ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಆಭರಣ ಖರೀದಿಸುವ ಯೋಜನೆಯಲ್ಲಿದ್ದೀರಾ? ಹಾಗಾದರೆ ನಿಮಗೊಂದು ಗುಡ್ ನ್ಯೂಸ್. ವೀಕೆಂಡ್ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಕುಸಿತ ಕಂಡಿದೆ. ಅಕ್ಟೋಬರ್ 31 ರ ಶನಿವಾರದಂದು, 10 ಗ್ರಾಂ ಶುದ್ಧ ಚಿನ್ನದ ಬೆಲೆಯು ಬರೋಬ್ಬರಿ 3,380 ರೂ. ಕಡಿಮೆಯಾಗಿದ್ದರೆ, ಇತ್ತ ಬೆಳ್ಳಿ ಬೆಲೆಯಲ್ಲಿ ಒಂದೇ ದಿನಕ್ಕೆ 10,000 ರೂ.ಗಳ ಬೃಹತ್ ಇಳಿಕೆಯಾಗಿ ಗ್ರಾಹಕರಿಗೆ ರಿಲೀಫ್ ನೀಡಿದೆ.
ಇಂದಿನ ಚಿನ್ನದ ದರದ ಸಂಪೂರ್ಣ ವಿವರ (ಅಕ್ಟೋಬರ್ 31):
- 24 ಕ್ಯಾರೆಟ್ ಚಿನ್ನ: 1 ಗ್ರಾಂ ಬೆಲೆಯಲ್ಲಿ 338 ರೂ. ಇಳಿಕೆಯಾಗಿ 13,888 ರೂ.ಗೆ ತಲುಪಿದೆ. 10 ಗ್ರಾಂ ಅಪರಂಜಿ ಚಿನ್ನದ ದರ 3,380 ರೂ. ಕಡಿತಗೊಂಡು 1,38,880 ರೂ.ಗೆ ದಾಖಲಾಗಿದೆ.
- 22 ಕ್ಯಾರೆಟ್ (ಆಭರಣ) ಚಿನ್ನ: ಪ್ರತಿ ಗ್ರಾಂಗೆ 310 ರೂ. ತಗ್ಗಿದ್ದು, 12,730 ರೂ.ಗೆ ಮಾರಾಟವಾಗುತ್ತಿದೆ. 10 ಗ್ರಾಂ ಬೆಲೆ 3,100 ರೂ. ಇಳಿಕೆಯಾಗಿ 1,27,300 ರೂ.ಗೆ ಲಭ್ಯವಿದೆ.
- 18 ಕ್ಯಾರೆಟ್ ಚಿನ್ನ: 1 ಗ್ರಾಂ ಬೆಲೆ 253 ರೂ. ಇಳಿಕೆಯಾಗಿ 10,416 ರೂ. ತಲುಪಿದ್ದರೆ, 10 ಗ್ರಾಂ ಬೆಲೆಯಲ್ಲಿ 2,530 ರೂ. ಕುಸಿತವಾಗಿ 1,04,160 ರೂ.ಗೆ ಮಾರಾಟವಾಗುತ್ತಿದೆ.


ಬೆಳ್ಳಿ ಬೆಲೆಯಲ್ಲಿ ಬೃಹತ್ ಕುಸಿತ ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಸತತ ಮೂರನೇ ದಿನ ಭಾರಿ ಇಳಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕೆ.ಜಿ ಬೆಳ್ಳಿಗೆ ಬರೋಬ್ಬರಿ 10,000 ರೂ. ಕುಸಿದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ 2,00,000 ರೂ.ಗೆ ಲಭ್ಯವಿದೆ. ಪ್ರತಿ 1 ಗ್ರಾಂ ಬೆಳ್ಳಿಯ ದರ 10 ರೂ. ಕಡಿಮೆಯಾಗಿ 200 ರೂ.ಗೆ ತಲುಪಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು