ಚಿತ್ರದುರ್ಗ ಜು. 01
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ, ರಾಷ್ಟ್ರೀಯ ವೈದ್ಯರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಶಾಲೆಯಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ವೈದ್ಯರ ವೇಷಭೂಷಣ ಧರಿಸಿ ತಮ್ಮ ಮುಂದಿನ ದಿನಗಳಲ್ಲಿ ಡಾಕ್ಟರ್ ಆಗುವ ಕನಸಿಸ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕನಸು ಕಾಣುವ ವಯಸ್ಸಿನಲ್ಲಿ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮ ಪಟ್ಟು ಓದಬೇಕು ಎಂದು ಶೈಕ್ಷಣಿಕ ನಿರ್ದೇಶಕರಾದ ಸಂಪತ್ ಕುಮಾರ್ ಸಿ.ಡಿ. ರವರು ಹೇಳಿದರು. ಪ್ರಾಥಮಿಕ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ಬಸವರಾಜಯ್ಯ ಮುದ್ದು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ ಚಂದ್ರಪ್ಪ, ಮುಖ್ಯ ಕಾರ್ಯ ನಿರ್ವಣಾಧಿಕಾರಿಯವರಾದ ರಘುಚಂದನ್, ಶಾಲೆಯ ಡೀನ್ ಆದ ಅನಂತರಾಮ್, ಪ್ರಾಂಶುಪಾಲರಾದ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕರಾದ ಜಾರೀನಾ, ಪಿಆರ್ಓ ರವಿಕುಮಾರ್ ಮತ್ತು ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಹಾಜರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: