ಚಿತ್ರದುರ್ಗ ಜು. 01
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಿದ್ಯಾರ್ಥಿ ದಿಸೆಯಲ್ಲಿಯೇ ತಾವುಗಳು ಮುಂದೆ ಏನಾಗಬೇಕು ಎಂದು ನಿರ್ಧಾರವನ್ನು ಮಾಡುವುದ್ದಲ್ಲದೆ ಅದಕ್ಕೆ ಬೇಕಾದ ತಯಾರಿಯನ್ನು ಮಾಡುವುದರ ಮೂಲಕ ನಿಮ್ಮ ಪೋಷಕರ ಕನಸನ್ನು ನನಸಾಗಿ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಶಾಖೆಯ ಅಧ್ಯಕ್ಷರಾದ ಬಿ.ಪಿ.ಪ್ರೇಮನಾಥ ಕರೆ ನೀಡಿದರು.
ಚಿತ್ರದುರ್ಗ ನಗರದ ಹೂರವಲಯದ ರಾ.ಹೆ.13ರಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಶಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆ ಹಾಗೂ ಜಿಲ್ಲೆಯ ಎಸ್.ಎಸ್. ಎಲ್.ಸಿ. ಹಾಗೂ ಪಿಯುನಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದ ಅವರು, ಮಕ್ಕಳಿಗೆ ದ್ವೀತಿಯ ಪಿಯು ನಿಮ್ಮ ಜೀವನದಲ್ಲಿ ಉತ್ತಮವಾದ ಘಟ್ಟವಾಗಿದೆ ಇಲ್ಲಿದ್ದ ಮುಂದೆ ನಿಮ್ಮ ಬದುಕಿನ ಭವಿಷ್ಯವನ್ನು ನಿರ್ಧಾರ ಮಾಡುವಂತ ತಿರುವಾಗಿದೆ, ಇಲ್ಲಿದ್ದ ಇಂಜಿನಿಯರಿಂಗ್, ದಂತ, ವೈದ್ಯರು, ಸೇರಿದಂತೆ ಇತರೆ ವೃತ್ತಿಗಳನ್ನು ಆಯ್ಕೆ ಮಾಡುವಂತ ಸಮಯವಾಗಿದೆ, ಈ ಹಿನ್ನಲೆಯಲ್ಲಿ ಈಗ ಎಸ್.ಎಸ್. ಎಲ್.ಸಿ.ಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದವರು ಮುಂದೆ ಪಿಯುನಲ್ಲಿಯೂ ಸಹಾ ಉತ್ತಮವಾದ ಅಂಕಗಳನ್ನು ಪಡೆಯುವುದರ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಜಿಲ್ಲಾ ಖಜಾನೆ ಅಧಿಕಾರಿಗಳಾದ ಅಶೋಕ್ ರವರು ನಮ್ಮ ನಿವೃತ್ತ ನೌಕರರಲ್ಲಿನ ಪಿಂಚಿಣಿಗೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿ ಅದರ ನಿವಾರಣೆ ಯಾವ ರೀತಿ ಎಂದು ಸಹಾ ಸಲಹೆಯನ್ನು ನೀಡಿದ್ದಾರೆ ಇದರಿಂದ ನಮ್ಮೆಗ ತುಂಬಾ ಉಪಯುಕ್ತವಾಗಿದೆ ಇದೇ ರೀತಿ ಸೈಬರ್ ಕ್ರೈಂನ ಕೆಂಚಪ್ಪ ರವರು ಸಹಾ ಸೈಬರ್ ಕ್ರೈಂ ಯಾವ ರೀತಿಯಾಗುತ್ತದೆ ಸೈಬರ್ ಅಪರಾಧಿಗಳು ಯಾವ ರೀತಿ ಹಣ ಇದ್ದವರನ್ನು ಯಾಮಾರಿಸುತ್ತಾ ನಮ್ಮಲ್ಲಿನ ಹಣವನ್ನು ತೆಗೆಯುತ್ತಾರೆ ಎಂದು ಉದಾಹರಣೆಯ ಸಹಿತವಾಗಿ ವಿವರಿಸಿದ್ದಾರೆ ಇದು ನಾವುಗಳು ಎಚ್ಚರವಾಗಿ ಇರಲು ಸಹಾಯವಾಗಿದೆ ಎಂದು ಬಿ.ಪಿ.ಪ್ರೇಮನಾಥ ತಿಳಿಸಿದರು.
ಇದಕ್ಕೂ ಮುನ್ನಾ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಖಜಾನೆ ಅಧಿಕಾರಿಗಳಾದ ಅಶೋಕ್ ರವರು ಮಾತನಾಡಿ ಈಗ ನೀವುಗಳು ಸರ್ಕಾರಿ ನೌಕರಿಯನ್ನು ಮಾಡಿ ನಿವೃತ್ತಿ ಜೀವನ ನಡೆಸುವವರಾಗಿದ್ದೀರಾ ನಿಮಗೆ ಸರ್ಕಾರದಿಂದ ಬರುವಂತ ಪಿಂಚಿಣಿಯಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ ಇವುಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಿಮ್ಮ ಪಿಂಚಿಣಿ ನಿಂತು ಹೋಗಬಹುದು, ಈ ಹಿನ್ನಲೆಯಲ್ಲಿ ನಿಮ್ಮ ಸಮಸ್ಯೆ ಎನು ಎಂದು ತಿಳಿದುಕೊಂಡು ಅದರ ನಿವಾರಣೆಗೆ ಮುಂದಾಗಿ ನಮ್ಮ ಇಲಾಖೆಯವತಿಯಿಂದ ಏನಾದರೂ ಸಹಾಯ ಬೇಕಾದರೆ ಯಾವುದೇ ಸಂಕೋಚ ಇಲ್ಲದೆ ನಮ್ಮ ಬಳಿ ಸಮಸ್ಯೆಯನ್ನು ಹೇಳಿದರೆ ಅದರ ನಿವಾರಣೆಗೆ ನಾವು ಸಿದ್ದರಿದ್ದೇವೆ, ಕೆಲವೊಮ್ಮೆ ನಿಮ್ಮ ಸಮಸ್ಯೆಗಳು ನೀವು ಕೆಲಸ ಮಾಡಿದ ಇಲಾಖೆವತಿಯಿಂದ ನಿವಾರಣೆಯಾದರೆ ಮತ್ತೇ ಕೆಲವು ನಮ್ಮ ಇಲಾಖೆಯವತಿಯಿಂದ ನಿವಾರಣೆಯಾಗುತ್ತವೆ ಎಂದರು.
ಸೈಬರ್ ಕ್ರೈಂನ ವೃತ್ತ ನಿರೀಕ್ಷಕರಾದ ಕೆಂಚಪ್ಪರವರು ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಮನೆಗಳ್ಳತನ, ಚೈನ್ ಕಳ್ಳತನದ ಪ್ರಮಾಣಗಳು ಕಡಿಮೆಯಾಗಿ ಸೈಬರ್ ಕ್ರೈಂಗಳು ಹೆಚ್ಚಾಗಿದೆ ಯಾವ ಮನೆಯ ಹತ್ತಿರನೂ ಹೋಗದೇ ಕುಳಿತಲ್ಲಿಯೇ ಮೋಬೈಲ್‍ನ್ನು ಹ್ಯಾಕ್ ಮಾಡಿ ಅದರಿಂದ ಅವರ ಅಕೌಂಟಿನಲ್ಲಿ ಇದ್ದ ಹಣವನ್ನು ಲಪಾಟಿಸುವ ಅಪರಾಧ ಗಳು ಹೆಚ್ಚಾಗಿದೆ, ಈ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್‍ಗಳಿಗೆ ಅನಾವಶ್ಯಕವಾಗಿ ಬರುವಂತ ವಿವಿಧ ರೀತಿಯ ಆಪ್‍ಗಳನ್ನು ಓಪನ್ ಮಾಡಬೇಡಿ ಇದನ್ನು ಓಪನ್ ಮಾಡಿದರೆ ಅಪರಾಧಿಗಳು ಹಣವನ್ನು ಲಪಾಟಿಸಲು ಅವಕಾಶವನ್ನು ನಾವೇ ನೀಡಿದಂತೆ ಆಗುತ್ತದೆ. ನಿಮ್ಮ ಸ್ನೇಹಿತ ಮೊಬೈಲ್ ಹ್ಯಾಕ್ ಮಾಡಿ ಅದರಿಂದ ನಿಮಗೆ ಹಣವನ್ನು ಕಳುಹಿಸುವಂತೆ ಬೇಡಿಕೆಯನ್ನು ಇಡುತ್ತಾರೆ ಈ ರೀತಿ ಹಣವನ್ನು ಕೇಳಿದಾಗಹ ಪೋನ್ ಮಾಡಿ ಅದನ್ನು ದೃಢಪಡಿಸಿಕೊಂಡು ಹಣವನ್ನು ಕಳುಹಿಸಿ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಶಾಖೆಯ ಪ್ರಧಾನ ಕಾರ್ಯದರ್ಶಿ ಟಿ.ತಿಮ್ಮಪ್ಪ, ಖಂಜಾಚಿ ಎನ್.ಆರ್,ಭೈಯಣ್ಣ, ಗೌರವಾಧ್ಯಕ್ಷರಾದ ವೈ.ಚಂದ್ರಶೇಖರ್, ನಿಕಟ ಪೂರ್ವ ಅಧ್ಯಕ್ಷರಾದ ಆರ್,ರಂಗಪ್ಪ ರೆಡ್ಡಿ, ಮನೋರಂಜನಾ ಕೇಂದ್ರದ ಅಧ್ಯಕ್ಷರಾದ ಟಿ.ಆರ್.ಮಂಜುನಾಥ್, ನಿವೃತ್ತ ಪಿಎಸ್.ಐ ನಾಗರಾಜ್, ಜಿಲ್ಲಾ ಖಜಾನೆಯ ಪ್ರಭು, ಸೈಬರ್ ಕ್ರೈಂನ ದಿವಾಕರ್, ಲೋಕೇಶ್ ಭಾಗವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ವಿತರಣೆ ಮಾಡಿ ಗೌರವಿಸಲಾ ಯಿತು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: