ವಿಶ್ವ ಪರಿಸರ ದಿನಾಚರಣೆ: ಪಾರ್ಶ್ವನಾಥ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ ಸೈಕಲ್ ಜಾಥಾ, ಸಸಿ ನೆಡುವ ಕಾರ್ಯಕ್ರಮ.

ಚಿತ್ರದುರ್ಗ ಜೂ. 5

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶಾಲಾ ಮಕ್ಕಳಿದ್ದಾಗ ಮಾತ್ರ ಸೈಕಲ್ ಬಳಸಿ ದೊಡ್ಡವರಾದ ನಂತರ ಪೆಟ್ರೋಲ್ ಗಾಡಿಗಳನ್ನು ಬಳಸುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದ್ದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜನರು ಹೆಚ್ಚೆಚ್ಚು ಸೈಕಲ್‍ಗಳನ್ನ ಬಳಸುವಂತಹ ಆಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್‍ಕೆಎಸ್ ಸ್ವಾಮಿ ಕರೆ ನೀಡಿದರು.

ಚಿತ್ರದುರ್ಗ ನಗರದ ಪಾರ್ಶ್ವನಾಥ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸೈಕಲ್ ಜಾತವನ್ನ ಉದ್ಘಾಟಿಸಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಮರುಬಳಕೆ ಮಾಡುವುದು, ಗ್ರಾಮೀಣ ಹುದ್ದೆಗಳನ್ನು ಪ್ರೋತ್ಸಾಹಿಸುವುದು, ಗಾಂಧೀಜಿಯವರ ಚರಕವನ್ನು ಬಳಕೆ ಮಾಡಿ, ತಮ್ಮ ವಸ್ತುಗಳನ್ನ ತಾವೇ ಬಳಕೆ ಮಾಡುವುದನ್ನು ಕಲಿತಾಗ ಕೈಗಾರಿಕೆಗಳ ಮಾಲಿನ್ಯ ಸಹ ಕಡಿಮೆ ಆಗುತ್ತದೆ ಎಂದು ಚರಕದ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿ ಕೊಟ್ಟರು. ವಿದ್ಯಾರ್ಥಿಗಳಿಗೆ ಸಣ್ಣ ಸಣ್ಣ ಆಟದ ಸಾಮಾನುಗಳ ಮುಖಾಂತರ, ಪ್ರಾತ್ಯಕ್ಷಿಕತೆ ಮುಖಾಂತರ ಮಗು ಎಲ್‍ಕೆಜಿ ಇದ್ದಾಗಲೇ ಪರಿಸರ ಚಿಂತನೆಗಳನ್ನ ಮೂಡಿಸಿದಾಗ, ಪರಿಸರ ಉಳಿಸಿಕೊಳ್ಳುವುದು ಸುಲಭವಾಗುತ್ತದೆ ಎಂದರು.

ಚಿತ್ರ ಕಲಾವಿದರಾದ ಬೇಂದ್ರೆ ನಾಗರಾಜ್ ಮಾತನಾಡುತ್ತಾ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೈಕಲ್ ಗಳನ್ನ ಬಳಕೆ ಮಾಡುವುದನ್ನು ಜಾಗೃತಿ ಮೂಡಿಸಬೇಕು, ಪೆಟ್ರೋಲ್ ಉಳಿಸಿ, ಪರಿಸರ ಉಳಿಸಿ, ಮಾಲಿನ್ಯ ತಡೆಯಿರಿ ಎಂಬ ಸಂದೇಶವನ್ನು ಚಿತ್ರಕಲೆಗಳ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಾಜಿಮ ಸ್ವಾಲೆಹಾ ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದ ಪರಿಸರ ಸ್ನೇಹಿ ಜೀವನವನ್ನು ಅಳವಡಿಸಿಕೊಳ್ಳಬೇಕು, ಖಾಲಿ ಇರುವ ಜಾಗಗಳಲ್ಲಿ ಸಸಿಗಳನ್ನು ನೆಟ್ಟು, ನೀರು ಹಾಕಿ, ಹಸರೀಕರಣ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜನಕರೆಡ್ಡಿ ಮಾತನಾಡುತ್ತಾ ಪೋಷಕರು ಸಹ ಮಕ್ಕಳಲ್ಲಿ ಪರಿಸರಸ್ನೇಹಿ ಜೀವನವನ್ನು ಮನೆಯಲ್ಲಿ ರೂಡಿ ಮಾಡಿಸುವುದರಿಂದ ಪರಿಸರ ಉಳಿಸಿಕೊಳ್ಳಲು ಅನುಕೂಲ ಕರವಾಗುತ್ತದೆ ಎಂದರು.

ಸೈಕಲ್ ಜಾಥಾವನ್ನು ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಡಿಸಿ ಕಚೇರಿಯ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಶಾಲಾ ಆವರಣವನ್ನ ತಲುಪಿತು. ಸುಮಾರು 70ಕ್ಕೂ ಹೆಚ್ಚು ಸೈಕಲ್ ಬಳಸಿ ವಿದ್ಯಾರ್ಥಿ ಗಳು ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು. ಶಾಲೆಯ ಶಿಕ್ಷಕ ವೃಂದದವರಾದ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *