ನಮಸ್ಕಾರ ಓದುಗರೆ, ಇಂದಿನ ‘ಸಮಗ್ರ ಸುದ್ದಿ ವಿಶೇಷ’ ವಿಭಾಗದಲ್ಲಿ ಮುಂಬರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (KPSC, FDA, SDA, Police Constable, PSI, Banking, ಇತ್ಯಾದಿ) ಉಪಯುಕ್ತವಾಗುವ ಪ್ರಮುಖ 10 ಸಾಮಾನ್ಯ ಜ್ಞಾನದ (General Knowledge) ಪ್ರಶ್ನೆ ಮತ್ತು ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: ಹಸಿರು ಕ್ರಾಂತಿಗೆ (Green Revolution) ಸಂಬಂಧಿಸಿದ ಪ್ರಮುಖ ಧಾನ್ಯ ಯಾವುದು?
- ಉತ್ತರ: ಗೋಧಿ
ಪ್ರಶ್ನೆ 2: ಕೃಷಿ ಭೂಮಿಯಲ್ಲಿ ಮಣ್ಣಿಗೆ ಜಿಪ್ಸಮ್ (Gypsum) ಅನ್ನು ಸೇರಿಸಲು ಪ್ರಮುಖ ಕಾರಣವೇನು?
- ಉತ್ತರ: ಮಣ್ಣಿನ ಕ್ಷಾರತೆಯನ್ನು (Alkalinity) ಕಡಿಮೆ ಮಾಡಲು
ಪ್ರಶ್ನೆ 3: ಬೆಂಕಿ ಕಡ್ಡಿಯ ತುದಿಗೆ ಬಳಸಲ್ಪಡುವ ಪ್ರಮುಖ ರಾಸಾಯನಿಕ ಪದಾರ್ಥ ಯಾವುದು?
- ಉತ್ತರ: ಆಂಟಿಮನಿ ಟ್ರೈ ಸಲ್ಫೈಡ್ (Antimony trisulfide)
ಪ್ರಶ್ನೆ 4: ಭಾರತ ಸಂವಿಧಾನದ ಯಾವ ಭಾಗವನ್ನು ‘ಭಾರತದ ಮ್ಯಾಗ್ನಾಕಾರ್ಟ್’ (Magna Carta of India) ಎಂದು ಕರೆಯಲಾಗುತ್ತದೆ?
- ಉತ್ತರ: ಸಂವಿಧಾನದ ಭಾಗ-೩ (ಮೂಲಭೂತ ಹಕ್ಕುಗಳು)
ಪ್ರಶ್ನೆ 5: ಶಿಕ್ಷಣ ಪಡೆಯುವುದು ಮಗುವಿನ ಮೂಲಭೂತ ಹಕ್ಕು ಎಂದು ಸಂವಿಧಾನದ ಯಾವ ವಿಧಿಯು ಸ್ಪಷ್ಟವಾಗಿ ತಿಳಿಸುತ್ತದೆ?
- ಉತ್ತರ: ೨೧ ಎ (21 A) ವಿಧಿ
ಪ್ರಶ್ನೆ 6: ತ್ಯಾಜ್ಯ ವಸ್ತುಗಳಿಂದಲೇ ನಿರ್ಮಿಸಲಾದ ಪ್ರಸಿದ್ಧ ‘ರಾಕ್ ಗಾರ್ಡನ್’ (Rock Garden) ಯಾವ ನಗರದಲ್ಲಿದೆ?
- ಉತ್ತರ: ಚಂಡೀಗಢ (Chandigarh)
ಪ್ರಶ್ನೆ7: ಭಾರತದ ಯಾವ ನಗರವನ್ನು ‘ಪೂರ್ವದ ವೆನಿಸ್’ (Venice of the East) ಎಂದು ಕರೆಯಲಾಗುತ್ತದೆ?
- ಉತ್ತರ: ಅಲಪ್ಪುಳ (Alappuzha – ಕೇರಳ ರಾಜ್ಯ)
ಪ್ರಶ್ನೆ 8: ವಿಶ್ವ ಸ್ನೂಕರ್ ಪ್ರಶಸ್ತಿಯನ್ನು (World Snooker Championship) ಪಡೆದ ಮೊಟ್ಟಮೊದಲ ಕನ್ನಡಿಗ ಯಾರು?
- ಉತ್ತರ: ಪಂಕಜ್ ಅಡ್ವಾಣಿ
ಪ್ರಶ್ನೆ 9: CBDT ಇದರ ವಿಸ್ತೃತ ರೂಪವೇನು?
- ಉತ್ತರ: ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (Central Board of Direct Taxes)
ಪ್ರಶ್ನೆ 10:ಇಸ್ರೋ (ISRO) ಸಿದ್ಧಪಡಿಸುತ್ತಿರುವ, ಭಾರತದ ಮೊಟ್ಟಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ (Manned Space Mission) ಹೆಸರೇನು?
ಉತ್ತರ: ಗಗನ್‌ಯಾನ್ (Gaganyaan)
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j