‘ಬ್ರ್ಯಾಂಡ್ ಚಿತ್ರದುರ್ಗ’ ಕಾರ್ಯಕ್ರಮ: ಜಿಲ್ಲೆಯ 18 ಸಾಧಕ ಉದ್ಯಮಿಗಳಿಗೆ ಸನ್ಮಾನ, 50ಕ್ಕೂ ಹೆಚ್ಚು ಸ್ಥಳೀಯ ಉತ್ಪನ್ನಗಳ ಪ್ರದರ್ಶನ.
ಚಿತ್ರದುರ್ಗ, ಜೂ 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಉತ್ಪನ್ನಗಳು, ಉದ್ಯಮಗಳು ಮತ್ತು ಉದ್ಯಮಶೀಲತೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಆಯೋಜಿಸಲಾಗಿರುವ “ಬ್ರ್ಯಾಂಡ್ ಚಿತ್ರದುರ್ಗ” ಕಾರ್ಯಕ್ರಮವು ಇದೇ ಜೂನ್ 13, 2026 ರಂದು ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅದ್ದೂರಿಯಾಗಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಮತ್ತು ಯುವ ಉದ್ಯಮಿಗಳನ್ನು ಹಿಂದೂ ಎಕನಾಮಿಕ್ ಫೋರಂ ವತಿಯಿಂದ ಗೌರವಿಸಿ ಸನ್ಮಾನ ಮಾಡಲಾಗುತ್ತಿದೆ. ಸುಮಾರು 250 ಆಹ್ವಾನಿತ ಗಣ್ಯರು, ಉದ್ಯಮಿಗಳು, ವ್ಯಾಪಾರಸ್ಥರು, ಹೂಡಿಕೆದಾರರು, ಉತ್ಪಾದಕರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದುರ್ಗದ ಅಭಿವೃಧಿ ಬೆಳವಣಿಗೆಗೆ ಕೊಡುಗೆ ನೀಡಿದ ಗೌರವ ಸನ್ಮಾನ ಸ್ವೀಕರಿಸಲಿರುವ 9 ಹಿರಿಯ ಉದ್ಯಮಿಗಳೆಂದರೆ ಶ್ರೀ ಕಾಶಿ ವಿಶ್ವನಾಥ ಶೆಟ್ಟಿ ಗುರುರಾಜ ಫರ್ನಿಚರ್ಸ್, ಚಿತ್ರದುರ್ಗಶ್ರೀ ಕೊಟ್ರೇಶಪ್ಪ ಬಸವೇಶ್ವರ ಟ್ರೇಡಿಂಗ್ ಕಂಪನಿ, ಚಿತ್ರದುರ್ಗಶ್ರೀ ಮಾಗನೂರು ಚನ್ನಬಸಪ್ಪ ಮಾಗನೂರು ಎಂಟರ್ ಪ್ರೈಸಸ್, ಚಿತ್ರದುರ್ಗಶ್ರೀ ಎಸ್. ಆರ್. ಲಕ್ಷ್ಮೀಕಾಂತ್ ಶೆಟ್ಟಿ ಎಸ್ಆರ್ಬಿಎಂಎಸ್ (ಎಪಿಎಂಎಸ್), ಚಿತ್ರದುರ್ಗಶ್ರೀ ವೀರಭದ್ರಪ್ಪ ವಸುಂಧರ ಕೃಷಿ ಕ್ಷೇತ್ರ, ಬಿ.ಜಿ. ಕೆರೆ ಶ್ರೀ ಹರೀಶ್ ಬೈರಾಪುರ ಕುಕ್ಕುಟೋದ್ಯಮ, ಮೊಳಕಾಲ್ಮೂರಶ್ರೀ ಬಾಬು ಚರಣ್ ಎನ್. ಕೆ. ಶಿಲ್ಪಿ, ಎನ್.ಜಿ. ಹಳ್ಳಿಶ್ರೀ ಲೋಕೇಶ್ ಟಿ. ಪರಿಸರ ನ್ಯಾಚುರಲ್ಸ್, ಲಕ್ಕಿಹಳಿ ಶ್ರೀ ನಾಗರಾಜ್ ಟಿ. ಮಾರುತಿ ಇಂಡಸ್ಟ್ರೀಸ್,
