ಚಿತ್ರದುರ್ಗದಲ್ಲಿ ಹಸಿರು ಅಭಿಯಾನಕ್ಕೆ ಚಾಲನೆ; ‘ತಾಯಿ ಹೆಸರಿನಲ್ಲಿ ಒಂದು ಸಸಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ.

ಚಿತ್ರದುರ್ಗ ಜೂ. 05

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾಜಿ ಶಾಸಕರಾದ.ಜಿ.ಎಚ್.ತಿಪ್ಪಾರೆಡ್ಡಿರವರ ನಿವಾಸದಲ್ಲಿ ತಾಯಿ ಹೆಸರಿನಲ್ಲಿ ಒಂದು ಸಸಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಸಸಿ ನೆಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ -ಪರಿಸರ ಉಳಿಸುವುದು ಪ್ರತಿಯೊಬ್ಬ ವ್ಯಕ್ತಿ ಕರ್ತವ್ಯವಾಗಿದೆ. ಪರಿಸರದಿಂದ ಶುದ್ದ ಗಾಳಿಯನ್ನು ಪಡೆಯಬಹುದು ಪರಿಸರ ಎಂದರೆ ಗಾಳಿ, ಬೆಳಕು, ಪರ್ವತಗಳು ಹಾಗೂ ಇನ್ನು ಮುಂತಾದವುಗಳು ಇದೆ. ಮನುಷ್ಯನಿಗೆ ಪರಿಸರ ಸ್ವಚ್ಚವಾಗಿದ್ದರೆ ಆರೋಗ್ಯವಂತವಾಗಿ ಇರುತ್ತಾನೆ. ನಮ್ಮ ಸುತ್ತಮುತ್ತಲಿನ ಪರಿಸರನ್ನು ಉಳಿಸಿಕೊಳ್ಳೋಬೇಕು ಉತ್ತಮಗಾಳಿ ಯನ್ನು ಪಡೆಯಬೇಕಾದರೆ ಗಿಡ, ಮರಗಳನ್ನು ಬೆಳಸಬೇಕು. ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಾಧ್ಯಕ್ಷ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಜಿಲ್ಲಾ ಉಪಾಧ್ಯಕ್ಷ ಗಾ.ನ.ಲಿಂಗರಾಜು, ಬಸವೇಶ, ಪಲ್ಲವಿ ಪ್ರಸನ್ನ, ಮಹಾಂತೇಶ್, ಸುಮಾ, ನಾಗರಾಜ್, ವಸಂತಚಾರ್ ಸೇರಿದಂತೆ ನಗರ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *