ಚಿತ್ರದುರ್ಗ ಮೇ. 16
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರೋಟರಿ ಕ್ಲಬ್,ವಾಸವಿಕ್ಲಬ್, ರೋಟ್ರಾಕ್ಟ್ಕ್ಲಬ್ ಹಾಗೂ ವಾಸವಿ ರಕ್ತ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಎಸ್ ಆರ್ ಬಿ ಎಂ ಎಸ್ ರೋಟರಿ ಬಾಲಭವನದಲ್ಲಿ .ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದ ವಾಸವಿ ರಕ್ತ ಕೇಂದ್ರದ ಡಾ. ಶ್ರೀನಿವಾಸ್ ಶೆಟ್ಟಿ ಮಾತನಾಡಿ, ರಕ್ತ ದೇವರು ನೀಡಿದ ವರ ಇದನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ ಅಲ್ಲದೆ ಯಾವುದೇ ಪ್ರಾಣಿ, ಪಕ್ಷಿಗಳಿಂದ ರಕ್ತವನ್ನು ತೆಗೆದು ಮಾನವನಿಗೆ ನೀಡಲು ಸಾಧ್ಯವಿಲ್ಲ ಮಾನವ ರಕ್ತವನ್ನು ಮಾನವನಿಗೆ ಮಾತ್ರ ನೀಡಬಹುದಾಗಿದೆ, ಒಬ್ಬರು ರಕ್ತವನ್ನು ದಾನ ಮಾಡಿದರೆ ಅದರಿಂದ ನಾಲ್ಕು ಜನರ ಜೀವವನ್ನು ಕಾಪಾಡ ಬಹುದಾಗಿದೆ, ಅಪಘಾತ, ಹೆರಿಗೆ, ಆಪರೇಷನ್ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತದೆ ಈ ಹಿನ್ನಲೆಯಲ್ಲಿ ಜನತೆ ಸ್ವಯಂ ಆಗಿ ಈ ರೀತಿಯಾದ ರಕ್ತ ದಾನ ಶಿಬಿರದಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡಬೇಕಿದೆ ಈ ರೀತಿಯಾಗಿ ದಾನ ಮಾಡಿದ ರಕ್ತ ಮುಂದಿನ ಮೂರು ತಿಂಗಳಲ್ಲಿ ನಮ್ಮ ದೇಹದಲ್ಲಿ ಸಂಗ್ರಹವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷರಾದ ಭಾಗ್ಯಮೂರ್ತಿ, ವಾಸವಿ ಕ್ಲಬ್ನ ಅಧ್ಯಕ್ಷರಾದ ರಶ್ಮಿ ಹರೀಶ್, ರೋಟ್ರಾಕ್ಟ್ ಅಧ್ಯಕ್ಷರಾದ ಚಿನ್ಮಯ್, ಮತ್ತು ವಾಸವಿ ಕ್ಲಬ್ನ ಹಾಲಿ ಜಾಯಿಂಟ್ ಕ್ಯಾಬಿನೆಟ್ ಸೆಕ್ರೆಟರಿ ಎ. ಆರ್. ಲಕ್ಷ್ಮಣ್ ಎಸ್.ವಿರೇಶ್, ವೀರಭದ್ರ ಸ್ವಾಮಿ,ಮತ್ತು ಎಲ್ಲಾ ಸಂಸ್ಥೆಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