ಚಿತ್ರದುರ್ಗ 10 ಯುವ ಉದ್ಯಮಿ ಗೌರವಕ್ಕೆ ಪುರಸ್ಕೃತರಾದವರೆಂದರೆ ಶ್ರೀ ಶಶಿಕುಮಾರ್ ಆರ್. ಭವಾನಿ ಕಾಯರ್ ಇಂಡಸ್ಟ್ರೀಸ್, ಹಿರಿಯೂರು ಶ್ರೀ ಜಗದೀಶ್ ಆರ್. ಆರ್ಬಿಐ ಮಡ್ ಬ್ಲಾಕ್ಸ್, ಹೊಸದುರ್ಗ ಶ್ರೀ ಅಶೋಕ್ ಟಿ.ಎಲ್. ರೇಣುಕಾ ಆಗ್ರೋ, ಚಳ್ಳಕೆರೆ ಶ್ರೀ ಸುಜಯ್ ಕುಮಾರ್ ಸರಸ್ವತಿ ಆಗ್ರ್ಯಾನಿಕ್ಸ್, ಚಿತ್ರದುರ್ಗ ಶ್ರೀ ಸಂತೃಪ್ತ್ ಕೆ. ಶ್ರೀಧರ್ ಸ್ವಾದಿಷ್ಟ ಬ್ಯಾಟರ್, ಚಿತ್ರದುರ್ಗ ಶ್ರೀಮತಿ ವಿದ್ಯಾ ಎಂ. ಕೋಟೆ ಅರೋಮಾ, ಚಳ್ಳಕೆರೆ ಶ್ರೀ ಯೋಗೇಶ್ ಎ. ಆರ್. ಶ್ರೀಕಂಠೇಶ್ವರ ಸಿಲ್ಕ್ಸ್ ಅಂಡ್ ಗೋಲ್ಡ್ ಪ್ಯಾಲೇಸ್, ಚಿತ್ರದುರ್ಗ ಶ್ರೀ ರಾಜೇಶ್ ಅಪೂರ್ವ ಎಂಟರ್ಪ್ರೈಸಸ್, ಚಿತ್ರದುರ್ಗ ಶ್ರೀಮತಿ ವೀಣಾ ಜಿ.ಎಂ, ಶ್ರೀ ಚನ್ನಕೇಶ್ವರ ಆಗ್ರೋ ಫುಡ್ ಇಂಡಸ್ಟ್ರೀಸ್, ನೇರಲಗುಂಟೆ ಶ್ರೀ ನಂದಿ ನಾಗರಾಜ್, ಬಸವೇಶ್ವರ ಆಗ್ರೋ ಇಂಡಸ್ಟ್ರೀಸ್, ನಂದಿ ಟ್ರೈಲರ್ಸ್, ಚಿತ್ರದುರ್ಗ ಈ ಗೌರವವನ್ನು ಉದ್ಯಮಶೀಲತೆ, ನವೀನತೆ, ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ಉದ್ಯೋಗ ಸೃಷ್ಟಿ ಹಾಗೂ ಸಮಾಜಮುಖಿ ಕೊಡುಗೆಗಳನ್ನು ಗುರುತಿಸಿ ನೀಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಗಳಾಗಿ ಜಿಲ್ಲೆಯ 50ಕ್ಕೂ ಹೆಚ್ಚು ಆಯ್ದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವಿವಿಧ ತಾಲ್ಲೂಕುಗಳ ಸ್ಥಳೀಯ ಬ್ರ್ಯಾಂಡ್ಗಳ ಪ್ರೋತ್ಸಾಹ ರಫ್ತು ಸಾಮಥ್ರ್ಯವುಳ್ಳ ಉತ್ಪನ್ನಗಳ ಗುರುತಿಸುವಿಕೆ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಆಹಾರ ಸಂಸ್ಕರಣೆ ಹಾಗೂ ಸೇವಾ ಕ್ಷೇತ್ರಗಳ ವಿಶೇಷ ಪ್ರದರ್ಶನ ಉದ್ಯಮಿಗಳು, ಹೂಡಿಕೆದಾರರು, ವ್ಯಾಪಾರಸ್ಥರು ಹಾಗೂ ಸಂಸ್ಥೆಗಳ ನಡುವೆ ನೆಟ್ವರ್ಕಿಂಗ್ ಅವಕಾಶ ಇದೆ. “ಬ್ರ್ಯಾಂಡ್ ಚಿತ್ರದುರ್ಗ” ಕಾರ್ಯಕ್ರಮವು ಜಿಲ್ಲೆಯ ಸ್ಥಳೀಯ ಉದ್ಯಮಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವುದರ ಜೊತೆಗೆ ಯುವಜನರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ. “ಸ್ಥಳೀಯ ಬ್ರ್ಯಾಂಡ್ಗಳು ಜಾಗತಿಕ ಅವಕಾಶಗಳು” ಎಂಬ ಧ್ಯೇಯದೊಂದಿಗೆ ಬ್ರ್ಯಾಂಡ್ ಚಿತ್ರದುರ್ಗ ಕಾರ್ಯಕ್ರಮವು ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿದೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: