೇನಹಳ್ಳಿಯ ಶ್ರೀಯೋಗಿ ನಾರೇಯಣ ಯತಿಂದ್ರ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಚಿತ್ರದುರ್ಗ: ಭೀಮಸಮುದ್ರ ಸಮೀಪದ ಬೊಮ್ಮೇನಹಳ್ಳಿಯ ಶ್ರೀಯೋಗಿ ನಾರೇಯಣ ಯತಿಂದ್ರ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರದೊಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಶಾಲೆಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನವು (Science Exhibition) ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ, ಸೃಜನಾತ್ಮಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಒಂದು ವೇದಿಕೆಯಾಗಿದೆ. ಇದು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತದೆ, ಸಂಶೋಧನಾ ಕೌಶಲ್ಯಗಳನ್ನುಅಭಿವೃದ್ಧಿಪಡಿಸುತ್ತದೆ ಮತ್ತು ಮೂಢನಂಬಿಕೆಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ. ವೈಜ್ಞಾನಿಕ ಸತ್ಯ ತಿಳಿಯಲು ವಿಜ್ಞಾನದ ಅಧ್ಯಯನ ಅವಶ್ಯಕ ಎಂದು ತಿಳಿಸಿದರು.

ಶಾಲೆಯ ಅಧ್ಯಕ್ಷರಾದ ಸೋಮಶೇಖರ್ ಮಾತನಾಡಿ ಸಿ.ವಿ.ರಾಮನ್ ಅವರು ವಿಜ್ಞಾನ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಬೆಳಕಿನ ವೀಕೆಂದ್ರಿಕರಣದ ಪರಿಣಾಮ ಮತ್ತು ಗುಣಲಕ್ಷಣಗಳು ವೈಜ್ಞಾನಿಕ ಅಧ್ಯಯನವಾಗಿದೆ ಎಂದರು. ಮಕ್ಕಳಿಗೆ ಕುತೂಹಲ ಸಂಶೋಧನಾ ಮನೋವೃತ್ತಿ ಮತ್ತು ಪ್ರಯೋಗಶೀಲತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸೋಮಶೇಖರ್, ಉಪಾಧ್ಯಕ್ಷರು ಚೆಲುವ ರಾಜ್ , ಕಾರ್ಯದರ್ಶಿ ಜ್ಞಾನೇಶ್ ರವರು ಮತ್ತು ಸದಸ್ಯರುಗಳು ಹಾಗೂ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ, ಮುಖ್ಯ ಶಿಕ್ಷಕರು ತೇಜಸ್ವಿನಿ , ಸಹಶಿಕ್ಷಕರು ಮತ್ತು ಮಕ್ಕಳು , ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *