ಚಿತ್ರದುರ್ಗ ಜೂ 05
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಪರಿಸರದ ಬಗ್ಗೆ ತಿಳಿಸುವಂತಾಗಬೇಕು. ತಾಯಿಯು ಮನೆಯ ಮುಂದೆ ಇರುವ ತುಳಸಿ ಹೇಗೆ ರಕ್ಷಿಸುತ್ತಾರೊ. ಮಕ್ಕಳಿಗೂ ಗಿಡಗಳಿಗೆ ನೀರು ಹಾಕಿ ಬೆಳೆಸುವ ಜ್ಞಾನವನ್ನು ತುಂಬಬೇಕು ಎಂದು ರೋಟರಿ ವಿದ್ಯಾಲಯದ ಕಾರ್ಯದರ್ಶಿ ಮಧುಪ್ರಸಾದ್ ತಿಳಿಸಿದರು.

ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದ ಬಳಿಯಲ್ಲಿನ ರೋಟರಿ ವಿದ್ಯಾಲಯದವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳ ಹುಟ್ಟು ಹಬ್ಬದಂದು ಆ ಮಗುವಿನ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದನ್ನು ಮಕ್ಕಳೆ ಮಾಡುವುದರಿಂದ ಮಕ್ಕಳಲ್ಲಿ ಪರಿಸರದ ಜ್ಞಾನ ಮೂಡಲಿದೆ. ಚಿಕ್ಕವಯಸ್ಸಿನಲ್ಲೇ ಗಿಡ ಮರಗಳ ಬಗ್ಗೆ ಅರಿವು ಮೂಡಿಸಬೇಕು. ಊರಿಗೊಂದು ವನ ಮನೆಗೊಂದು ಮರ ಎನ್ನುವ ಹಾಗೆ ಮನೆಯ ಆವರಣದಲ್ಲಿ ಗಿಡಗಳನ್ನು ನೆಡಯವುದರಿಂದ ಉತ್ತಮಗಾಳಿಯನ್ನು ಪಡೆಯಬಹುದು ಎಂದರು.

ಆಡಳಿತಾಧಿಕಾರಿಗಳಾದ ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಯು ಶಾಲೆಗೆ ಸೇರುವ ಮುನ್ನ ಒಂದೊoದು ಗಿಡಗಳನ್ನು ನೆಡುವ ಮೂಲಕ ಪ್ರವೇಶ ಪಡೆಯಬೇಕು. ಶಾಲೆಯ ಸುತ್ತಮುತ್ತಲು ಪರಿಸರವು ಸ್ವಚ್ಚತೆಯಿಂದ ಇರಬೇಕು. ಪರಿಸರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಯ ಶಿಕ್ಷಣ ಮುಗಿಸಿ ಮುಂದಿನ ಶಿಕ್ಷಣಕ್ಕೆ ಹೋಗುವಾಗ ವಿದ್ಯಾರ್ಥಿ ಜೀವನದಲ್ಲಿ ನಾನು ನೆಟ್ಟ ಗಿಡ ಇಂದು ಮರವಾಗಿ ನೆರಳು, ಉತ್ತಮ ಗಾಳಿ ನೀಡುತ್ತಿದೆ. ಎಂದು ಹೆಮ್ಮೆ ಪಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ವಿದ್ಯಾಲಯದ ಎಸ್.ವೀರೇಶ್, ಎ.ವಿ.ಮೂರ್ತಿ, ಚಂದ್ರ ಮೋಹನ್.ರೋಟರಿ ಕ್ಲಬ್ ಅಧ್ಯಕ್ಷರಾಧ ಭಾಗ್ಯಲಕ್ಷ್ಮೀ, ಟನ್ ಥೌಜಂಡ್ನ ನಿರ್ದೆಶಕರಾದ ಮದುಸೂಧನ್ ರೆಡ್ಡಿ ಶಂಕ್ರಪ್ಪ ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಶಾಲೆಯ ಮುಂಭಾಗದಲ್ಲಿನ ಉದ್ಯಾನವನದಲ್ಲಿ ಸಸಿಗಳನ್ನು ನಡೆಲಾಯಿತು.