ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ:
ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ(ಸಿಬಿಎಸ್ಇ) ಹತ್ತನೆ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಶುಚಿತಾ 500 ಕ್ಕೆ 493 ಅಂಕ (98.60) ಗಳನ್ನು ಪಡೆದು ಜಿಲ್ಲೆ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ರಿಷಾನ್ ಅಹಮದ್-94%, ಮನೋಜ್ ಪಿ.ಆರ್.-94 % ಅಂಕಗಳನ್ನು ಪಡೆದಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ ವಿಶಾಲವಾದ ಶಾಲಾ ಸಮುಚ್ಚಯ, ಅತ್ಯಾಧುನಿಕ ಪ್ರಯೋಗಾಲಯ, ಅನುಭವಿ, ನುರಿತ ಶಿಕ್ಷಕ ವೃಂದ ಹಾಗೂ ನಿಖರವಾದ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಸಿಬಿಎಸ್ಇ. ಹತ್ತನೆ ತರಗತಿಯಲ್ಲಿ ಪ್ರಶಂಸನೀಯ ಫಲಿತಾಂಶವನ್ನು ದಾಖಲಿಸಿದೆ. 49 ವಿದ್ಯಾರ್ಥಿಗಳು ಡಿಸ್ಟಿಂಕ್ಷ್ನಲ್ಲಿ ತೇರ್ಗಡೆಯಾಗಿದ್ದಾರೆ.
ವಲಯ ಮಟ್ಟದಲ್ಲಿ ಐದನೆ ಸ್ಥಾನ ಪಡೆದಿದ್ದ ಈ ಶಾಲೆ 2025-26 ನೇ ಸಾಲಿನ ಸಿಬಿಎಸ್ಇ ಹತ್ತನೆ ತರಗತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ಶಿಕ್ಷಕರುಗಳ ಪರಿಶ್ರಮ ಹಾಗೂ ಪೋಷಕರುಗಳ ಸಹಕಾರ ಕಾರಣ. ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಸಾಧನೆ ಗೈದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


