ಮುಕ್ತಿಧಾಮದಲ್ಲಿ ಸಾರ್ಥಕ ಸೇವೆ: ಹರಿಶ್ಚಂದ್ರ ಪ್ರತಿಮೆಗೆ ಶಿಲಾನ್ಯಾಸ, ಮುಕ್ತಿ ವಾಹನ ಲೋಕಾರ್ಪಣೆ ಕಾರ್ಯಕ್ರಮ.

ಚಿತ್ರದುರ್ಗ ಜು. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಆಶಾಶ್ವತವಾದ ಜೀವನದಲ್ಲಿ ಶಾಶ್ವತವಾದ ಕಾರ್ಯವನ್ನು ಮಾಡುವುದರ ಮೂಲಕ ಜೀವನವನ್ನು ಪವಿತ್ರವಾಗಿಡಬೇಕಿದೆ ಎಂದು ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಮುಕ್ತಿಧಾಮದಲ್ಲಿ ದೇವಸ್ಥಾನದ ಆವರಣದಲ್ಲಿ ಸತ್ಯಶ್ಚಂದ್ರ ಪಾರ್ಕನಲ್ಲಿ ರಾಜ ಸತ್ಯ ಹರಿಶ್ಚಂದ್ರರವರ ಪ್ರತಿಮೆಯ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ದಿ.ಶ್ರೀಮತಿ ಕೆಂಚಮ್ಮ, ಮತ್ತು ದಿ, ವೀರಬಸಪ್ಪ ಸ್ಮರಣಾರ್ಥ ಅವರ ಕುಟುಂಬದ ಸದಸ್ಯರಿಂದ ಸಾರ್ವಜನಿಕ ಉಪಯೋಗಕ್ಕಾಗಿ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‍ಗೆ ಇವರಿಂದ ಮುಕ್ತಿ ವಾಹನದ ಕೀ ಹಸ್ತಾಂತರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಇಲ್ಲಿ ಯಾರೂ ಸಹಾ ಶಾಶ್ವತ ಅಲ್ಲ ಎಲ್ಲರು ಒಂದು ದಿನ ಸಾಯಲೇ ಬೇಕಿದೆ ಸಾಯುವುದರೊಳಗಾಗಿ ಉತ್ತಮವಾದ ಕಾರ್ಯಗಳನ್ನು ಮಾಡಿದರೆ ಸತ್ತಾಗ ಜನ ನೆನಸುತ್ತಾರೆ, ಇದ್ದಾಗ ನಾನು ನನ್ನದು ಎನ್ನುವ ಮಾನವ ಸತ್ತಾಗ ಮಾತ್ರ ಯಾವುದನ್ನು ತೆಗೆದುಕೊಂಡು ಹೋಗದೆ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುತ್ತಾನೆ, ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮ ಮನೆ ಎನ್ನುವಂತೆ ಇಲ್ಲಿ ಎಲ್ಲರು ನಿಮಿತ್ಯ ಮಾತ್ರ ಭಗವಂತ ಕರೆದಾಗ ಎಲ್ಲರು ಹೊಗಲೇ ಬೇಕಿದೆ ಇಲ್ಲ ಎನ್ನವವರು ಯಾರು ಇಲ್ಲ ಎಂದರು.

ಕಳೆದ 20-30 ವರ್ಷಗಳ ಹಿಂದೆ ಸಶ್ಮಾನಗಳನ್ನು ನೋಡಿದರೆ ಅಲ್ಲಿ ಕಾಡಿನ ರೀತಿಯಲ್ಲಿ ಇರುತ್ತಿತ್ತು ಸ್ವಚ್ಚತೆ ಇರುತ್ತಿರಲಿಲ್ಲ ವಾಸ ಇರುವುದಿಲ್ಲ, ಕಲ್ಲು ಗುಂಡಿಗಳಿಂದ ಕೂಡಿರುತ್ತಿತ್ತು ಹಂದಿಗಳು ವಾಸ ಮಾಡುತ್ತಿದ್ದವು ಆದರೆ ಈಗ ಸ್ಮಶಾನ ಎಂದರೆ ಒಂಧು ರೀತಿಯಲ್ಲಿ ಉತ್ತಮವಾದ ವಾತಾವರಣವನ್ನು ಉಂಟು ಮಾಡುವ ಜಾಗವಾಗಿದೆ ಇಲ್ಲಿ ಬಂದಾಗ ಮಾನವನಿಗೆ ವೈರಾಗ್ಯ ಬರುತ್ತದೆ, ಜೀವನದಲ್ಲಿ ಏನು ಇಲ್ಲ ಎಲ್ಲವೂ ನಶ್ವರ, ಬದುಕಿನಲ್ಲಿ ನನ್ನದು ಎನ್ನುವುದು ಯಾವುದು ಇಲ್ಲ ನಾವು ಎಷ್ಟೇ ಹೊರಾಟ ನಡೆಸಿದರು ಸಹಾ ಕೊನೆಯಲ್ಲಿ ಇಲ್ಲಿಗೆ ಬರಲೇ ಬೇಕಿದೆ ಎಂದು ಭಾವನೆ ಮೂಡುತ್ತದೆ, ಈ ಹಿನ್ನಲೆಯಲ್ಲಿ ನಾವು ಬದುಕಿದ್ಧಾಗ ದಾನ ಧರ್ಮಗಳನ್ನು ಮಾಡುವಂತ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ನಾವು