ಚಿತ್ರದುರ್ಗ ಜೂ. 24
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಕ್ರಿಕೆಟ್ ಕ್ಲಬ್(ರಿ). ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್(ರಿ). ವತಿಯಿಂದ ಒನಕೆ ಓಬವ್ವ ರಾಜ್ಯ ಮಟ್ಟದ ಓನಕೆ ಓಬವ್ವ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‍ನ ಉದ್ಘಾಟನಾ ಪಂದ್ಯಾವಳಿಯೂ ಜೂ. 26 ರಂದು ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ ಎಂದು ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಕಾರ್ಯದರ್ಶಿ ಅಶೋಕ್ ತಿಳಿಸಿದ್ದಾರೆ.
ಈ ಟೂರ್ನಿಯ ಉದ್ಘಾಟನೆಯನ್ನು ಶ್ರೀ ಬಸವ ಕುಮಾರಸ್ವಾಮಿಗಳು ಹಾಗೂ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ನೆರವೇರಿಸಲಿದ್ದಾರೆ, ಈ ಸಮಾರಂಭದಲ್ಲಿ ಶಾಸಕಾರದ ಕೆ ಸಿ ವೀರೇಂದ್ರ ಪಪ್ಪಿ, ಬಿ.ಜೆ.ಪಿ ಯುವ ಮುಖಂಡರಾದ ರಘು ಚಂದನ್, ಬಿ’ಸ್ ಮಾರ್ಟ್‍ನ ಮಾಲಿಕರಾದ ಗುರು, ಅಹೋಬಲ ಟಿ ವಿ ಎಸ್ ಶೋ ರೂಂನ ಮಾಲೀಕರಾದ ಅರುಣ್ ಕುಮಾರ್, ಸನ್ನಿರಾಜ ಮನೆ ಬೆಂಗಳೂರು, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ರವಿಕಾಂತ, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ.ತಾರಿಣಿ ಶುಭ ಧಾರಿಣಿ, ಕಾಂಗ್ರೆಸ್ ಮುಖಂಡರಾದ ಜಿ.ಎಸ್. ಮಂಜುನಾಥ್, ಚಿತ್ರದುರ್ಗ ಕ್ರಿಕೆಟ್ ಕ್ಲಬ್‍ನ ಅಧ್ಯಕ್ಷರಾದ ರಮೇಶ್.ಟಿ, ಸಿ ಸಿ ಎ ಟರ್ಫ್ ಗ್ರೌಂಡ್‍ನ ಮಾಲೀಕರಾದ ಮಂಡ್ಯ ಮಲ್ಲೇಶ್ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ಮುಖಂಡರು ಜಿ ಎಸ್ ಕುಮಾರ್‍ಗೌಡರವರು ವಹಿಸಲಿದ್ದಾರೆ
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
