ಚಿತ್ರದುರ್ಗ ಮೇ. 2
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ದಲಿತ ವರ್ಗಕ್ಕೆ ಮಾತ್ರ ಅಂಬೇಡ್ಕರ್ ಅವರು ಸೀಮಿತವಾಗದೆ ಎಲ್ಲ ಜಾತಿ ಧರ್ಮದವರಿಗೂ ಅನ್ವಯ ಆಗುವ ರೀತಿಯಲ್ಲಿ ಕಾನೂನುಗಳನ್ನು ರೂಪಿಸಿದ್ದಾರೆ ಎಂದು ಹರಳಯ್ಯ ಸ್ವಾಮೀಜಿಯವರು ತಿಳಿಸಿದರು.


ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಅಂಬೇಡ್ಕರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ದೀನಾ ದಲಿತ ಬಡವ ಬಲ್ಲಿಗ ಎನ್ನದೆ ಎಲ್ಲರಿಗೂ ಒಂದೇ ಎನ್ನುವ ಕಾನೂನ ರೂಪಿಸಿದಂತಹ ಕೀರ್ತಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ, ಅಂಬೇಡ್ಕರ್ ಅಂದರೆ ಒಂದು ಶಕ್ತಿ, ಆ ಶಕ್ತಿಯನ್ನು ಅರ್ಥೈಸಿಕೊಂಡು ಮಾತ್ರ ಜೀವನದಲ್ಲಿ ಮುಂದೆ ಬರುವ ಸಾಧ್ಯವಾಗುತ್ತದೆ, ದಲಿತರ ಉದ್ದಾರ ಕೇವಲ ಶಿಕ್ಷಣದಿಂದ ಮಾತ್ರ ಎನ್ನುವ ಸಂದೇಶವನ್ನು ಸಮುದಾಯಕ್ಕೆ ತಿಳಿಸಿದ್ದಾರೆ ಆದರೆ ಯಥೇಚ್ಛನ ದಿನಗಳಲ್ಲಿ ಯುವ ಸಮುದಾಯ ಓದಿನ ಕಡೆ ಗಮನ ಹರಿಸದೆ ದುಶ್ಚಟಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.


ನ್ಯಾಯವಾದಿ ಅವಿನಾಶ್ ಮಾತನಾಡಿ ಭಾರತದ ಕಟ್ಟಡ ಕಡೆಯ ವ್ಯಕ್ತಿಯು ಕೂಡ ಒಂದೇ ಕಾನೂನು ಒಂದೇ ಸಂವಿಧಾನ ತಪ್ಪುಗಳ ಆಧಾರದ ಮೇಲೆ ಕಾನೂನುಗಳು ಅನ್ವಯ ಆಗುತ್ತವೆ ಯುವ ಸಮುದಾಯ ದುಚ್ಛಟಗಳಿಗೆ ಬಲಿಯಾಗದೆ ಓದಿನ ಕಡೆಗೆ ಗಮನ ಹರಿಸಬೇಕಿದೆ, ಉನ್ನತ ಹುದ್ದೆಗಳನ್ನು ಅಲಂಕರಿಸಿದ ಆಗ ಮಾತ್ರ ಸಮುದಾಯದ ಅಭಿವೃದ್ಧಿ ಗೊಂದಲ ಸಾಧ್ಯವಾಗುತ್ತದೆ ಎಂದು ತಿಳಿಸಿ ಅಂಬೇಡ್ಕರ್ ಅವರು ರಚಿಸಿರುವಂತಹ ಸಂವಿಧಾನದ ಮಹತ್ವದ ಅಂಶಗಳನ್ನು ಪ್ರತಿಯೊಬ್ಬ ನಾಗರಿಕನು ಓದಬೇಕು ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಿಕ್ಷಕ ಶಿವಣ್ಣ ಮಾತನಾಡಿ ಸ್ವತಂತ್ರ ಪೂರ್ವ ದಿನಗಳಲ್ಲಿ ದಲಿತರಿಗಿದ್ದ ಸ್ಥಾನಮಾನದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ನಾವು ನೋಡಿದ್ದೇವೆ, ಪ್ರಸ್ತುತ ದಿನಮಾನಗಳಲ್ಲೂ ಕೂಡ ಇಂತಹ ಕೆಟ್ಟ ಮನಸ್ಥಿತಿಯ ವ್ಯವಸ್ಥೆಯನ್ನು ಕೆಲವು ಗ್ರಾಮ ಪ್ರದೇಶಗಳಲ್ಲಿ ನೋಡುತ್ತಿದ್ದೇವೆ, ಹಿಂದೂಗೂ ಸಹ ಕೆಲವು ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ಕೆರೆಗಳಿಗೆ ನಿರ್ಬಂಧವನ್ನು ಹೇರಲಾಗಿದೆ, ಸಮಾಜದ ಇವುಗಳನ್ನು ಕಂಡರೂ ಸಹ ಕಣ್ಣು ಮುಚ್ಚಿಕೊಳ್ಳುತ್ತಿರುವಂತಹ ಪ್ರಸಂಗಗಳು ಎದುರಾಗಿವೆ. ದಲಿತರ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯಗಳು ಅದೆಷ್ಟು ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚು ವಾಗಿದೆ ಪ್ರಸ್ತುತ ದಿನಮಾನಗಳಲ್ಲಿ ಕಾನೂನು ಕಟ್ಟಳೆಗಳು ಕಠಿಣವಾಗಿದ್ದರು ಸಹ ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಲೇ ಇವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರಗಳು ಮಾಡಬೇಕಿದೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಸವನಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕರ ಬಳಗದ ಅಧ್ಯಕ್ಷರಾದ ಅನುಷ್, ಜಯಣ್ಣ, ರಾಜಣ್ಣ, ಸುರೇಶ್, ಕೇಶವಮೂರ್ತಿ, ಹನುಮಂತಪ್ಪ, ಕೇಶವ ತಿಪ್ಪಯ್ಯ, ಪ್ರವೀಣ, ಚಿದಾನಂದ ಹಾಗೂ ಇತರು ಇದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.