ಹರಿಮತಿ ಚೌಡೇಶ್ವರಿ ದೇವಿ ಜಾತ್ರೆ ಯಶಸ್ವಿ: ದೇವಸ್ಥಾನ ಅಭಿವೃದ್ಧಿಗೆ ಸಂಸದ ಗೋವಿಂದ ಕಾರಜೋಳ ಅನುದಾನದ ಭರವಸೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 13

ಪಟ್ಟಣದ ಮಂಜುನಾಥ ಶಾಲೆಯ ರಸ್ತೆಯ ಹರಿಮತಿ ಚೌಡೇಶ್ವರಿ ದೇವಿಯ ಜೀರ್ಣೋದ್ದಾರ ಟ್ರಸ್ಟ್‍ನಿಂದ ಆಯೋಜಿಸಿದ್ದ ಹೊಳಲ್ಕೆರೆ ಪಟ್ಟಣದ ಶ್ರೀ ಹರಿಮತಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಏ. 6 ಮತ್ತು 7 ರಂದು ನಡೆದಿದ್ದು, ಭಾನುವಾರ ದೇವಾಲಯಕ್ಕೆ ಸಂಸದರಾದ ಗೋವಿಂದ ಕಾರಜೋಳ ಭೇಟಿ ನೀಡಿ ಅಮ್ಮನವರು ಆರ್ಶೀವಾದವನ್ನು ಪಡೆದರು.

ದೇವಿಗೆ ವಿಶೇಷ ಪುಷ್ಪಾಲಂಕಾರ ಸೇವೆ, ವಿವಿಧ ಪೂಜಾ ಕೈಂಕರ್ಯಗಳು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಶಕ್ತಿದೇವತೆ ಹರಿಮತಿ ಚೌಡೇಶ್ವರಿ ದೇವಿ ದುಷ್ಟ ಶಕ್ತಿಗಳಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿ ಬರುವ ಭಕ್ತರಿಂದ ಟ್ರಸ್ಟ್ ಆಗಲಿ, ದೇವಸ್ಥಾನದವರಾಗಲೀ ಹಣ ಪಡೆಯುವುದಿಲ್ಲ. ಇಲ್ಲಿನ ಟ್ರಸ್ಟ್‍ನವರೇ ಹಣವನ್ನು ಹಾಕಿ ದೇವಿ ಜಾತ್ರಾ ಮಹೋತ್ಸವವನ್ನು ನಡೆಸುತ್ತಾರೆ ಮುಂದಿನ ದಿನದಲ್ಲಿ ಈ ದೇವಾಲಯದ ಅಭೀವೃದ್ದಿಗೆ ಸಂಸದರ ಅನುದಾನದಡಿಯಲ್ಲಿ ಆರ್ಥಿಕ ನೆರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಈ ಸಮಯದಲ್ಲಿ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎಂ. ಸತೀಶ್ ಕುಮಾರ್, ಟ್ರಸ್ಟ್ ಸದಸ್ಯರಾದ ಪೂಜಾರ್ ಕಾಳ್ಯನಾಯ್ಕ, ಹೀರಾನಾಯ್ಕ, ಮಂಜುನಾಥ್, ಶಿವಾನಂದಪ್ಪ, ಆನಂದ್‍ಪ್ಪ, ಮಹೇಶ್, ಶ್ರೀಮತಿ ಶೋಭಾ, ಸುಧಾಮಣಿ, ಪರಶುರಾಮ, ಶ್ರೀನಿವಾಸ್, ಶಂಕರನಾಯ್ಕ, ವಿಜಯಕುಮಾರ್, ಪ್ರವೀಣ್‍ನಾಯ್ಕ ತಿಪ್ಪೇಸ್ವಾಮಿ ನಾಯ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *