ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 14
ಡಾ,ಬಿ.ಆರ್ ಅಂಬೇಡ್ಕರ್ರವರು ತಮ್ಮ ಬದುಕಿನಲ್ಲಿ ಆಳವಡಿಸಿಕೊಂಡ ತತ್ವ, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಮಂಗಳವಾರ ಎಸ್.ಸಿ. ಮೋರ್ಚಾದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹಾ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಆಶಯಗಳಂತೆ ಅಧಿಕಾರವನ್ನು ನಡೆಸುತ್ತಿದ್ದಾರೆ. ಇದನ್ನು ಅಧಿಕಾರ ಮಾತ್ರವಲ್ಲದೆ ಸಂಘಟನೆಯಲ್ಲಿಯೂ ಸಹಾ ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಸಂಘಟನೆಯ ಎಲ್ಲಾ ಬೂತ್ ಹಾಗೂ ಘಟಕಗಳಲ್ಲಿಯೂ ಸಹಾ ಕಡ್ಡಾಯವಾಗಿ ಎಸ್,ಸಿ, ಎಸ್,ಟಿ ಹಾಗೂ ಓಬಿಸಿ ಸದಸ್ಯರು ಇರುವಂತೆ ನೋಡಿಕೊಳ್ಳಲಾಗಿದೆ. ದೇಶದ ರಾಷ್ಟ್ರಪತಿಗಳಾಗಿ ಈಗ ದ್ರೌಪತಿ ಮುರ್ಮ ಹಾಗೂ ಈ ಹಿಂದೆ ರಾಮನಾಥ್ ಕೊವಿಂದರವರನ್ನು ನೇಮಕ ಮಾಡುವುದರ ಮೂಲಕ ನಮ್ಮ ಪಕ್ಷ ಅವರ ಪರವಾಗಿ ಇದೆ ಎಂದು ಸಾಬಿತು ಮಾಡಿದೆ ಸಂವಿಧಾನವನ್ನು ಬರೀ ಸರ್ಕಾರಿ ಯಂತ್ರದಲ್ಲಿ ಮಾತ್ರವಲ್ಲದೆ ಪಕ್ಷದಲ್ಲಿಯೂ ಸಹಾ ಆಳವಡಿಕೆಯನ್ನು ಮಾಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಲಾಗಿದೆ ಎಂದರು.
ಸಂವಿಧಾನವನ್ನು ಕಾಂಗ್ರೆಸ್ ಪಕ್ಷ ಬರೀ ಪ್ರಚಾರಕ್ಕಾಗಿ ಇಟ್ಟುಕೊಂಡಿದೆ ಆದರ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಆದರೆ ಬಿಜೆಪಿ ಪಕ್ಷ ಸಂವಿಧಾನದ ಆಶಯಗಳನ್ನು ಸರ್ಕಾರದಲ್ಲಿ ಮಾತ್ರವಲ್ಲದೆ ಪಕ್ಷದಲ್ಲಿಯೂ ಸಹಾ ಆಳವಡಿಕೆಯನ್ನು ಮಾಡಲಾಗಿದೆ, ಇದೆ ನಮ್ಮ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಇರುವ ವ್ಯತ್ಯಾಸವಾಗಿದೆ. ದೇಶದ ಎಲ್ಲಾ ಕಡೆಗಳಲ್ಲಿಯೂ ಸಹಾ ನಕಲಿ ಗಾಂಧಿ ಮನೆತನದವರು ತಮ್ಮ ಮನೆಯನದ ಹೆಸರನ್ನು ಇಟ್ಟಿದ್ದಾರೆ ಹೊರೆತು ಎಲ್ಲಿಯೂ ಸಹಾ ಅಂಬೇಡ್ಕರ್ರವರ ಹೆಸರನ್ನು ಇಟ್ಟಿಲ್ಲ ಎಂದು ಆರೋಪಿಸಿದ ಅವರು, ಮುಂದಿನ ದಿನದಲ್ಲಿ ಇವರ ಮೊಮ್ಮಕ್ಕಳ ಹೆಸರನ್ನು ಸಹಾ ಅಧಿಕಾರ ಸಿಕ್ಕರೆ ಇಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದ ಅವರು, ಕಾಂಗ್ರೆಸ್ ಪಕ್ಷ ಪ್ರಚಾರಕ್ಕಾಗಿ ಸಂವಿಧಾನವನ್ನು ದುರಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದ್ದಲ್ಲದೆ ರಾಜ್ಯ ಸರ್ಕಾರದಲ್ಲಿನ ಎಸ್.ಸಿ.ಎಸ್.ಟಿ.ರವರ ಕಲ್ಯಾಣಕ್ಕಾಗಿ ಇಟ್ಟಿದ್ದ ಹಣವನ್ನು ರಾಜ್ಯ ಸರ್ಕಾರ ತನ್ನ ಗ್ಯಾರೆಂಟಿಗಳಿಗೆ ಬಳಕೆ ಮಾಡಿದೆ ಇದರ ಬಗ್ಗೆ ನಮ್ಮ ಪಕ್ಷದ ಕಾರ್ಯ ಕರ್ತರು ಆ ಸಮುದಾಯಕ್ಕೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.
ದಲಿತ ಸಮುದಾಯದಲ್ಲಿನ ಉನ್ನತವಾದ ವ್ಯಕ್ತಿಗಳು ಸಹಾ ತಮ್ಮ ಸಮುದಾಯವನ್ನು ದಾರಿ ತಪ್ಪಿಸುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ಅರಿವು ಸಹಾ ಆ ಸಮುದಾಯಕ್ಕೆ ಇಲ್ಲವಾಗಿದೆ, ಈ ಹಿನ್ನಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಇದರ ಬಗ್ಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ ಈ ಸಮಯದಲ್ಲಿ ಎಸ್.ಸಿ. ಎಸ್.ಟಿ. ಕಾಲೋನಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಅದರಿಂದ ಎಷ್ಟು ಜನರ ಕಲ್ಯಾಣವಾಗಿದೆ ಹಾಗೂ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿತ್ತು ಅದರಲ್ಲಿ ಎಷ್ಟು ಅಭೀವೃದ್ದಿಯಾಗಿದೆ ಎಂಬ ಮಾಹಿತಿನ್ನು ಸಂಗ್ರಹ ಮಾಡಿ ಆ ಸಮುದಾಯಗಳಿಗೆ ನೀಡುವಂತೆ ನವೀನ್ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ, ಇಂದಿನ ದಿನಮಾನದಲ್ಲಿ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡುವುದಕ್ಕಿಂತ ಮುಂಚೆ ಅವರ ತಮ್ಮ ಬದುಕಿನಲ್ಲಿ ಆಳವಡಿಕೆ ಮಾಡಿಕೊಂಡ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಆಳವಡಿಕೆ ಮಾಡಿಕೊಳ್ಳಲಾಗಿದ್ದೇಯೇ ಎಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಬೇಕಿದೆ ಇದರಿಂದ ಜಯಂತಿಗೆ ಒಂದು ಆರ್ಥ ಬರುತ್ತದೆ. ದೇಶದ ಅಭೀವೃದ್ದಿಯನ್ನು ಕಟ್ಟಡ, ರಸ್ತೆ, ಸೇತುವೆಗಳಿಂದ ಆಳೆಯದೆ ಜನರ ಜೀವನ ಮಟ್ಟದ ಸುಧಾರಣೆಯಿಂದ ಅಳೆಯಬೇಕಿದೆ.
ಬಿಜೆಪಿ ಸಂವಿಧಾನ ಅಶಯದಂತೆ ಬೆಳದ ಪಕ್ಷವಾಗಿದೆ. ನಮ್ಮ ಸರ್ಕಾರ ಇದ್ದಾಗ ಎಸ್.ಸಿ. ಎಸ್.ಟಿ.ಯವರಿಗೆ ಮೀಸಲಾತಿಯ ಪ್ರಮಾಣವನ್ನು ಜಾಸ್ತಿ ಮಾಡಲಾಯಿತು, ಆದರೆ ಕಾಂಗ್ರೆಸ್ ಸರ್ಕಾರ ಈ ಸಮುದಾಯದವರಿಗೆ ಒಳ ಮೀಸಲಾತಿಯನ್ನು ನೀಡುವಲ್ಲಿ ಮೀನಾಮೇಷ ಮಾಡುತ್ತಿದೆ. ದಲಿತರನ್ನು ಬಿಜೆಪಿ ಕತ್ತಲಿಂದ ಬೆಳಕಿನಡೆಗೆ ಕರೆದುಕೊಂಡು ಹೋದರೆ ಕಾಂಗ್ರೆಸ್ ಬೆಳಕಿನಿಂದ ಅವರನ್ನು ಕತ್ತಲಿಗೆ ಕರೆದುಕೊಂಡು ಹೋಗುತ್ತದೆ ಎಂದರು.
ಮತ್ತೋರ್ವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆಯನ್ನು ಇಂಧು ಪಕ್ಷದ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಣೆಯನ್ನು ಮಾಡಲಾಗುತ್ತಿದೆ ಮುಂದಿನ 1 ತಿಂಗಳ ಕಾಲ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿಯೂ ಸಹಾ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಗುವುದು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಎಸ್.ಸಿ.ಎಸ್.ಟಿ. ಸಮುದಾಯಕ್ಕೆ ಮಾಡಿದ ದ್ರೋಹವನ್ನು ತಿಳಿಸುವುದರ ಮೂಲಕ ದಲಿತರನ್ನು ಜಾಗೃತರನ್ನಾಗಿ ಮಾಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷರಾದ ಪರಶುರಾಮ್ ವಹಿಸಿದ್ದರು,
ಈ ಸಂಧರ್ಭದಲ್ಲಿ ಬಿಜೆಪಿನ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರಾಧ ಎಸ್.ಕೆ.ಬಸವರಾಜನ್, ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರಿಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ನಗರಾಧ್ಯಕ್ಷ ಲೋಕೇಶ್, ಮಾಜಿ ಕುಡಾ ಅಧ್ಯಕ್ಷ ಸಿದ್ದಾಪುರದ ಸುರೇಶ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸಹಾ ವಕ್ತಾರ ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್, ಕಲ್ಲೇಶಯ್ಯ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಛಲವಾದಿ ತಿಪ್ಪೇಸ್ವಾಮಿ, ಕಲ್ಲೇಶ, ಉಮಾ, ಜಿಲ್ಲಾ ಕಾರ್ಯದರ್ಶಿ ರೇಖಾ, ಬಸಮ್ಮ, ಎಸ್.ಸಿ. ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.


