Ranji Trophy 2023: ರಣಜಿ ಟ್ರೋಫಿ ಸೆಮಿ ಫೈನಲ್ ವೇಳಾಪಟ್ಟಿ ಪ್ರಕಟ

Ranji Trophy 2023: Semifinals teams and schedule

Ranji Trophy 2022-23: ರಣಜಿ ಟೂರ್ನಿಯ ಕ್ವಾರ್ಟರ್​ ಫೈನಲ್ ಪಂದ್ಯಗಳು ಪೂರ್ಣಗೊಂಡಿವೆ. ನೌಕೌಟ್ ಹಂತದಲ್ಲಿ ಆಡಿದ 8 ತಂಡಗಳಲ್ಲಿ 4 ತಂಡಗಳು ಸೆಮಿ ಫೈನಲ್​ಗೆ ಪ್ರವೇಶಿಸಿದೆ. ಆಂಧ್ರಪ್ರದೇಶ್ ವಿರುದ್ಧ ಮಧ್ಯಪ್ರದೇಶ್ 5 ವಿಕೆಟ್​ಗಳ ಜಯ ಸಾಧಿಸಿದರೆ ಸೆಮೀಸ್​ಗೆ ಎಂಟ್ರಿ ಕೊಟ್ಟರೆ, ಪಂಜಾಬ್ ವಿರುದ್ಧ 71 ರನ್​ಗಳ ಭರ್ಜರಿ ಜಯದೊಂದಿಗೆ ಸೌರಾಷ್ಟ್ರ ತಂಡ ಸೆಮಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಜಾರ್ಖಂಡ್ ವಿರುದ್ಧ ಬೆಂಗಾಲ್ ತಂಡವು 9 ವಿಕೆಟ್​ಗಳ ಗೆಲುವು ದಾಖಲಿಸಿ ಮುಂದಿನ ಹಂತಕ್ಕೇರಿದೆ. ಹಾಗೆಯೇ ಉತ್ತರಾಖಂಡ್ ವಿರುದ್ಧ ಇನಿಂಗ್ಸ್​ ಹಾಗೂ 281 ರನ್​ಗಳ ಅಮೋಘ ಜಯ ಸಾಧಿಸಿ ಕರ್ನಾಟಕ ತಂಡವು ಸೆಮಿ ಫೈನಲ್​ಗೆ ಪ್ರವೇಶಿಸಿದೆ.

ಅದರಂತೆ ಕರ್ನಾಟಕ, ಬೆಂಗಾಲ್, ಸೌರಾಷ್ಟ್ರ ಮತ್ತು ಮಧ್ಯಪ್ರದೇಶ್ ತಂಡಗಳ ನಡುವೆ ಈ ಬಾರಿ ರಣಜಿ ಟೂರ್ನಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ. ಇಂದೋರ್ ಹಾಗೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್​ನಲ್ಲಿ ಗೆಲ್ಲುವ ತಂಡಗಳು ಫೆಬ್ರವರಿ 16 ರಂದು ಫೈನಲ್ ಆಡಲಿದೆ.

ಇದನ್ನೂ ಓದಿ: Team India: ಭಾರತ ತಂಡದ ಭವಿಷ್ಯದ ಸೂಪರ್​ಸ್ಟಾರ್​ಗಳನ್ನು ಹೆಸರಿಸಿದ ಅನಿಲ್ ಕುಂಬ್ಳೆ

ರಣಜಿ ಟ್ರೋಫಿ 2022-23 ಸೆಮಿ ಫೈನಲ್ ವೇಳಾಪಟ್ಟಿ ಹೀಗಿದೆ:

  • ಫೆಬ್ರವರಿ 9: ಮೊದಲ ಸೆಮಿ ಫೈನಲ್​- ಮಧ್ಯಪ್ರದೇಶ್ vs ಬಂಗಾಳ (ಇಂದೋರ್ ಕ್ರಿಕೆಟ್ ಸ್ಟೇಡಿಯಂ)
  • ಫೆಬ್ರವರಿ 10: ಎರಡನೇ ಸೆಮಿ ಫೈನಲ್- ಕರ್ನಾಟಕ vs ಸೌರಾಷ್ಟ್ರ
  • ಫೆಬ್ರವರಿ 16: ಫೈನಲ್ ಪಂದ್ಯ

ಸೆಮಿ ಫೈನಲ್​ನಲ್ಲಿ ಕಣಕ್ಕಿಳಿಯಲಿರುವ ತಂಡಗಳು:

ಕರ್ನಾಟಕ ತಂಡ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶರತ್ ಬಿಆರ್ (ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ವಿಧ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಖ್, ರೋನಿತ್ ಮೋರೆ, ಶ್ರೀನಿವಾಸ್, ಶರತ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿಶಾಲ್ ಓನಾಟ್.

ಸೌರಾಷ್ಟ್ರ ತಂಡ: ಅರ್ಪಿತ್ ವಾಸವಾಡ (ನಾಯಕ), ಶೆಲ್ಡನ್ ಜಾಕ್ಸನ್, ಪ್ರೇರಕ್ ಮಂಕಡ್, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಹಾರ್ವಿಕ್ ದೇಸಾಯಿ, ಚಿರಾಗ್ ಜಾನಿ, ಧರ್ಮೇಂದ್ರಸಿನ್ಹ್ ಜಡೇಜಾ, ಜೇ ಗೋಹಿಲ್, ಪಾರ್ಥ್ ಭುತ್, ಕುಶಾಂಗ್ ಪಟೇಲ್, ಚೇತನ್ ಸಕರಿಯಾ, ಸಮರ್ಥ್ ವ್ಯಾಸ್, ತರಂಗ್ ಗೊಹೆಲ್, ದೇವಾಂಗ್, ನವನೀತ್ ವೋರಾ.

ಮಧ್ಯಪ್ರದೇಶ್ ತಂಡ: ಯಶ್ ದುಬೆ, ಹಿಮಾಂಶು ಮಂತ್ರಿ (ವಿಕೆಟ್ ಕೀಪರ್), ಶುಭಂ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ, ಅಕ್ಷತ್ ರಘುವಂಶಿ, ಅನುಭವ್ ಅಗರ್ವಾಲ್, ಸರನ್ಶ್ ಜೈನ್, ಅವೇಶ್ ಖಾನ್, ಗೌರವ್ ಯಾದವ್, ಕುಮಾರ್ ಕಾರ್ತಿಕೇಯ (ನಾಯಕ), ಕುಲದೀಪ್ ಸೇನ್, ಹರ್ಷ ಗೌಲಿ.

ಬೆಂಗಾಲ್ ತಂಡ: ಕರಣ್ ಲಾಲ್, ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್ ಘರಾಮಿ, ಅನುಸ್ತುಪ್ ಮಜುಂದಾರ್, ಮನೋಜ್ ತಿವಾರಿ (ನಾಯಕ), ಸುವಂಕರ್ ಬಾಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಆಕಾಶ್ ಘಟಕ್, ಪ್ರೀತಮ್ ಚಕ್ರವರ್ತಿ, ಆಕಾಶ್ ದೀಪ್, ಇಶಾನ್ ಪೊರೆಲ್, ಗೀತ್ ಪುರಿ, ಮುಕೇಶ್ ಕುಮಾರ್, , ಸುಮಂತ ಗುಪ್ತಾ, ದುರ್ಗೇಶ್ ದುಬೆ, ಅಂಕಿತ್ ಮಿಶ್ರಾ, ಅಭಿಷೇಕ್ ದಾಸ್, ಸಯಾನ್ ಮೊಂಡಲ್, ಕೌಶಿಕ್ ಘೋಷ್, ರಿಟಿಕ್ ಚಟರ್ಜಿ, ರವಿಕಾಂತ್ ಸಿಂಗ್.

 

 

source https://tv9kannada.com/sports/cricket-news/ranji-trophy-2023-semifinals-teams-and-schedule-kannada-news-zp-au50-514587.html

Leave a Reply

Your email address will not be published. Required fields are marked *