ಚಿತ್ರದುರ್ಗ ಮೇ. 16
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಇಂದಿನ ದಿನಮಾನದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ಎಲ್ಲರು ಸಹಾ ಮುಂದಾಗಬೇಕಿದೆ, ಸಂವಿಧಾನದಲ್ಲಿ ಇವರ ರಕ್ಷಣೆ ಬಗ್ಗೆ ಕಾನೂನುಗಳು ಇದ್ದರೂ ಸಹಾ ಲಿಂಗ ತಾರತಮ್ಯವನ್ನು ನೋಡುತ್ತಿದ್ದೇವೆ ಎಂದು ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಕುಪತಿಗಳಾದ ಪ್ರೊ. (ಡಾ.) ಸಿ. ಬಸವರಾಜು ತಿಳಿಸಿದರು.

ನಗರದ ಸರಸ್ವತಿ ಎಜುಕೇಶನ್ ಸೊಸೈಟಿ, ಸರಸ್ವತಿ ಕಾನೂನು ಕಾಲೇಜು ಆಶ್ರಯದಲ್ಲಿ ಶನಿವಾರ ಕಾಲೇಜಿನ ಡೈಮಂಡ್ ಜ್ಯೂಬಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಲಿಂಗ ಆಧಾರಿತ ಹಿಂಸಾಚಾರವನ್ನು ಎದುರಿಸು ವುದು: ಸುರಕ್ಷತೆ ಮತ್ತು ನ್ಯಾಯಕ್ಕಾಗಿ ತಂತ್ರಗಳು” ಕುರಿತು ಒಂದು ದಿನದ ಬಹು-ಶಿಸ್ತಿನ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಸಂವಿಧಾನ ಬಂದ 76 ವರ್ಷವಾಗಿದೆ, ಇಷ್ಠಾದರೂ ಸಹಾ ನಮ್ಮಲ್ಲಿ ಹಲವಾರು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇದರಲ್ಲಿ ಗಂಡು, ಹೆಣ್ಣು ಎಂಬ ಲಿಂಗ ತಾರತಮ್ಯವನ್ನು ಎದುರಿಸಲಾಗುತ್ತಿದೆ. ಇದಕ್ಕೆ ಇಷ್ಟು ವರ್ಷವಾದರೂ ಸಹಾ ನ್ಯಾಯ ಸಿಕ್ಕಿಲ್ಲ, ನಮ್ಮ ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿದೆ. ಇದು ನಮ್ಮ ರಾಜ್ಯ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹಾ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಇಂದಿಗೂ ಸಹಾ ನಮ್ಮಲ್ಲಿ ಲಿಂಗ ತಾರತಮ್ಯ ಹಾಗೂ ಅಸ್ಪøಶ್ಯತೆಯ ಬಗ್ಗೆ ನೋಡುತ್ತಿದ್ದೇವೆ ಎಂದರು.
ಇಂದಿನ ದಿನಮಾನದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿ ಕಾಣಲಾಗುತ್ತಿದೆ, ಇಲ್ಲಿ ಸಮಾನತೆಯನ್ನು ಕಾಣುತ್ತಿಲ್ಲ, ನಮ್ಮ ಸಂವಿಧಾನದಲ್ಲಿ ಎಲ್ಲರು ಸಮಾನರು ಎಂದು ಹೇಳಲಾಗುತ್ತಿದೆ. ಸಂವಿಧಾನದಲ್ಲಿ ಲಿಂಗ ತಾರತಮ್ಯದ ಬಗ್ಗೆ ಹೇಳಲಾಗಿ ಅದರ ನಿವಾರಣೆಗೆ ಕಾನೂನು ಮಾಡಲಾಗಿದೆ ಆದರೆ ಅದು ನಮ್ಮ ಸಮಾಜದಲ್ಲಿ ಇದುವರೆವಿಗೂ ಜಾರಿಯಾಗಿಲ್ಲ, ನಮ್ಮಲ್ಲಿ ಲಿಂಗದ ಬಗ್ಗೆ ಲಿಂಗ ತಾರತಮ್ಯ ಮಾಡುವುದು ಕಾಣಲಾಗುತ್ತಿದೆ. ಸಮಾಜದಲ್ಲಿ ಎಲ್ಲರು ಸಹಾ ನಮ್ಮ ಸಂಸ್ಕøತಿಯ ಬಗ್ಗೆ ತಿಳಿದುಕೊಳ್ಳುತ್ತೇವೆ, ಅದರೆ ಇಲ್ಲಿಯೂ ಸಹಾ ಲಿಂಗ ತಾರತಮ್ಯವಾಗುತ್ತಿರುವುದು ಕಾಣಬಹುದಾಗಿದೆ. ಎಂದು ತಿಳಿಸಿದರು.
ಲಿಂಗ ತಾರತಮ್ಯದ ಬಗ್ಗೆ ಎಲ್ಲರು ಸಹಾ ಹೋರಾಟವನ್ನು ಮಾಡಬೇಕಿದೆ, ಅವರಿಗೆ ಸಮಾನತೆ, ನ್ಯಾಯವನ್ನು ಕೂಡಿಸುವಲ್ಲಿ ಮುಂದಾಗಬೇಕಿದೆ, ಮಹಿಳೆಯರು ಮತ್ತು ಮಕ್ಕಳಲ್ಲಿ ತಾರತಮ್ಯವನ್ನು ಕಾಣಲಾಗುತ್ತಿದೆ ಇದನ್ನು ಹೋಗಲಾಡಿಸಬೇಕಿದೆ. ಮಹಿಳೆಯ ಹಕ್ಕುಗಳನ್ನು ನಾಶ ಮಾಡಿ ಅವರನ್ನು ಕೀಳಾಗಿ ಕಾಣುವುದನ್ನು ನೋಡಬಹುದಾಗಿದೆ. ಮಹಿಳೆ ನಮಗೆ ತಾಯಿಯಾಗಿ, ಮಗಳಾಗಿ, ಅಕ್ಕ, ತಂಗಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ ನಮ್ಮ ಜೊತೆಯಲ್ಲಿ ಇದ್ದಾರೆ. ಇವರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ. ಕಾನೂನು ವಿದ್ಯಾರ್ಥಿಗಳಾದ ನೀವುಗಳು ಲಿಂಗ ತಾರತಮ್ಯದ ಬಗ್ಗೆ ತಿಳಿದು ಅದನ್ನು ತೊಡೆದು ಹಾಕುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಿ. ಬಸವರಾಜು ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಶ್ಚಿಮ ಬಂಗಾಳದ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರಾದ ಪ್ರೊ. (ಡಾ.) ಶ್ರೀನಿವಾಸಲು. ಎನ್.ಎಸ್. ಮುಖ್ಯ ಭಾಷಣಕಾರರಾಗಿ ಮಾತನಾಡಿ, ಹಿಂದಿನ ಕಾಲದಿಂದಲೂ ಸಹಾ ಮಹಿಳೆಯನ್ನು ಕತ್ತಲಲ್ಲಿ ಇಡಲಾಗಿದೆ ಆಕೆಯನ್ನು ಅಡುಗೆ ಮನೆಯಿಂದ ಹೊರಗೆ ಬಾರದಂತೆ ಅಡ್ಡ ಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಕೆಲವೊಂದು ಕಟ್ಟು ಪಾಡುಗಳನ್ನು ಹಾಕುವುದರ ಮೂಲಕ ಆಕೆಯನ್ನು ಮನೆಯಲ್ಲಿ ಬಂಧನದಲ್ಲಿ ಇಡಲಾಗಿತ್ತು. ಆದರೆ ಇಂದಿನ ದಿನಮಾನದಲ್ಲಿ ಮಹಿಳೆ ಎಲ್ಲದರಲ್ಲೂ ಸಹಾ ತನ್ನ ಸಾಮರ್ಥವನ್ನು ತೋರಿಸುತ್ತಾ ಪುರುಷನಗಿಂತ ಒಂದು ಹೆಜ್ಜೆ ಮುಂದೆ ಇದ್ದಾಳೆ, ಇಷ್ಠಾದರೂ ಸಹಾ ಆಕೆಯ ಮೇಲೆ ದೌರ್ಜನ್ಯ ನಿಂತಿಲ್ಲ ನಿರಂತರವಾಗಿ ನಡೆಯುತ್ತಲೆ ಇದೆ, ಮನೆಯಲ್ಲಿ ಕಚೇರಿಯಲ್ಲಿ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಎಂದರು.
ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಮುಟ್ಟಾದ ಮಹಿಳೆಯರು ಇಲ್ಲಿಗೆ ಬರಬಾರದೆಂದು ದೇವಸ್ಥಾನ ತೀರ್ಮಾನ ಮಾಡಿದೆ ಇದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ಮಸೀದಿ ಹಾಗೂ ಕಬರಸ್ತಾನಕ್ಕೆ ಪ್ರವೇಶ ಇಲ್ಲ ಇವುಗಳನ್ನು ನಾವು ಮಾಡಿಕೊಂಡ ಕಟ್ಟುಪಾಡುಗಳು ದೇವರು ಹಾಕಿಲ್ಲ ಭಗವಂತ ಎಲ್ಲರಿಗೂ ಒಂದೇ ರೀತಿಯಲ್ಲಿ ನೋಡುತ್ತಾನೆ ಆದರೆ ಅತನನ್ನು ಪೂಜಿಸುವ ನಾವುಗಳು ವಿವಿಧ ರೀತಿಯ ನಿಯಾಮವಳಿಗಳನ್ನು ಮಾಡಿಕೊಂಡು ಮಹಿಳೆಯರನ್ನು ಮಕ್ಕಳನ್ನು, ದಲಿತರನ್ನು ದೂರ ಇಡಲಾಗುತ್ತಿದೆ ಎಂದು ವಿಷಾಧಿಸಿ ಮುಟ್ಟಾದ ಮಹಿಳೇ ದೇವಸ್ಥಾನಕ್ಕೆ ಬರಬಾರದೆಂದು ಹೇಳುವುದಾದರೆ ಅದರಿಂದಲೇ ಜನನವಾದ ನಾವುಗಳು ಇದರಿಂದ ನಮ್ಮ ತಾಯಿಗೆ ಅವಮಾನ ಮಾಡಿದಂತೆ ನಮ್ಮನ್ನು ಸಾಕುವ ಭೂಮಿ ತಾಯಿ ಹಾಗೂ ನಮ್ಮನ್ನು ಹೆತ್ತ ತಾಯಿಯನ್ನು ಅವಮಾನ ಮಾಡಬಾರದು ಇದು ನಮಗೆ ಶ್ರೇಯಸ್ಸು ಅಲ್ಲ ಎಂದು ಶ್ರೀನಿವಾಸಲು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸರಸ್ವತಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು, ರಾಜ್ಯಸಭಾದ ಮಾಜಿ ಸದಸ್ಯರಾದ ಹೆಚ್,ಹನುಮಂತಪ್ಪರವರು ವಹಿಸಿದ್ದರು. ಮೈಸೂರಿನ ಮುಕ್ತಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಮಧುರ. ಎ.ಎಸ್. ಸರಸ್ವತಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ಶ್ರೀಮತಿ ಡಿ.ಕೆ. ಶೀಲಾ ಭಾಗವಹಿಸಿ ದ್ದರು. ಸೃಷ್ಟಿ ತಂಡ ಪ್ರಾರ್ಥಿಸಿದರೆ, ಪ್ರೋ. ಎನ್.ಡಿ.ಗೌಡ ಸ್ವಾಗತಿಸಿದರೆ, ಪ್ರೋ.ರಮೇಶ್ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೊ. (ಡಾ.) ಎಂ.ಎಸ್. ಸುಧಾದೇವಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿನಯತ್ರಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಹಾಸನದ ಹೊಳೆನರಸಿಪುರ ಸರಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯರು, ಡಾ.ಎಂ.ಕೆ. ಮಾಟೊಳ್ಳಿ, ಕೆ.ಎಲ್.ಇ. ಸೊಸೈಟಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. (ಡಾ.) ಜೆ.ಎಂ. ಮಲ್ಲಿಕಾರ್ಜುನಯ್ಯ, ಚಿತ್ರದುರ್ಗ ವಿಜ್ಞಾನ ಫೌಂಡೇಷನ್ ಅಧ್ಯಕ್ಷರಾದ ಡಾ.ಜಿ.ಎನ್.ಮಲ್ಲಿಕಾರ್ಜನಪ್ಪ, ಶಿವಮೊಗ್ಗದ ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜಿನ ಪ್ರೊಫೆಸರ್ ಡಾ.ಜಿ,ಎಸ್. ಯೋಗಿಶ್, ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ಜಿ.ಎಂ. ಕಾನೂನು ಕಾಲೇಜಿನ ನಿರ್ದೇಶಕರಾದ (ಡಾ.) ಬಿ.ಎಸ್. ರೆಡ್ಡಿ, ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡೀನ್ ಮತ್ತು ಪ್ರಾಧ್ಯಾಪಕರಾದ ಪ್ರೊ. (ಡಾ.). ಟಿ.ಆರ್. ಮಾರುತಿ ಉಪನ್ಯಾಸ ನೀಡಿದರು.

