ಮಳೆ ಕೊರತೆಯಿಂದ ರೈತರ ಸಂಕಷ್ಟ: ಚಿತ್ರದುರ್ಗವನ್ನು ಬರಪೀಡಿತ ಜಿಲ್ಲೆ ಘೋಷಿಸಲು ಅಖಂಡ ಕರ್ನಾಟಕ ರೈತ ಸಂಘ ಆಗ್ರಹ.

ಚಿತ್ರದುರ್ಗ ಜು. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಈ ವರ್ಷ ಶೇಕಡ 20 ಮಳೆ ಕೊರತೆ ಇದೆ. ತುಂಗಭದ್ರಾ ಮತ್ತು ವಾಣಿವಿಲಾಸ ಜಲಾಶಯಗಳಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಆದ್ದರಿಂದ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಒಣ ಭೂಮಿಗೆ ಎಕರೆಗೆ 25,000 ರೂ. ಮತ್ತು ನೀರಾವರಿ ಭೂಮಿಗೆ 35,000 ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳನ್ನು ಅಖಂಡ ಕರ್ನಾಟಕ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಶಾಂತ ಅಶೋಕ್ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜು.25ರಂದು ಚಿತ್ರದುರ್ಗಕ್ಕೆ ಮುಖ್ಯಮಂತ್ರಿಗಳು ರಾಜ್ಯದ 9 ಜಿಲ್ಲೆಗಳ ಸಭೆಯನ್ನು ನಡೆಸಲಿದ್ದಾರೆ. ಈ ಸಮಯದಲ್ಲಿ ಅವರಿಗೆ ಮಗೆ ಚಿತ್ರದುರ್ಗದ ಪ್ರಮುಖ ಬೆಳೆಗಳ ಸಸಿ ಕೊಟ್ಟು ‘ಹಸಿರು ಸ್ವಾಗತ” ಮಾಡುತ್ತಿದ್ದೇವೆ. ಈ ಸಸಿ ಬೆಳೆದಂತೆ ರೈತರ ಬದುಕೂ ಹಸಿರಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಈ ವರ್ಷ ಶೇಕಡ 20 ಮಳೆ ಕೊರತೆ ಇದೆ. ತುಂಗಭದ್ರಾ ಮತ್ತು ವಾಣಿವಿಲಾಸ ಜಲಾಶಯಗಳಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಒಣ ಭೂಮಿಗೆ ಎಕರೆಗೆ 25,000 ರೂ. ಮತ್ತು ನೀರಾವರಿ ಭೂಮಿಗೆ 35,000 ರೂ. ಪರಿಹಾರ ನೀಡಬೇಕು.

ಗ್ಯಾರಂಟಿ ಯೋಜನೆ ಬೇಡ – ಸಾಮೂಹಿಕ ಅಭಿವೃದ್ಧಿಗೆ ಅನುದಾನ ಬೇಕು. ನಮಗೆ ವೈಯಕ್ತಿಕ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇಲ್ಲ. ಗ್ಯಾರಂಟಿಗೆ ಮೀಸಲಿಟ್ಟ ಹಣವನ್ನು ಕರೆ ತುಂಬಿಸುವುದು, ಗೋದಾಮು, ಗ್ರಾಮೀಣ ಕೃಷಿ ಮಾರುಕಟ್ಟೆಗೆ ನೇರವಾಗಿ ಬಿಡುಗಡೆ ಮಾಡಬೇಕು. ಇದರಿಂದ ಇಡೀ ಗ್ರಾಮ ಅಭಿವೃದ್ಧಿ ಆಗುತ್ತೆ – ಮಹಿಳಾ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ, ಸಹಕಾರ ಸಂಘಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಆಅ ಕಾರ್ಡ್ ವಿತರಣೆಯನ್ನು ವೇಗಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಕಾಯಿದೆ-2026 ವಾಪಸ್ ಪಡೆದು, ಕೃಷಿ ಪಂಪ್ ಸೆಟ್ ಗಳಿಗೆ 10 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕು, ಇವುಗಳನ್ನು ಬಜೆಟ್‍ನಲ್ಲಿಯೇ ಜಾರಿಗೊಳಿಸಿ, ಚಿತ್ರಮರ್ಗದ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಲಾಯಿತು.

ಗೋಷ್ಟಿಯಲ್ಲಿ ರೈತ ಮುಖಂಡರುಗಳಾದ ಶಂಕ್ರಪ್ಪ, ಶಿವಣ್ಣ, ಹನುಮಂತರಾಯಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *