ಶಾಲಿವಾಹನ ಶಕೆ 1949, ಪರಾಭವ ಸಂವತ್ಸರದ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ (ಭಾನುವಾರ) ಈ ದಿನವು ಅನೇಕರಿಗೆ ಶುಭ ತರಲಿದೆ. ಬಹುಕಾಲದ ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಉದ್ಯೋಗ ಮತ್ತು ವಿವಾಹ ಸಿದ್ಧತೆಗಳಿಗೆ ಈ ದಿನ ಉತ್ತಮವಾಗಿದೆ.
ಇಂದಿನ ಪಂಚಾಂಗದ ವಿವರ:ಸಂವತ್ಸರ: ಪರಾಭವ ಸಂವತ್ಸರ, ಶಾಲಿವಾಹನ ಶಕೆ 1949ಆಯನ / ಋತು / ಮಾಸ: ಉತ್ತರಾಯಣ / ವಸಂತ ಋತು / ವೈಶಾಖ ಮಾಸಪಕ್ಷ / ತಿಥಿ / ವಾರ: ಶುಕ್ಲ ಪಕ್ಷ / ದ್ವಿತೀಯಾ ತಿಥಿ / ಭಾನುವಾರನಕ್ಷತ್ರ: ರೋಹಿಣಿಯೋಗ / ಕರಣ: ವಿಷ್ಕಂಭ / ಬಾಲವಸೂರ್ಯೋದಯ: ಬೆಳಿಗ್ಗೆ 06:09ಸೂರ್ಯಾಸ್ತ: ಸಂಜೆ 06:37ರಾಹು ಕಾಲ: ಸಂಜೆ 05:04 ರಿಂದ 06:37 ರವರೆಗೆಯಮಗಂಡ ಕಾಲ: ಮಧ್ಯಾಹ್ನ 12:24 ರಿಂದ 01:57 ರವರೆಗೆಗುಳಿಕ ಕಾಲ: ಮಧ್ಯಾಹ್ನ 03:31 ರಿಂದ 05:04 ರವರೆಗೆ
ಇಂದಿನ ಪಂಚಾಂಗದ ವಿವರ:
- ಸಂವತ್ಸರ: ಪರಾಭವ ಸಂವತ್ಸರ, ಶಾಲಿವಾಹನ ಶಕೆ 1949
- ಆಯನ / ಋತು / ಮಾಸ: ಉತ್ತರಾಯಣ / ವಸಂತ ಋತು / ವೈಶಾಖ ಮಾಸ
- ಪಕ್ಷ / ತಿಥಿ / ವಾರ: ಶುಕ್ಲ ಪಕ್ಷ / ದ್ವಿತೀಯಾ ತಿಥಿ / ಭಾನುವಾರ
- ನಕ್ಷತ್ರ: ರೋಹಿಣಿ
- ಯೋಗ / ಕರಣ: ವಿಷ್ಕಂಭ / ಬಾಲವ
- ಸೂರ್ಯೋದಯ: ಬೆಳಿಗ್ಗೆ 06:09
- ಸೂರ್ಯಾಸ್ತ: ಸಂಜೆ 06:37
- ರಾಹು ಕಾಲ: ಸಂಜೆ 05:04 ರಿಂದ 06:37 ರವರೆಗೆ
- ಯಮಗಂಡ ಕಾಲ: ಮಧ್ಯಾಹ್ನ 12:24 ರಿಂದ 01:57 ರವರೆಗೆ
- ಗುಳಿಕ ಕಾಲ: ಮಧ್ಯಾಹ್ನ 03:31 ರಿಂದ 05:04 ರವರೆಗೆ
ದ್ವಾದಶ ರಾಶಿಗಳ ಇಂದಿನ ಭವಿಷ್ಯ:
ಮೇಷ ರಾಶಿ:
ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿ ವಾದ-ವಿವಾದಗಳಾಗುವ ಸಾಧ್ಯತೆ ಇದೆ. ಆರ್ಥಿಕ ನಷ್ಟದ ಬಗ್ಗೆ ಎಚ್ಚರಿಕೆ ಇರಲಿ. ದೂರದ ಪ್ರಯಾಣಗಳು ಕೊಂಚ ಆತಂಕ ತಂದರೂ, ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿ ಸುಲಭವಾಗಲಿದೆ. ಹೊಸ ಆಸ್ತಿ ಅಥವಾ ಮನೆ ಖರೀದಿಸುವ ಚಿಂತನೆ ನಡೆಸುವಿರಿ. ಅತಿಯಾದ ನಿದ್ರೆ ಹಾಗೂ ಆಲಸ್ಯದಿಂದ ಮನಸ್ಸು ಉದಾಸೀನವಾಗಬಹುದು.
ವೃಷಭ ರಾಶಿ:
ಅಪರಿಚಿತರ ಒಡನಾಟದಿಂದ ಕೊಂಚ ಅಂತರ ಕಾಯ್ದುಕೊಳ್ಳುವುದು ಒಳಿತು. ಸಹೋದರರೊಂದಿಗೆ ಬಾಂಧವ್ಯ ಕಾಪಾಡಿಕೊಳ್ಳಿ. ಕೆಲಸಗಳಲ್ಲಿ ವಿಳಂಬವಾದರೂ, ಉದ್ಯೋಗದಲ್ಲಿ ಬಡ್ತಿ ಮತ್ತು ವಿದೇಶ ಪ್ರಯಾಣದ ಯೋಗವಿದೆ. ನಿಮ್ಮ ಸಾಧನೆಗಳ ಬಗ್ಗೆ ಹೆಚ್ಚು ಕೊಚ್ಚಿಕೊಳ್ಳುವುದು ಬೇಡ, ಅದು ಅಹಂಕಾರದಂತೆ ಬಿಂಬಿತವಾಗಬಹುದು.
ಮಿಥುನ ರಾಶಿ:
ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಅತ್ಯುತ್ತಮ ಫಲಿತಾಂಶ ಒಲಿಯಲಿದೆ. ನೀವು ರೂಪಿಸಿದ ಯೋಜನೆಗಳು ಸಾಕಾರಗೊಳ್ಳುತ್ತವೆ. ಸ್ನೇಹಿತರೊಂದಿಗಿನ ಭೇಟಿಯು ಸಂತಸ ತರಲಿದ್ದು, ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ಕಾದಿದೆ. ಇದ್ದದ್ದನ್ನು ನೇರವಾಗಿ ಹೇಳುವ ನಿಮ್ಮ ಸ್ವಭಾವ ಕೆಲವರಿಗೆ ಬೇಸರ ತರಿಸಬಹುದು.
ಕರ್ಕಾಟಕ ರಾಶಿ:
ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಒಲಿದು ಬರಲಿದೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದ್ದರೂ, ಖರ್ಚುಗಳೂ ಇರಲಿವೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ಪಾಲು ದೊರೆಯುವ ಸಾಧ್ಯತೆಯಿದೆ. ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ. ನಿಮ್ಮ ಸಭ್ಯ ನಡವಳಿಕೆ ಮತ್ತು ಮಾತುಗಾರಿಕೆಯಿಂದ ಕಷ್ಟದ ಕೆಲಸಗಳೂ ಸುಗಮವಾಗಲಿವೆ.
ಸಿಂಹ ರಾಶಿ:
ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆಗಳನ್ನು ಕಾಣಲಿದ್ದೀರಿ. ಮಕ್ಕಳ ಏಳಿಗೆಗಾಗಿ ಶ್ರಮಿಸುವಿರಿ. ಹಣದ ಹರಿವು ಉತ್ತಮವಾಗಿರಲಿದ್ದು, ಸುಲಭ ಆದಾಯ ಬರಲಿದೆ. ಇತರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಿಮ್ಮ ಉಳಿತಾಯವನ್ನು ಬಳಸಬೇಕಾದ ಪರಿಸ್ಥಿತಿ ಎದುರಾಗಬಹುದು. ಅನಗತ್ಯ ಚರ್ಚೆಗಳಿಂದ ದೂರವಿರುವುದು ಉತ್ತಮ.
ಕನ್ಯಾ ರಾಶಿ:
ಕೌಟುಂಬಿಕ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವಿರಿ. ಸಾಲದ ವಿಚಾರಗಳಲ್ಲಿ ನಿಮಗೇ ಜಯ ಸಿಗಲಿದೆ. ಮನೆಯ ಸದಸ್ಯರ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಶಿಸ್ತಿನ ಕೊರತೆಯಿಂದ ಕೆಲಸಗಳಲ್ಲಿ ವಿಘ್ನ ಹಾಗೂ ಅಪಖ್ಯಾತಿ ಬರಬಹುದು, ಹಾಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ವಾಹನ ಸಂಚಾರದಲ್ಲಿ ಕೊಂಚ ಅಡಚಣೆಗಳಾಗಬಹುದು.
