ಚಿತ್ರದುರ್ಗ ಮೇ-2: ಜಗತ್ತಿಗೆ ಗೌತಮಬುದ್ಧ ಶಾಂತಿಯನ್ನು ಬೋಧಿಸಿದರು ಮತ್ತು ಎಲ್ಲರೂ ಕೂಡ ನೆಮ್ಮದಿಯ ಬದುಕು ನಡೆಸುವಂತೆ ಪ್ರೇರೇಪಣೆ ಮಾಡಿದರು ಎಂದು ದಲಿತ ಮುಖಂಡ ಬಾಳೇಕಾಯಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿ ಇಂಡಸ್ಟಿçಯಲ್ ಏರಿಯಾ ಸಮೀಪ ಹಮ್ಮಿಕೊಳ್ಳಲಾಗಿದ್ದು ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗೌತಮಬುದ್ಧ ಅಷ್ಟ ಮಾರ್ಗಗಳನ್ನು ತನ್ನ ಬೆಂಬಲಿಗರಿಗೆ ಬೋಧಿಸಿದ್ದು ಅಷ್ಟೇ ಅಲ್ಲದೇ ಇಡೀ ಜಗತ್ತು ಶಾಂತಿಯಿಂದ ಬದುಕುವಂತೆ ಸಲಹೆ ನೀಡಿದರು. ಜಗತ್ತಿಗೆ ಬೇಕಿರುವುದು ಶಾಂತಿ ಹೊರತು ಯುದ್ಧವಲ್ಲ ಎಂದು ಹೇಳಿದರು.


ಮೌಢ್ಯ, ಕಂದಾಚಾರ, ಅಸಮಾನತೆ, ತಾರತಮ್ಯ ನೀತಿಗಳ ವಿರುದ್ಧ ಭಗವಾನ್ ಗೌತಮಬುದ್ಧ ಜಾಗೃತಿ ಮೂಡಿಸುವ ಮೂಲಕ ಜಗತ್ತಿನಲ್ಲಿ ಶಾಂತಿ ನಿರ್ಮಾಣದಿಂದ ಸಹಬಾಳ್ವೆ ಮತ್ತು ಸೌಹಾರ್ದತೆಯ ಬದುಕು ನಡೆಸಲು ಸಾಧ್ಯವೆಂಬ ಅಂಶವನ್ನು ಆ ಕಾಲಘಟ್ಟದಲ್ಲಿಯೇ ಮನವರಿಕೆ ಮಾಡಿಕೊಂಡಿದ್ದರು.


ನದಿ ನೀರಿನ ವಿವಾದವೊಂದಕ್ಕೆ ತೆರೆಯೆಳೆಯಲು ಮಹಾಪರಿತ್ಯಾಗದ ಮಾರ್ಗವನ್ನು ಕಂಡುಕೊAಡಿದ್ದ ಗೌತಮ ಬುದ್ಧ ಸಂಘರ್ಷವನ್ನು ಕೊನೆಗಾಣಿಸಲು ತಾನು ಕಂಡುಕೊAಡ ಮಾರ್ಗ ಸನ್ಯಾಸತ್ವ. ಆ ಮೂಲಕವಾಗಿ ಜಗತ್ತಿನ ಶಾಂತಿಗಾಗಿ ಹಗಲಿರುಳು ದುಡಿದು ಮನುಕುಲದ ಶಾಂತಿ ಮತ್ತು ಉದ್ಧಾರಕ್ಕೆ ಶ್ರಮಿಸಿದವರು ಗೌತಮಬುದ್ಧರು ಎಂದು ಹೇಳಿದರು.
ಶೋಷಿತ ದಲಿತ ನಾಗ ಸಮುದಾಯದ ಐಕ್ಯತೆಗಾಗಿ ಮನುಕುಲವನ್ನು ಒಂದು ಗೂಡಿಸಲು ಅಪಾರವಾಗಿ ಶ್ರಮಿಸಿದವರು ಬುದ್ಧ ಗುರು. ಆ ಕಾರಣಕ್ಕಾಗಿಯೇ 2885 ವರ್ಷಗಳ ಹತ್ತಿರ ಆಗುತ್ತಾ ಬಂದರು, ಬುದ್ಧ ಇನ್ನೂ ಕೂಡ ನಮ್ಮ ನಡುವೆ ಜೀವಂತವಾಗಿದ್ದರೆ ಎಂದು ಬಾಳೇಕಾಯಿ ಶ್ರೀನಿವಾಸ್ ಹೇಳಿದರು.
ದಲಿತ ಮುಖಂಡ ಕೆಳಗೋಟೆ ರಾಜಣ್ಣ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ಧನನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಅವರ ಜೀವಿತಾವಧಿಯಲ್ಲಿಯೇ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುವ ಮೂಲಕ ಮಾನವೀಯ ಧರ್ಮವೊಂದನ್ನು ಎತ್ತಿ ಹಿಡಿದಿದ್ದು, ಪ್ರತಿಯೊಬ್ಬ ದಲಿತರು ಕೂಡ ಇಂದ ಬುದ್ಧ ಧರ್ಮದ ಕಡೆಗೆ ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎಂ.ಎಸ್.) ಬಣದ ರಾಜ್ಯಾಧ್ಯಕ್ಷ ಕುಂಚಿಗನಾಳ್ ಮಹಾಲಿಂಗಪ್ಪ ಮಾತನಾಡಿ, ಹಿಂದೂ ಧರ್ಮ, ಜಾತಿಯತೆ, ಮತಿಯವಾದ, ಅಸ್ಪೃಶ್ಯತಾ ಆಚರಣೆ, ಮೇಲ್ವರ್ಗ, ಕೀಳ್ವರ್ಗ ಎಂಬ ಅಸಮಾನತೆಯನ್ನು ತೊಡೆದುಹಾಕಲು ಪ್ರತಿಯೊಬ್ಬರು ಬೌದ್ಧ ಧರ್ಮದ ಕಡೆಗೆ ಪಯಣಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಶ್ರೀಮತಿ ಕವಿತಾ ಶ್ರೀನಿವಾಸ, ಸುಬಾನ್ವುಲ್ಲಾ, ಕಾಮ್ರಾನ್ ಅಲಿ, ಅರ್ಫನ್ ಅಲಿ, ಸಗೀರ್, ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ದಲಿತ ಮುಖಂಡರು ಮತ್ತು ದಲಿತ ಸಮುದಾಯದವರು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಗವಾನ್ ಬುದ್ಧನ ಕೃಪೆಗೆ ಪಾತ್ರರಾದರು.