Daily Horoscope, 13 May : ಮೇಷಕ್ಕೆ ಹೊಸ ಅವಕಾಶ, ಕನ್ಯಾ ರಾಶಿಗೆ ಶುಭ ಸುದ್ದಿ; ನಿಮ್ಮ ರಾಶಿಗೆ ಏನಿದೆ?

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಬುಧವಾರದಂದು ಗ್ರಹಗತಿಗಳ ಸಂಚಾರವು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪ್ರಭಾವವನ್ನು ಬೀರಲಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಆದಾಯದ ಮೂಲಗಳು ಗೋಚರಿಸಿದರೂ, ಕೆಲವರಿಗೆ ಶತ್ರುಬಾಧೆ, ಕಾನೂನು ತೊಡಕುಗಳು ಅಥವಾ ಮಾನಸಿಕ ಚಂಚಲತೆ ಎದುರಾಗುವ ಸಾಧ್ಯತೆಗಳಿವೆ. ಹಾಗಾದರೆ ನಿಮ್ಮ ರಾಶಿಯ ಇಂದಿನ ಭವಿಷ್ಯವೇನು? ಇಲ್ಲಿದೆ ವಿವರ.

ಇಂದಿನ ಪಂಚಾಂಗ (13 ಮೇ):

  • ಶಕೆ & ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
  • ಅಯನ & ಋತು: ಉತ್ತರಾಯಣ, ವಸಂತ ಋತು
  • ಮಾಸ: ವೈಶಾಖ (ಚಾಂದ್ರಮಾನ), ಮೇಷ (ಸೌರಮಾನ)
  • ಪಕ್ಷ & ತಿಥಿ: ಕೃಷ್ಣ ಪಕ್ಷ, ದ್ವಾದಶೀ
  • ವಾರ: ಬುಧವಾರ
  • ನಕ್ಷತ್ರ: ಉತ್ತರಾಭಾದ್ರ (ಮಹಾನಕ್ಷತ್ರ: ಕೃತ್ತಿಕಾ)
  • ಯೋಗ & ಕರಣ: ವಿಷ್ಕಂಭ ಯೋಗ, ಕೌಲವ ಕರಣ
  • ಸೂರ್ಯೋದಯ & ಸೂರ್ಯಾಸ್ತ: ಬೆಳಿಗ್ಗೆ 05:59 ಕ್ಕೆ, ಸಂಜೆ 06:42 ಕ್ಕೆ.

ಇಂದಿನ ಶುಭಾಶುಭ ಕಾಲಗಳು:

  • ರಾಹು ಕಾಲ: ಮಧ್ಯಾಹ್ನ 12:31 ರಿಂದ 01:56 ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 07:34 ರಿಂದ 09:10 ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 10:45 ರಿಂದ 12:21 ರವರೆಗೆ

ಮೇಷ ರಾಶಿ (Aries) ನಿಮ್ಮ ಪ್ರಾಮಾಣಿಕತೆ ಮತ್ತು ಶ್ರದ್ಧೆಗೆ ಇಂದು ಮನ್ನಣೆ ಸಿಗಲಿದೆ. ವೃತ್ತಿಕ್ಷೇತ್ರದಲ್ಲಿ ಸಣ್ಣಪುಟ್ಟ ವಿಳಂಬಗಳಾದರೂ ತಾಳ್ಮೆ ಕಳೆದುಕೊಳ್ಳದಿರಿ. ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ನಿಮ್ಮ ವೈಯಕ್ತಿಕ ಕೆಲಸಗಳನ್ನು ಬೇರೆಯವರ ಮೇಲೆ ಅವಲಂಬಿಸದೆ ನೀವೇ ಪೂರ್ಣಗೊಳಿಸುವುದು ಒಳಿತು. ಹೊಸ ವಿಷಯಗಳನ್ನು ಕಲಿಯುವ ಹಂಬಲ ಹೆಚ್ಚಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಎದುರಾಗುವ ವಿಘ್ನಗಳನ್ನು ಮೆಟ್ಟಿ ನಿಂತು ಮುನ್ನಡೆಯುವಿರಿ.

ವೃಷಭ ರಾಶಿ (Taurus) ಇಂದು ಆರ್ಥಿಕ ಸ್ಥಿತಿ ಭದ್ರವಾಗಿರಲಿದೆ. ಮಾನಸಿಕ ನೆಮ್ಮದಿ ನೀಡುವ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ಸ್ನೇಹಿತರ ಪ್ರೇರಣೆ ನಿಮಗೆ ಸ್ಫೂರ್ತಿ ನೀಡಲಿದೆ. ಯಾವುದೇ ಸಮಸ್ಯೆಯಿದ್ದರೂ ಎಲ್ಲಾ ಆಯ್ಕೆಗಳನ್ನು ಬಳಸಿ ಪರಿಹರಿಸಿಕೊಳ್ಳುವಿರಿ. ನಿಮ್ಮ ಸುತ್ತಲಿನ ಬದಲಾವಣೆಗಳು ನಿಮಗೆ ಅನುಕೂಲಕರವಾಗಿವೆ. ಒತ್ತಡಕ್ಕೆ ಒಳಗಾಗದೆ, ಸ್ವತಂತ್ರವಾಗಿ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ.

ಮಿಥುನ ರಾಶಿ (Gemini) ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಕೈಸೇರುವ ಯೋಗವಿದೆ. ಆದಾಯ ಉತ್ತಮವಾಗಿದ್ದರೂ, ಅದಕ್ಕಾಗಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಸಣ್ಣಪುಟ್ಟ ಆರ್ಥಿಕ ಕಿರಿಕಿರಿಗಳು ಎದುರಾದರೂ ತಾಳ್ಮೆಯಿಂದಿರಿ. ನಿಮ್ಮ ಮಾತುಗಳು ಇಂದು ಹೆಚ್ಚು ಪ್ರಭಾವಶಾಲಿಯಾಗಿರಲಿದ್ದು, ಜವಾಬ್ದಾರಿಯಿಂದ ಮಾತನಾಡಿ. ಶತ್ರುಗಳ ತಂತ್ರಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ತಾಕತ್ತು ನಿಮ್ಮಲ್ಲಿದೆ.

ಕರ್ಕಾಟಕ ರಾಶಿ (Cancer) ನಿಮ್ಮ ಮೇಲಿದ್ದ ಅಪನಂಬಿಕೆಗಳನ್ನು ನಿವಾರಿಸಲು ಇಂದು ಪ್ರಯತ್ನಿಸುವಿರಿ. ಕೆಲಸದ ಒತ್ತಡ ಹೆಚ್ಚಿದ್ದರೂ, ನಿಮ್ಮ ಶ್ರದ್ಧೆಯಿಂದ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವಿರಿ. ಇದು ನಿಮ್ಮ ತಾಳ್ಮೆಯ ಪರೀಕ್ಷೆಯ ದಿನವೂ ಹೌದು. ಆರ್ಥಿಕ ವಿಚಾರಗಳಲ್ಲಿ ಜಾಣ್ಮೆಯ ನಿರ್ಧಾರ ಅಗತ್ಯ. ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸಿ. ಇತರರಿಂದ ಹೆಚ್ಚೇನನ್ನೂ ನಿರೀಕ್ಷಿಸದಿರುವುದು ಉತ್ತಮ.

ಸಿಂಹ ರಾಶಿ (Leo) ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದ್ದು, ಕುಟುಂಬದೊಡನೆ ಬಾಂಧವ್ಯ ವೃದ್ಧಿಯಾಗಲಿದೆ. ನಿಮ್ಮ ಆತ್ಮವಿಶ್ವಾಸದ ಮಾತುಗಳೇ ಪ್ರಗತಿಗೆ ದಾರಿದೀಪ. ಸ್ನೇಹಿತರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಜನಸಂದಣಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಬಯಸುವ ನೀವು, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಕನ್ಯಾ ರಾಶಿ (Virgo) ಉದ್ಯೋಗಾಕಾಂಕ್ಷಿಗಳಿಗೆ ಇಂದು ಹೊಸ ಅವಕಾಶಗಳು ಒದಗಿಬರಲಿವೆ. ವಿದ್ಯಾರ್ಥಿಗಳಲ್ಲಿ ಕೊಂಚ ಗೊಂದಲಗಳಿರಬಹುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಳೆಯ ವ್ಯವಹಾರಗಳು ಯಶಸ್ವಿಯಾಗಿ ಇತ್ಯರ್ಥವಾಗಲಿವೆ. ಸಣ್ಣ ಜವಾಬ್ದಾರಿಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ವಿದೇಶಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಅನಿಶ್ಚಿತತೆ ಕಾಡಬಹುದು.

ತುಲಾ ರಾಶಿ (Libra) ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಆರಂಭದಲ್ಲೇ ಬಗೆಹರಿಸಿಕೊಳ್ಳುವುದು ಜಾಣತನ. ಯೋಜನೆಗಳು ನಿಧಾನಗತಿಯಲ್ಲಿ ಸಾಗಿದರೂ ಆತಂಕ ಬೇಡ. ಹಿರಿಯರ ಮಾರ್ಗದರ್ಶನ ನಿಮಗೆ ದಾರಿದೀಪವಾಗಲಿದೆ. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಹಳೆಯ ಸ್ನೇಹಿತರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ ರಾಶಿ (Scorpio) ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಯಂತ್ರೋಪಕರಣಗಳನ್ನು ಬಳಸುವಾಗ ಎಚ್ಚರಿಕೆ ಇರಲಿ. ಅನಗತ್ಯ ಪ್ರಯಾಣದಿಂದ ಆಯಾಸ ಅಥವಾ ನಿರಾಸೆಯಾಗಬಹುದು. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ. ಕಚೇರಿಯ ಒತ್ತಡವನ್ನು ಮನೆಗೆ ತಂದು ಸಂಗಾತಿಯೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಉತ್ಸಾಹದಿಂದ ದಿನದ ಕೆಲಸಗಳನ್ನು ಆರಂಭಿಸಿ.

ಧನು ರಾಶಿ (Sagittarius) ನನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಮರುಜೀವ ಸಿಗಲಿದ್ದು, ಪ್ರಗತಿ ಕಾಣುವಿರಿ. ಆರ್ಥಿಕ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಸೃಜನಶೀಲ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸಣ್ಣ ಪ್ರಮಾಣದ ಆರ್ಥಿಕ ನಷ್ಟದ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ. ಮಕ್ಕಳ ಸಾಧನೆ ಪೋಷಕರಿಗೆ ನೆಮ್ಮದಿ ತರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ.

ಮಕರ ರಾಶಿ (Makara) ಹಳೆಯ ನೋವುಗಳನ್ನು ಮರೆತು ಹೊಸ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ. ಇಂದು ಮನಸ್ಸು ಹಗುರಾಗಿರಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸ್ನೇಹಿತರೊಂದಿಗೆ ವಾಗ್ವಾದ ನಡೆಯದಂತೆ ಎಚ್ಚರಿಕೆ ವಹಿಸಿ. ಶಿಕ್ಷಕ ವೃತ್ತಿಯಲ್ಲಿರುವವರಿಗೆ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಅಥವಾ ಶುಭ ಸುದ್ದಿಯ ನಿರೀಕ್ಷೆ ಇದೆ.

ಕುಂಭ ರಾಶಿ (Aquarius) ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ವೃತ್ತಿಜೀವನದಲ್ಲಿ ಒತ್ತಡ ಕಡಿಮೆಯಾಗಲಿದ್ದು, ಹೊಸ ಗುರಿಗಳನ್ನು ನಿರ್ಧರಿಸಲು ಇದು ಸಕಾಲ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಂಗಾತಿಯ ಸಲಹೆಗಳಿಗೆ ಬೆಲೆ ಕೊಡುವುದು ಒಳಿತು. ಆಸ್ತಿ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸುವುದು ಉತ್ತಮ. ಬಂಧುಗಳ ಒಡನಾಟ ಹಿತವೆನಿಸಲಿದೆ.

ಮೀನ ರಾಶಿ (Pisces) ವೃತ್ತಿಕ್ಷೇತ್ರದಲ್ಲಿ ನಿಮ್ಮ ಕೌಶಲ್ಯ ಪ್ರಶಂಸೆಗೆ ಪಾತ್ರವಾಗಲಿದ್ದು, ಲೀಲಾಜಾಲವಾಗಿ ಕೆಲಸ ಮುಗಿಸುವಿರಿ. ಪ್ರಯಾಣದ ಯೋಗವಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ ನಿರೀಕ್ಷಿಸಬಹುದು. ದೇವರ ಮೇಲಿನ ಭಕ್ತಿ ನಿಮ್ಮ ಕೆಲಸಗಳನ್ನು ಸುಗಮಗೊಳಿಸಲಿದೆ.

Leave a Reply

Your email address will not be published. Required fields are marked *