KCET Result 2026: ಸಿಇಟಿ ಫಲಿತಾಂಶ ಪ್ರಕಟ; ಇಂಜಿನಿಯರಿಂಗ್, ಕೃಷಿ, ನರ್ಸಿಂಗ್ ವಿಭಾಗದ ಟಾಪರ್ಸ್ ಪಟ್ಟಿ ಇಲ್ಲಿದೆ!

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET-2026) ಫಲಿತಾಂಶ ಅಧಿಕೃತವಾಗಿ ಬಿಡುಗಡೆಯಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್​ ಪಾಟೀಲ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಸಂಪೂರ್ಣ ವಿವರಗಳನ್ನು ಹಾಗೂ ಟಾಪರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಏಪ್ರಿಲ್‌ 23 ಮತ್ತು 24ರಂದು ರಾಜ್ಯಾದ್ಯಂತ ಒಟ್ಟು 745 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳು ಸುಗಮವಾಗಿ ನಡೆದಿದ್ದವು. ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಾತಿಗಾಗಿ ಈ ಬಾರಿ ಒಟ್ಟು 3.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದರು. ಇದೀಗ ಆ ಎಲ್ಲಾ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ತೆರೆಬಿದ್ದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ತಿಳಿಸಿರುವಂತೆ, ವಿದ್ಯಾರ್ಥಿಗಳು ಮಧ್ಯಾಹ್ನ 2:00 ಗಂಟೆಯ ಬಳಿಕ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿ ಮತ್ತು ರ‍್ಯಾಂಕ್ ಅನ್ನು ಪಡೆದುಕೊಳ್ಳಬಹುದು.

ವಿಭಾಗವಾರು ಕೆಸಿಇಟಿ ಟಾಪರ್‌ಗಳ ಪಟ್ಟಿ (KCET 2026 Toppers List)

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ:

ಇಂಜಿನಿಯರಿಂಗ್ (Engineering) ಟಾಪ್ 5 ರ‍್ಯಾಂಕ್:

  1. ತನಿಷಾ ಕಾರ್ತಿಕ್ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು
  2. ಸೃಜನ್ ಬಿ.ಎಸ್ – ಕೆಎಂಡಬ್ಲ್ಯೂಎ ಪಿಯು ಕಾಲೇಜು
  3. ನಿನಾದ್ ವಸಿಷ್ಠ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು
  4. ಇರಾ ಜೈನ್ – ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು
  5. ರಿಷನ್ ಫರ್ನಾಂಡೀಸ್ – ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು, ಮಂಗಳೂರು

ಪಶು ವೈದ್ಯಕೀಯ (Veterinary) ಟಾಪ್ 5 ರ‍್ಯಾಂಕ್​:

  1. ನಯನಾ ಗೋಪಿ – ಬೇಸ್ ಪಿಯು ಕಾಲೇಜು, ಶಿವನಗರ, ಬೆಂಗಳೂರು
  2. ಅಮೂಲ್ಯ ಎಸ್. – ಸರ್ ಎಂ.ವಿ. ಪಿಯು‌ ಕಾಲೇಜು, ಸರಸ್ವತಿನಗರ, ದಾವಣಗೆರೆ
  3. ರಿತ್ವಿಕ್ ಕುಮಾರ್ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು
  4. ಬಸವರಾಜ್ ಅವತಿ – ಸರ್ಕಾರಿ ಬಾಲಕರ ಪಿಯು ಕಾಲೇಜು, ವಿಜಯಪುರ
  5. ಸುಚಿತಾ ಎಂ. – ಶ್ರೀ ಚೈತನ್ಯ ಪಿಯು ಕಾಲೇಜು, ದಾವಣಗೆರೆ

ಕೃಷಿ, ರೇಷ್ಮೆ, ಅರಣ್ಯ (Agriculture/Sericulture) ಟಾಪ್ 5 ರ‍್ಯಾಂಕ್:

  1. ನಿನಾದ್ ವಸಿಷ್ಠ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು
  2. ಅನ್ಮೋಲ್ ಪ್ರಭು – ಅರ್ಜುನ ಸೈನ್ಸ್ ಪಿಯು ಕಾಲೇಜು, ಧಾರವಾಡ
  3. ಸಮಯ್ ಎ.ಎಸ್. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
  4. ರಿಷಿಕಾ ಕೆ.ಎಸ್ – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
  5. ರಿತುಲ್ ಎಸ್. ರೆಡ್ಡಿ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು

ನರ್ಸಿಂಗ್ (Nursing) ಟಾಪ್ 5 ರ‍್ಯಾಂಕ್:

  1. ನಯನಾ ಗೋಪಿ – ಬೇಸ್ ಪಿಯು ಕಾಲೇಜು, ಶಿವನಗರ, ಬೆಂಗಳೂರು
  2. ಅಮೂಲ್ಯ ಎಸ್. – ಸರ್ ಎಂ.ವಿ. ಪಿಯು‌ ಕಾಲೇಜು, ಸರಸ್ವತಿನಗರ, ದಾವಣಗೆರೆ
  3. ರಿತ್ವಿಕ್‌ ಕುಮಾರ್ – ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು
  4. ಬಸವರಾಜ್ ಅವತಿ – ಸರ್ಕಾರಿ ಬಾಲಕರ ಪಿಯು ಕಾಲೇಜು, ವಿಜಯಪುರ
  5. ಸುಚಿತಾ ಎಂ. – ಶ್ರೀಚೈತನ್ಯ ಪಿಯು ಕಾಲೇಜು, ದಾವಣಗೆರೆ

ಫಲಿತಾಂಶ ವೀಕ್ಷಿಸಲು ನೇರ ಲಿಂಕ್‌ಗಳು (Direct Links to Check Results)

ಒಂದೇ ಬಾರಿಗೆ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶ ನೋಡಲು ಮುಂದಾಗುವುದರಿಂದ ವೆಬ್‌ಸೈಟ್ ಸರ್ವರ್ ಡೌನ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಾಧಿಕಾರವು ಈ ಕೆಳಗಿನ ಪರ್ಯಾಯ ಲಿಂಕ್‌ಗಳನ್ನು ಬಿಡುಗಡೆ ಮಾಡಿದೆ:

ವಿದ್ಯಾರ್ಥಿಗಳು ಈ ಮೇಲಿನ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ, ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದಾಖಲಿಸುವ ಮೂಲಕ ತಮ್ಮ ರಿಸಲ್ಟ್ ಅನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಮುಂದಿನ ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಫಲಿತಾಂಶದ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಲು ಮರೆಯದಿರಿ.

Leave a Reply

Your email address will not be published. Required fields are marked *