ಚಿತ್ರದುರ್ಗ ಮೇ. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶದ ಅಕ್ರಮ ಸಾಗಾಣಿಕೆ ಮತ್ತು ಗೋಹತ್ಯೆ ತಡೆಗಟ್ಟುವ ಕುರಿತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನುಬಾಹಿರವಾಗಿ ಪ್ರಾಣಿಗಳ ಸಾಗಾಣಿಕೆ ಮತ್ತು ಗೋಹತ್ಯೆ (ಕುರ್ಬಾನಿ)ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯ ಪ್ರತಿಯೊಂದು ಠಾಣೆಯ ಬೀಟ್ ಪೋಲೀಸರನ್ನು ಉಪಯೋಗಿಸಿ ಅವರವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ಧಾಳಿ ಮಾಡಿ ಶಾಶ್ವತವಾಗಿ ನಿಲ್ಲಿಸಬೇಕು. ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಫ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು. ಆರೋಪಿಗಲಿಗೆ 7 ವರ್ಷ ಶಿಕ್ಷೆ ಹಾಗೂ ಜಾನುವಾರು ವಧೆ ಅಥವಾ ವಧೆ ಪ್ರಯತ್ನಕ್ಕೆ ಪ್ರತಿಯೊಂದು ಜಾನುವಾರಿಗೆ ಒಂದು ಲಕ್ಷ ದಂಡ ವಿಧಿಸಬೇಕು. ಹಾಗೂ ಅನಧಿಕ್ರತ ಸ್ಥಳ, ಕಟ್ಟಡಗಳಲ್ಲಿ ಕಟ್ಟಿ ಹಾಕಿದ ಜಾನುವಾರುಗಳನ್ನು ವಧೆಗಾಗಿ ತಯಾರಿ ಎಂದು ಪರಿಗಣಿಸಿ ಸ್ವಾಧೀನ ಪಡಿಸಬೇಕು, ಮತ್ತು ಅದನ್ನು ಯಾರಿಗೂ ವಾಪಸ್ ಕೊಡದೆ ಸರಕಾರಿ ಗೋಶಾಲೆಗೆ ಹಸ್ತಾಂತರಿಸಬೇಕು .ಸಣ್ಣ ಸಣ್ಣ ವಸ್ತುಗಳಾದ ಚಿನ್ನ ಕಳ್ಳತನ ಮಾಡುವವರನ್ನು ಬಂಧಿಸಲು ಸಾಧ್ಯ ಇರುವ ಠಾಣಾ ಪೋಲಿಸರಿಗೆ ಇಷ್ಟು ದೊಡ್ಡ ಜಾನುವಾರುಗಳ ಕಳ್ಳತನ,ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ಮಾಡುವುದನ್ನು ತಡೆಯಲು ಖಂಡಿತ ಸಾಧ್ಯವಿದೆ.
ಅಕ್ರಮ ಕಸಾಯಿಖಾನೆ ಜಾನುವಾರು ವಧೆಯ ಪ್ರತಿ ಪ್ರಕರಣಗಳ ಸಂಧರ್ಬದಲ್ಲಿ `ಯಾವ ಕಾರಣಕ್ಕೆ ಬೀಟ್ ಪೋಲಿಸರಿಗೆ ಮಾಹಿತಿ ಸಿಗಲಿಲ್ಲ. ಪೊಲೀಸ್ ಇಲಾಖೆಗೆ ಮೊದಲೇ ತಡೆಯಲು ಸಾಧ್ಯವಾಗಲಿಲ್ಲ ಯಾಕೆ ` ಎಂದು ಇಲಾಖಾ ತನಿಖೆ ನಡೆಸಿ ವ್ಯವಸ್ಥೆಯೊಳಗಿನ ದೋಷಗಳನ್ನು ಗುರುತಿಸಿ ಸರಿಪಡಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಲಾಯಿತು.
ಈ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸಬೇಕು. ಪ್ರತಿಯೊಂದು ಬೀಫ್ ಸ್ಟಾಲ್ ಗಳಲ್ಲಿ ಬೀಫ್ ಮಾರಾಟ ಆದಾಗ ತನಿಖೆ ನಡೆಸಬೇಕು. ಪರ ರಾಜ್ಯಗಳಿಂದ ಬೀಫ್ ತಂದಿರುವೆನೆಂದು ಹೇಳಿದರೆ ತನಿಖೆ ನಡೆಸಿ ಅದು ಜಿssಚಿi ಮತ್ತು ಅದರ ಮಾರಾಟ ಸಾಗಾಟ ನಿಯಮಾವಳಿ ತಪ್ಪಿದಲ್ಲಿ ಮಾಂಸ ವಶ ಪಡಿಸಬೇಕು. ಹಾಗೂ ಅದರ ಬಗ್ಗೆ ತೀವ್ರ ತನಿಖೆ ನಡೆಸಬೇಕು. ಹಲವಾರು ಕಡೆ ರಾಜ್ಯದ ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ನಡೆಸಿ ಹೊರ ರಾಜ್ಯದಿಂದ ತಂದದೆಂದು ಸುಳ್ಳು ಹೇಳಿ ಮಾರಾಟ ಮಾಡುತ್ತಿರುವ ಬಗ್ಗೆ ಆಗಾಗ್ಗೆ ವರ್ತಮಾನ ಕೇಳಿ ಬರುತ್ತಿದ್ದು. ಅದರ ಬಗ್ಗೆಯೂ ತೀವ್ರ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ರಾಜ್ಯಾದ್ಯಂತ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು ಅದರ ಪ್ರಾರಂಭ ಸ್ಥಳಗಳಾದ ಜಾನುವಾರು ಸಂತೆ ಹಾಗೂ ಅದರ ಸುತ್ತಮುತ್ತಲು ಕನಿಷ್ಟ 10 ಞm ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ ಮಾಡಿ ಯಾವುದೇ ವಾಹನದಲ್ಲಿ ಕಾನೂನು ನಿಯಮಾವಳಿ ಮೀರಿ ಜಾನುವಾರು ಸಾಗಾಟ ಆಗದಂತೆ ತಡೆಯಲು ಈಗಿನಿಂದಲೇ 24 ಗಂಟೆ ಗಸ್ತು ಸ್ಕ್ವಾಡ್ ನಿಯೋಜಿಸಬೇಕು. ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಬೇಕು ಎಲ್ಲ ರೀತಿಯ ಕಾರುಗಳು ಮತ್ತು ಖಾಸಗಿ ವಾಹನ ಗಳಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆದ ಪ್ರಕರಣಗಳು ಇರುವುದರಿಂದ ಖಾಸಗಿ ವಾಹನಗಳನ್ನು ಕಾರುಗಳನ್ನು ,ಹಾಲಿನ ಟ್ಯಾಂಕರ್ , ಕ್ಲೋಜ್ಡ್ ಕಂಟೈನರ್ ಗಳನ್ನು ತೀವ್ರ ತಪಾಸಣೆ ನಡೆಸಬೇಕು.