ತುಲಾ ರಾಶಿ:
ನಿಮ್ಮ ಉತ್ತಮ ನಡವಳಿಕೆಯು ಇತರರಿಗೆ ಮಾದರಿಯಾಗಲಿದೆ. ಕೈ ಹಾಕಿದ ಬಹುತೇಕ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಹೊಸ ವಾಹನ ಖರೀದಿಸುವ ಯೋಗವಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದರೂ, ಸಾಮಾಜಿಕ ಕಾರ್ಯಗಳಲ್ಲಿ ಕೊಂಚ ಎಚ್ಚರಿಕೆ ಇರಲಿ. ಕಠಿಣ ಶ್ರಮದ ನಡುವೆಯೂ ಕೆಲವರ ಕಹಿ ಮಾತುಗಳನ್ನು ಕೇಳಬೇಕಾಗಬಹುದು.
ವೃಶ್ಚಿಕ ರಾಶಿ:
ಶುಭ ಕಾರ್ಯಗಳಿಗಾಗಿ ನೀವು ಮಾಡುವ ಪ್ರಯತ್ನಗಳು ಫಲ ನೀಡಲಿವೆ. ಬಹಳ ದಿನಗಳಿಂದ ಕಾಡುತ್ತಿದ್ದ ಆಸ್ತಿ ವಿವಾದಗಳಿಗೆ ಇಂದು ತಾರ್ಕಿಕ ಅಂತ್ಯ ಸಿಗಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಜೊತೆ ಆಪ್ತ ಸಮಾಲೋಚನೆ ನಡೆಸುವ ಅವಕಾಶವಿದೆ. ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಕಾಳಜಿ ವಹಿಸಿ.
ಧನು ರಾಶಿ:
ಕುಟುಂಬದಲ್ಲಿ ಹೊಸ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆರ್ಥಿಕ ಅಡಚಣೆ ನಿವಾರಿಸಲು ಸಾಲದ ಮೊರೆ ಹೋಗುವ ಸಾಧ್ಯತೆಯಿದೆ. ಕೆಲಸಗಳಲ್ಲಿ ವಿಳಂಬ ಹಾಗೂ ಅನಿರೀಕ್ಷಿತ ವಾದ-ವಿವಾದಗಳು ಎದುರಾಗಬಹುದು. ಮಕ್ಕಳ ಅತಿಯಾದ ಮಾತು ಮುಜುಗರ ತರಬಹುದು. ಇಂದಿನ ದಿನ ಮಟ್ಟಿಗೆ ನಿಮ್ಮ ಮೌನವೇ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ.
ಮಕರ ರಾಶಿ:
ಕ್ಷಣಿಕ ಕೋಪದಿಂದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಕೌಟುಂಬಿಕ ವಾತಾವರಣದಲ್ಲಿ ಕೊಂಚ ಒತ್ತಡದ ಪರಿಸ್ಥಿತಿ ಇರಬಹುದು. ತಾಳ್ಮೆಯಿಂದ ದಿನದ ಕೆಲಸಗಳನ್ನು ನಿರ್ವಹಿಸಿದರೆ ಎಲ್ಲವೂ ಸುಗಮವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ನಿರೀಕ್ಷೆ ವಿಳಂಬವಾಗಬಹುದು. ಮಹಿಳೆಯರಿಗೆ ಪ್ರಯಾಣದ ವೇಳೆ ಆಯಾಸವಾಗುವ ಸಾಧ್ಯತೆ ಇದೆ.
ಕುಂಭ ರಾಶಿ:
ಕೆಲವು ಪ್ರಮುಖ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಪ್ರಯಾಣದಲ್ಲಿ ಅನಿರೀಕ್ಷಿತ ವಿಘ್ನಗಳಾಗಬಹುದು. ನಿಮ್ಮ ಸಹಜ ಸ್ವಭಾವದಿಂದಲೇ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು, ಆರ್ಥಿಕ ನಿರ್ವಹಣೆಯ ಬಗ್ಗೆ ಚಿಂತನೆ ನಡೆಸುವಿರಿ.
ಮೀನ ರಾಶಿ:
ಉದ್ಯೋಗಿಗಳಿಗೆ ಕಾರ್ಯಕ್ಷೇತ್ರದಲ್ಲಿ ಬಡ್ತಿ ಸಿಗುವ ಯೋಗವಿದೆ. ಇಂದು ಮನಸ್ಸು ಕೊಂಚ ಚಂಚಲವಾಗಿರಬಹುದು. ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ವಾದಕ್ಕಿಳಿಯದಿರಿ, ಮಾತಿನಿಂದಲೇ ಕಲಹಗಳು ಉಂಟಾಗಬಹುದು. ಕೌಟುಂಬಿಕ ವಾತಾವರಣವು ಆನಂದಮಯವಾಗಿರಲಿದ್ದು, ನಿಮ್ಮ ಪಾಡಿಗೆ ನೀವು ಕೆಲಸಗಳಲ್ಲಿ ಮಗ್ನರಾಗಿರುವುದು ಉತ್ತಮ.