ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 28
ಜಿಲ್ಲಾ ಪಂಚಾಯತ್‍ನಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿ ನಿವೃತ್ತಿ ಹೊಂದಿ ಈಗ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಸಂಗಮರವರು ತಮ್ಮ ತಾಯಿ ತಂದೆಯವರಾದ ದಿವಂಗತ ಶ್ರೀಮತಿ ತಿಪ್ಪೇರಮ್ಮ ಸಂಗಮ ತಿಮ್ಮಪ್ಪ ಗಜ್ಜುಗಾನಹಳ್ಳಿ ಇವರ ಹೆಸರಿನಲ್ಲಿ ದತ್ತ ನಿಧಿ ಠೇವಣಿಯನ್ನು ಚಳ್ಳಕೆರೆ ತಾಲ್ಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಗರಾಜ ಸಂಗಮ ದಂಪತಿಗಳು 1ಲಕ್ಷ ರೂಪಾಯಿಗಳನ್ನು ಶಾಲೆಯ ಹೆಸರಿನಲ್ಲಿ ಠೇವಣಿ ಇಟ್ಟು ಇದರಿಂದ ಬಂದ ಬಡ್ಡಿ ಹಣದಿಂದ ಶಾಲೆಯ ಬಡ ಮಕ್ಕಳಿಗೆ ಪ್ರತಿ ವರ್ಷ ಲೇಖನ ಸಾಮಗ್ರಿಗಳ ವಿತರಿಸುವಂತೆ 1 ಲಕ್ಷ ರೂಪಾಯಿಯ ಚೆಕ್‍ನ್ನು ಶಿಕ್ಷಕರಿಗೆ ಶುಕ್ರವಾರ ನಡೆದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಶಿಕ್ಷಣದ ಅರಿವು ಮತ್ತು ಬದುಕಿನೊಡನೆ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಶಿಕ್ಷಣದ ಕಲಿಕೆಗೆ ಆದ್ಯತೆ ನೀಡುವ ಮೂಲಕ ಪ್ರೇರಣೆಯಾಗಬೇಕು ಎಂದರು.


ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ ಸಂಗಮ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಶಿಕ್ಷಣ ಅನಿವಾರ್ಯವಾಗಿದೆ. ಎಲ್ಲರು ಅಕ್ಷರ ಜ್ಞಾನವನ್ನು ಪಡೆಯಬೇಕಿದೆ, ಅಕ್ಷರದ ಜ್ಞಾನ ಇಲ್ಲದಿದ್ದರೆ ಇಂದಿನ ದಿನದಲ್ಲಿ ಸಮಾಜದಲ್ಲಿ ಬೆಲೆ ಇಲ್ಲದಂತೆ ಆಗುತ್ತದೆ. ಕೆಲವೊಂದು ಮಕ್ಕಳಿಗೆ ಕಲಿಯಲು ಎಲ್ಲಾ ರೀತಿಯ ಸೌಲಭ್ಯ ಇರುತ್ತದೆ ಆದರೆ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ, ಆದೇ ಮತ್ತೇ ಕೆಲವರಿಗೆ ಕಲಿಯಲು ಕಲಿಯಲು ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ ಆದರೆ ಕಲಿಕೆಯ ಮೇಲೆ ಆಸಕ್ತಿ ಇರುತ್ತದೆ ಇಂತಹ ಮಕ್ಕಳಿಗೆ ನಾನು ನೀಡಿದ ಧನ ಸಹಾಯ ನೆರವಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ 2 ಅಂಗನವಾಡಿ ಕೇಂದ್ರಗಳಿಗೆ ದಾಖಲಾತಿ ಪುಸ್ತಕಗಳ ನಿರ್ವಹಣೆಗಾಗಿ 2 ಗೋದ್ರೇಜ್ ಬೀರುಗಳನ್ನು ದೇಣಿಗೆಯಾಗಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಡಿಐಇಟಿ ಉಪನ್ಯಾಸಕ ರೇವಣ್ಣ, ಎಸ್‍ಡಿಎಂಸಿ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ಸಿಆರ್‍ಪಿ ಸಿ.ಹನುಮಂತಪ್ಪ, ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ, ನಿವೃತ್ತ ಶಿಕ್ಷಕ ಸ್ವಾಮಿನಾಥ, ಜಿ.ಒ. ನಾಗರಾಜ್, ಕೆ.ಒ.ಪೆನ್ನೋಬಳಿ.ಡಿ.ಸಿ. ಪಾಟೀಲ್, ಗ್ರಾಮಸ್ಥರಾದ ಸೋಮಣ್ಣ, ಬೊಮ್ಮಯ್ಯ, ಬಸವರಾಜ್, ಇಮ್ಮಿಯಾಜ್, ಸೇರಿದಂತೆ ಶಿಕ್ಷಕಿಯರು ಹಾಗೂ ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.