ಬಕ್ರೀದ್ ಸಂಧರ್ಬದಲ್ಲಿ ದನ, ಕರು, ಹೋರಿ ಹದಿಮೂರು ವರ್ಷದ ಒಳಗಿನ ಎಮ್ಮೆ ಕೋಣ ಇವುಗಳ ವಧೆ, ಬಲಿ (ಕುರ್ಬಾನಿ) ನಿಷೇಧ ಇರುವ ಬಗ್ಗೆ ಪೊಲೀಸ್ ಮತ್ತು ಇತರ ಇಲಾಖಾ ವತಿಯಿಂದ ವ್ಯಾಪಕ ಪ್ರಚಾರ ಮಾಡಬೇಕು.ಈಗಾಗಲೇ ಅಕ್ರಮ ಗೋಸಾಗಾಟ ಹಾಗೂ ವಧೆ ಮಾಡಿದ ಆರೋಪದ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಗಿರುವ ಆರೋಪಿಗಳನ್ನು ಕರೆಸಿ ಎಚ್ಚರಿಕೆ ಕೊಡಬೇಕು. ಹಾಗೂ ಅವರಮೇಲೆ ತೀವ್ರ ನಿಗಾ ಇಡಬೇಕು. ಈಗಾಗಲೇ ಬಾಂಡ್ ಮೇಲೆ ಬಿಡುಗಡೆಗೊಂಡ ವಾಹನಗಳ ಮೇಲೂ ತೀವ್ರ ನಿಗಾ ಇರಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪ್ರಾಣಿ ದಯ ಸಂಘ ಒಳಗೊಂಡು ಎಲ್ಲ ಆಗತ್ಯದ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ಸಭೆ ಕರೆದು ಬಕ್ರೀದ್ ಸಂಧರ್ಬ ಯಾವುದೇ ಜಾನುವಾರು ಬಲಿ ಆಗದಂತೆ ಕ್ರಮ ಕೈಗೊಳ್ಳಬೇಕು. ಅಕ್ರಮ ಗೋಸಾಗಾಟ/ ಗೋಹತ್ಯೆ ತಡೆದು ವಶ ಪಡಿಸಿದ ಗೋವಂಶಗಳ ಪಾಲನೆಗೆ ಸರಕಾರಿ ಗೋಶಾಲೆಗಳಲ್ಲಿ ವ್ಯವಸ್ಥೆ ಮಾಡಬೇಕು. ಹಿಂದುಗಳಿಗೆ ಪೂಜನೀಯವಾಗಿರುವ ಗೋವಂಶವನ್ನು ಸಂವಿಧಾನದ ಚೌಕಟ್ಟಿನಲ್ಲಿ ರಕ್ಷಿಸಲು ವಿಶ್ವ ಹಿಂದೂ ಪರಿಷದ ಮತ್ತು ಭಜರಂಗದಳ ಕಟಿ ಬದ್ದವಾಗಿದ್ದವಾಗಿದೆ ಈ ಬಾರಿ ಯಾವುದೇ ಅಕ್ರಮ ಗೋಸಾಗಾಟ ಗೋವಂಶ ಹತ್ಯೆ ನಡೆಯದಂತೆ ಸರ್ವ ಕ್ರಮ ಕೈಗೊಳ್ಳುವ ಜವಾಬ್ದಾರಿ ಸರಕಾರದ್ದು ಎಂಧು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವಿಭಾಗ ಸಹ ಸಂಯೋಜಕರು ಸಂದೀಪ್, ಜಿಲ್ಲಾ ಸಹ ಸಂಯೋಜಕ ರಾಮಾಂಜನೇಯ, ಜಿಲ್ಲಾ ಗೋರಕ್ಷಾ ಪ್ರಮುಖ್ ತೇಜೇಶ್ವರ್ ಎಂ ಜೆ ಮಠ್, ನಗರ ಸಹ ಸುರಕ್ಷಾ ಪ್ರಮುಖ್ ಪ್ರೇಮ್,ಗ್ರಾಮಾಂತರ ಸಂಯೋಜಕ ದರ್ಶನ್,ಗ್ರಾಮಾಂತರ ಗೋರಕ್ಷಾ ಮತ್ತು ಸಹ ಪ್ರಮುಖ್ ಸಿದ್ದಾರ್ಥ್, ನವೀನ್,ಗಿರೀಶ್, ಸಂತೋಷ, ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.

