ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 7
ನಮ್ಮ ಸಮುದಾಯ ನಿರ್ಲಕ್ಷಕ್ಕೆ ಒಳಗಾಗಿದೆ, ನಮ್ಮಲ್ಲಿ ಜಾಗೃತಿಯನ್ನು ಮೂಡಿಸುವಂತ ಕಾರ್ಯವಾಗಬೇಕಿದೆ ಇದಕ್ಕಾಗಿ ಜಿಲ್ಲಾವಾರು ನಮ್ಮ ಸಮುದಾಯವರನ್ನು ಭೇಟಿ ಮಾಡಿ ಸಂಘಟನೆಯನ್ನು ಮಾಡಲಾಗುತ್ತಿದೆ. ಎಂದು ರಾಜ್ಯ ಹಿಂದುಳಿದ ಮಠಾಧೀಶರ ಒಕ್ಕೂಟದ ಉಪಾಧ್ಯಕ್ಷರು, ಬನಹಟ್ಟಿಯ ಮಹಾಂತ ಮಂದಾರ ಮಠದ ಮಹಾಂತ ದೇವರು ತಿಳಿಸಿದರು.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟ್ಟಿದ ಅವರು ಚಿತ್ರದುರ್ಗ ನಗರದ ಬಸವಮಂಟಪದಲ್ಲಿ ಶಿವಶಿಂಪಿ ಸಮುದಾಯದವರನ್ನು ಬೇಟಿ ಮಾಡಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮಗೆ ಈಗ ಮಠವನ್ನು ಕಟ್ಟುವುದು, ವಿದ್ಯಾಪೀಠಗಳನ್ನು ನಿರ್ಮಾಣ ಮಾಡುವುದಕ್ಕಿಂತ ಮುಖ್ಯವಾಗಿ ಸಮಾಜವನ್ನು ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಎಲ್ಲೇ ಹೋದರು ಸಹಾ ನಿಮ್ಮವರು ಎಷ್ಟು ಮಂದಿ ಇದ್ದಾರೆ ಎಂದು ಕೇಳುವುದು ಆಗಿದೆ, ಈ ಹಿನ್ನಲೆಯಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ ಅವರು, ಬೀದರಿನಿಂದ ಬೆಂಗಳೂರುವರೆಗೂ ಸಹಾ ನಮ್ಮ ಸಮುದಾಯವನ್ನು ಸಂಘಟಿಸಲು ಮುಂದಾಗಿದ್ದು, ನಮ್ಮ ಕುಲ ಗುರು ಶಿವದಾಸಿಮಯ್ಯರವರ ಬಗ್ಗೆ ಜೀವನ ಚರಿತ್ರ ವಚನಗಳು ಸಂಗ್ರಹ ಕಾರ್ಯವನ್ನು ನಮ್ಮ ಸಮಾಜದ ಸಂಶೋಧಕರಿಂದ ನಡೆಸಲಾಗುತ್ತಿದೆ. ಎಂದರು.
ನಮ್ಮ ಸಮುದಾಯ ಸಂಘಟನೆಯಾದರೆ ಮಾತ್ರ ಸರ್ಕಾರದ ಮಟ್ಟದಲ್ಲಿ ಏನಾದರೂ ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಹೀಗೇಯೇ ಇರಬೇಕಾಗುತ್ತದೆ ಈ ಹಿನ್ನಲೆಯಲ್ಲಿ ಸಂಘಟನೆಗೆ ಹೆಚ್ಚಿನ ಒಲವನ್ನು ನೀಡಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾವಾರು ಸಮಾವೇಶಗಳನ್ನು ಮಾಡುವುದರೊಂದಿಗೆ ಬೆಂಗಳೂರಿನಲ್ಲಿ ನಮ್ಮ ಸಮುದಾಯ ಬೃಹತ್ ಸಮಾವೇಶವನ್ನು ಮಾಡಿ ಸರ್ಕಾರಕ್ಕೆ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ ಇದಕ್ಕೆ ನಿಮ್ಮಲ್ಲರ ಸಹಾಯ, ಸಹಕಾರ ಬೇಕಿದೆ. ನಾನು ನಿಮ್ಮ ಪ್ರತಿನಿಧಿಯಾಗಿ ಮುಂದೆ ಹೊರಟಿದ್ದೇನೆ ನೀವುಗಳು ನನಗೆ ಸಾಥ್ ನೀಡುವಂತೆ ಮನವಿ ಮಾಡಿದರು.
ನಮ್ಮ ಕುಲ ಗುರು ಶಿವದಾಸಿಮಯ್ಯ ಗುರುಗಳು ಸೂಜಿ ಕಾಯಕ ರಾಮಲಿಂಗ ತಂದೆಯವರಾಗಿದ್ದೆರು ಎಂದು ಒಂದು ಕಡೆಯಲ್ಲಿ ಉಲ್ಲೇಖವಾಗಿದೆ ಈ ಹಿನ್ನಲೆಯಲ್ಲಿ ನಾವುಗಳು ಜಯಂತಿಯನ್ನು ಮಾಡುವಾಗ ಶಿವದಾಸಿಮಯ್ಯ ಹಾಗೂ ಸೂಜಿ ಕಾಯಕ ರಾಮಲಿಂಗ ತಂದೆಯವರ ಇಬ್ಬರ ಪೋಟೋವನ್ನು ಇಟ್ಟು ಪೂಜೆಯನ್ನು ಮಾಡಬೇಕೆಂದು ತಿಳಿಸಿದ ಶ್ರೀಗಳು, ಶಿವದಾಸಿಮಯ್ಯ, ಜೇಡರ ದಾಸಿಮಯ್ಯ, ಹಾಗೂ ಶಂಕರ ದಾಸಿಮಯ್ಯ ಇವರು ಒಂದೇ ತಾಯಿಯ ಮಕ್ಕಳು ಆದರೆ ವೃತ್ತಿಯಲ್ಲಿ ಬೇರೆ ಬೇರೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಜಯದೇವಮೂರ್ತಿ, ಸಮಾಜದ ಮುಖಂಡರಾದ ಷಣ್ಮುಖಪ್ಪ, ಮುರುಗೇಶ್, ಕವಿತಾ ಸುರೇಶ್, ಗೀತಾ ರುದ್ರೇಶ್ ಮಾಲಾ ಬಸವರಾಜು, ಕುಸುಮ ರಾಜಣ್ಣ ನಂದ ಬಕ್ಕೇಶ್, ಕವಿತಾ ಪಂಪಾಪತಿ, ಇಂದಿರಾ ಜಯದೇವ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
