ಚಿತ್ರದುರ್ಗ ಜು. 2
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ರವರು ಮತ ಪರಿಷ್ಕರಣೆ ವಿಚಾರವಾಗಿ ತೀರ ಕಳಮಟ್ಟದ ಮಾತುಗಳಾಡುತ್ತಾರೆ.ಒಬ್ಬ ಜವಾಬ್ದಾರಿತ ಸ್ಥಾನದಲ್ಲಿರುವ ವ್ಯಕ್ತಿಗಳು ಅವಶ್ಯಕವಿರುವ ಪ್ರಕ್ರಿಯೆಗೆ ಜವಾಬ್ದಾರಿ ಹೇಳಿಕೆಯನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ಮತದಾರ ಹಾಗಿದ್ದರೆ ಅಂತವರ ಹೆಸರನ್ನು ಮತ ಪಟ್ಟಿಯಿಂದ ಕೈಬಿಡುವುದಿಲ್ಲವೆಂದು ಚುನಾವಣಾ ಆಯೋಗ ಹೇಳಿದೆ.ಜನರನ್ನು ದಾರಿ ತಪ್ಪಿಸುವ.. ಚುನಾವಣಾ ಆಯೋಗದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ.ಮತ ಪರಿಷ್ಕರಣೆ ಪ್ರಕ್ರಿಯ ಸರಿಯಿಲ್ಲ ಎಂದು ಒಂದು ಕಡೆ ಹೇಳುತ್ತಾರೆ.. ಇನ್ನೊಂದು ಕಡೆ ಮತ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದಾಖಲೆ ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಸಿಗುವುದಿಲ್ಲ ಎಂದು ಹೇಳುವ ಮುಖಾಂತರ ದ್ವಂದ್ವ ನಿಲುವುಗಳನ್ನು ಕೊಡುತ್ತಿದ್ದಾರೆ ಎಂದು ದೂರಿದರು.
ನೀವು ಸುಳ್ಳು ಮತದಾರರನ್ನು ಸೇರಿಸಿದ್ದು ಅವರನ್ನು ಉಳಿಸಿಕೊಳ್ಳುವ ದೃಷ್ಟಿನಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ.ಉದಾಹರಣೆಗೆ ಪ್ರಕಾಶ್ ರಾಜ್ ರಂತವರು 3-4 ಕಡೆ ಮತದಾನದ ಹಕ್ಕನ್ನು ಹೊಂದಿದ್ದಾರೆ ಈಗಾಗಲೇ ಅವರ ಮೇಲೆ ವಾರೆಂಟ್ ಜಾರಿಯಾಗಿದೆ… ಪ್ರಕಾಶ್ ರಾಜ್ ನಂತವರು ರಾಜ್ಯದಲ್ಲಿ ಎಷ್ಟು ಜನ ಇರಬಹುದು…? ಇದು ಸರಿಯಾಗುವುದು ಬೇಡವಾ…? ಇದು ಚುನಾವಣಾ ಪ್ರಕ್ರಿಯೆಗೆ ಮಾರಕ ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: