ಚಿತ್ರದುರ್ಗ ಮೇ. 15:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕರ್ನಾಟಕ ರಾಜ್ಯ ನಿರ್ಮಾಣ ಕಾರ್ಮಿಕರ ಕೇಂದ್ರ ಒಕ್ಕೂಟ ಚಿತ್ರದುರ್ಗ ಜಿಲ್ಲಾ ಸಮಿತಿವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಮೇ. 19ರ ಮಂಗಳವಾರ ಎಸ್.ಆರ್.ಬಿ.ಎಂ,ಎಸ್.ರೋಟರಿ ಭಾಲಭವನ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಗಣೇಶ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕರಾಧ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಎಸ್.ಸಿ. ಡಬ್ಲೂ.ಸಿ.ಯು.ನ ಜಿಲ್ಲಾಧ್ಯಕ್ಷರಾದ ಡಿ.ಮಲ್ಲೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಗೋವಿಂದ ಎಂ.ಕಾರಜೋಳ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿಸಿ. ಜಿಲ್ಲಾಧ್ಯಕ್ಷರಾದ ತಾಜ್‍ಪೀರ್, ಜಿ.ಪಂ. ಮಾಜಿ ಅಧ್ಯಕ್ಷರು ಹಾಗು ಬಿ.ಜೆ.ಪಿ. ಮುಖಂಡರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ನಗರಸಭಾ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಬಿ.ಜೆ.ಪಿ ಮುಖಂಡರು ಹಾಗೂ ಉದ್ಯಮಿಗಳಾದ ಅನಿತ್‍ಕುಮಾರ್, ಕ್ರಷರ್ ಮಾಲೀಕರಾದ ಡಿ.ಆರ್.ಗುರುರಾಜ್, ಮೆದೇಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ನಿರಂಜನ್, ಕಾರ್ಮಿಕಅಧಿಕಾರಿ ಅನಿಲ್‍ಬಾಲಚಂದ್ರ ಬಗಟಿ, ಕಾರ್ಮಿಕರ ನಿರೀಕ್ಷಕರಾದ ಪಿ.ಭೀಮೇಶ್, ಕೆ.ಎಸ್.ಸಿ.ಡಬ್ಲ್ಯೂ.ಸಿ.ಯು.ನ ರಾಜ್ಯಾಧ್ಯಕ್ಷರಾದ ಎನ್.ಪಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೀಲಾವತಿ, ರಾಜ್ಯ ಸಹಕಾರ್ಯದರ್ಶಿ, ರಫೀ ಅಹಮ್ಮದ್, ಸೇರಿದಂತೆ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ, ಯೋಬಳಿ ಸಮಿತಿ. ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