ಬದುಕಿದ್ದಕ್ಕೂ ಸಹಾ ಸಾರ್ಥಕವಾಗುತ್ತದೆ ಎಂದು ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಗುರುಮೂರ್ತಿ ಮಾತನಾಡಿ, ಕಳೆದ ಹಲವಾರು ವರ್ಷಗಳ ಹಿಂದೆ ಈ ಜಾಗ ಯಾರು ಸಹಾ ಓಡಾಡದ ಸ್ಥಳವಾಗಿತ್ತು ಈ ಸಮಯದಲ್ಲಿ ಇದನ್ನು ಸರ್ಕಾರದ ಅನುದಾನ ಇಲ್ಲದೆ ದಾನಿಗಳ ಸಹಾಯದಿಂದ ಅಭೀವೃದ್ದಿಯನ್ನು ಮಾಡಲಾಗಿದೆ ಶಿವನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ ಇದೆ ಮೇಲೆ 31 ಅಡಿಯ ಶಿವನ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ, ಉತ್ತಮವಾದ ಪಾರ್ಕ ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ ಸಶ್ಮಾನವನ್ನು ಕಾದ ರಾಜ ಸತ್ಯ ಹರಿಶ್ಚಂದ್ರರವರ ಪ್ರತಿಮೆಯ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಶ್ರೀಗಳಿಂದ ಮಾಡಿಸಲಾಗಿದೆ. ಇದರ ವೆಚ್ಚ 15 ಲಕ್ಷ ರೂ ವೆಚ್ಚದಲ್ಲಿ ಸಾರ್ವಜನಿಕರ ಸಹಾಯದಿಂದ ನಿರ್ಮಾಣ ಮಾಡಲಾಗುತ್ತದೆ ಇದ್ದಲ್ಲದೆ ದಿ.ಶ್ರೀಮತಿ ಕೆಂಚಮ್ಮ, ಮತ್ತು ದಿ, ವೀರಬಸಪ್ಪ (ಬ್ಯಾಂಡ್ ಮಾಸ್ಟರ್) ಸ್ಮರಣಾರ್ಥ ಅವರ ಪುತ್ರರಾದ ವಿ.ಎಸ್.ಕುಬೇರ್ ಹಾಗೂ ವಿ.ಎಸ್, ಗುರುಮೂರ್ತಿ ಹಾಗೂ ಕುಟುಂಬದ ಸದಸ್ಯರಿಂದ ಸಾರ್ವಜನಿಕ ಉಪಯೋಗಕ್ಕಾಗಿ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‍ಗೆ ಇವರಿಂದ 16 ಲಕ್ಷ ರೂ. ವೆಚ್ಚದಲ್ಲಿ ಮುಕ್ತಿ ವಾಹನವನ್ನು ನೀಡಲಾಗುತ್ತಿದೆ. ನಮ್ಮ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಆದಾಯ ಇಲ್ಲ ಈ ಹಿನ್ನಲೆಯಲ್ಲಿ ಮುಕ್ತಿ ವಾಹನ ಉಪಯೋಗ ಮಾಡುವವರು ಕನಿಷ್ಟ ದರವನ್ನು ನೀಡಬೇಕಿದೆ ಇದರ ಬಗ್ಗೆ ಟ್ರಸ್ಟ್‍ನ ಪದಾಧಿಕಾರಿಗಳು ನಿರ್ಣಯ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷರಾದ ಅಶೋಕ್, ಹನುಮಂತಪ್ಪರವರ ಪತ್ನಿ ನರಸಮ್ಮ, ದೂರೆಸ್ವಾಮಿ, ಗುತ್ತಿಗೆದಾರರಾದ ಕುಮಾರ್, ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ಕಾಂಗ್ರೆಸ್ ಓಬಿಸಿಯ ಎನ್,ಡಿ.ಕುಮಾರ್, ರೋಟರಿಯ ಎಸ್.ವಿರೇಶ್, ವೀರಭದ್ರಸ್ವಾಮಿ, ಮಧು, ಮುರಾರ್ಜಿ, ಓಂಕಾರ್, ಯೋಗ ಗುರು ಚಿನ್ಮಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು. ಸೋಮಣ್ಣ ಪ್ರಾರ್ಥಿಸಿದರೆ ರಾಜು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿನ್ನೆ ನಿಧನರಾದ ರಾಜ್ಯಸಭಾದ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪರವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *