ಗುಡಿ ಗೋಪುರಗಳ  ಜೀರ್ಣೋದ್ಧಾರಕ್ಕೆ  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಧನ 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 7 

ತಾಲೂಕು ಸಿರಿಗೆರೆ ಯೋಜನಾ ವ್ಯಾಪ್ತಿಯ ಹಿರೇಗುಂಟನೂರು ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 200000/(2 ಲಕ್ಷ ರೂ ಮೊತ್ತದ ಡಿಡಿ)ಯನ್ನು  ಗ್ರಾಮಾಭಿವೃದ್ಧಿ ಯೋಜನೆಯ ಸಿರಿಗೆರೆ ಯೋಜನಾಧಿಕಾರಿಗಳು ರವಿಚಂದ್ರ ದೇವಸ್ಥಾನದ ಟ್ರಸ್ಟಿಯವರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ನವರಾದ, ಶ್ರೀಚಂದ್ರಣ್ಣ ನಿಜಲಿಂಗಯ್ಯ ಮೋಹನ್ ರಾವ್,  ಪವಮಾನಕುಮಾರ್,ವಿಶ್ವನಾಥ ಒಕ್ಕೂಟ ಪದಾಧಿಕಾರಿಗಳು ಶ್ರೀಮತಿ ರೇಖಾ, ಹಿರೇಗುಂಟನೂರು ವಲಯ ಮೇಲ್ವಿಚಾರಕರು ಸೈಯದ್, ಮೌನೇಶ್, ಸೇವಾಪ್ರತಿನಿಧಿ ಮಂಜುಳ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು,

Leave a Reply

Your email address will not be published. Required fields are marked *