ಸತೀಶ್ ಜಾರಕೀಹೊಳಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷರಾಗಲಿ: ಚಿತ್ರದುರ್ಗ ವಾಲ್ಮೀಕಿ ಮಹಾಸಭಾ ಒತ್ತಾಯ.

ಚಿತ್ರದುರ್ಗ ಜೂ. 02

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಾಯಕ ಸಮುದಾಯದ ಹಿರಿಯ ಮುಖಂಡರಾದ ಸತೀಶ್ ಜಾರಕೀಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಜಿಲ್ಲೆಯ ಹಿರಿಯ ಶಾಸಕರಾದ ಟಿ.ರಘುಮೂರ್ತಿ ಅಥವಾ ಎನ್.ವೈ.ಗೋಪಾಲಕೃಷ್ಣ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ಸತೀಶ್ ಜಾರಕಿಹೋಳಿ ಅವರ ಶ್ರಮ ಹೆಚ್ಚಾಗಿದೆ. 15 ನಾಯಕ ವಿಧಾನ ಸಭಾ ಸ್ಥಾನಗಳಲ್ಲಿ 14 ಸ್ಥಾನಗಳಲ್ಲಿ ಸಮುದಾಯದವರ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದಾರೆ. ಆದ್ದರಿಂದ ಇವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಮಂತ್ರಿ ಮಂಡಲದಲ್ಲಿ ನಾಯಕ ಸಮುದಾಯದವರಾದ ಓ ಚಿ ಬೋರಯ್ಯ ಅವರನ್ನು ಮಂತ್ರಿ ಮಾಡಿದ್ದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ನಾಯಕ ಸಮುದಾಯದಲ್ಲಿ ಯಾರಿಗೂ ಸಹ ಜಿಲ್ಲೆಯಲ್ಲಿ ನಾಯಕರನ್ನು ಮಂತ್ರಿ ಮಾಡಿಲ್ಲ. ಈ ದೃಷ್ಠಿಯಿಂದ ಜಿಲ್ಲೆಯಲ್ಲಿ ಗೆದ್ದಿರುವ ಶಾಸಕರಾದ ಟಿ.ರಘುಮೂರ್ತಿ ಅಥವಾ ಎನ್.ವೈ.ಗೋಪಾಲಕೃಷ್ಣ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೋಗಪ್ಪ, ಸುರೇಗೌಡ, ಲೋಹಿತ್ ಕುಮಾರ್, ಬಿ.ಮಂಜುನಾಥ್, ಬಸವರಾಜು ಬಚ್ಚಬೋರಯ್ಯನಹಟ್ಟಿ, ಹೊರಕೆರಪ್ಪ, ಚೇತನ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *