ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಿರಿಗೆರೆ ಏ.14
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯು ಸಿರಿಗೆರೆಯಲ್ಲಿ ನಡೆಸುತ್ತಿರುವ ಮೈಸೂರು ಬಸವಯ್ಯ ವಸತಿ ಪದವಿ ಕಾಲೇಜಿನಲ್ಲಿ ಮೂರು ವರ್ಷದ ಬಿಎ., ಬಿಎಸ್ಸಿ, ಬಿಕಾಂ, ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುವುದು.
ರಾಜ್ಯದ ಯಾವುದೇ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸಲಾಗುವುದು. ತರಳಬಾಳು ಮಠವು ಸಿರಿಗೆರೆಯಲ್ಲಿ ನಡೆಸುತ್ತಿರುವ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲಾಗುವುದು.
ಪಿಯುಸಿ ನಂತರ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದತ್ತ ಆಕರ್ಷಿತರಾಗಿದ್ದಾರೆ. ಕಲೆ ಮತ್ತು ಮೂಲ ವಿಜ್ಞಾನಗಳ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಂಡಿದ್ದಾರೆ. ಯುವ ಸಮುದಾಯವನ್ನು ಕಲೆ, ವಾಣಿಜ್ಯ ಮತ್ತು ಮೂಲ ವಿಜ್ಞಾನಗಳತ್ತ ಸೆಳೆಯಬೇಕಾಗಿರುವುದರಿಂದ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲವೂ ಉಚಿತವಾಗಿ ಊಟ ಮತ್ತು ವಸತಿ ನೀಡಲು ಮುಂದಾಗಿದೆ.
ಸಂಸ್ಥೆಯವತಿಯಿಂದ ನಡೆಯುತ್ತಿರುವ ಎಂ.ಬಿ.ಆರ್. ಕಾಲೇಜು 1968 ರಿಂದ ಆರಂಭವಾಗಿದೆ. ದಾವಣಗೆರೆ ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಬಿ+ ಮನ್ನಣೆಯನ್ನು ಗಳಿಸಿದೆ.ಕಾಲೇಜಿನಲ್ಲಿ ವಿವಿ. ಮಟ್ಟದ ಅತ್ಯುತ್ತಮ ಗ್ರಂಥಾಲಯ ಸೌಲಭ್ಯವಿದೆ. 20 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಗ್ರಂಥಾಲದಲ್ಲಿವೆ. ಕಾಲೇಜು ವಿದ್ಯಾರ್ಥಿಗಳ ಬಳಕೆಗೆ ಸುಸಜ್ಜಿತವಾದ ಕಂಪ್ಯುಟರ್ ಕೇಂದ್ರ, ಇಂಟರ್‍ನೆಟ್ ಸೌಲಭ್ಯವೂ ಹೊಂದಿದೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ಪ್ರಾಚಾರ್ಯರು, ಎಂ.ಬಿ.ಆರ್. ವಸತಿ ಪದವಿ ಕಾಲೇಜು, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ ಫೋನ್ 7019465953, 6360812536, 91644381615 ಇವರನ್ನು ಸಂಪರ್ಕಿಸಬಹುದು.


