ಚಿತ್ರದುರ್ಗ, ಜು,24
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ನಿಮಿತ್ತ ನಡೆಸುತ್ತಿರುವ ಮಾಸಿಕ ಗಮಕ ಸಂಭ್ರಮದ 36ನೇ ಅಧಿವೇಶನವು ದಿನಾಂಕ 26-07-2026ರ ಭಾನುವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್.ಬಡಾವಣೆಯ ಶ್ರೀಗಣಪತಿ ದೇವಾಲಯದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಗಮಕ ಗಾಯನವನ್ನು ಶ್ರೀಮತಿ ಮೀನಾಕ್ಷಿಭಟ್,ಸಂಗೀತ ಶಿಕ್ಷಕರು,ಚಿತ್ರದುರ್ಗ ಇವರು ನಡೆಸಿಕೊಡಲಿದ್ದು, ಉಪನ್ಯಾಸವನ್ನುಡಾ.ತಾರಿಣಿಶುಭದಾಯಿನಿ ಆಂಗ್ಲ ಭಾಷಾ ಪ್ರಾಧ್ಯಾಪಕರು ಹಾಗೂ ಪ್ರಾಚಾರ್ಯರು, ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ ಇವರು ಮಹಾಭಾರತದಲ್ಲಿ ಭೀಷ್ಮರ ವ್ಯೆಶಿಷ್ಟ್ಯ’ ವಿಷಯ ಕುರಿತು ಮಾತನಾಡಲಿದ್ದಾರೆ.
ಕಲಾಭಿಮಾನಿಗಳು ಆಗಮಿಸಿ ಕಲೆಯನ್ನು ಪ್ರೋತ್ಸಾಹಿಸಬೇಕಾಗಿ ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್.ಬಡಾವಣೆಯ ಶ್ರೀಗಣಪತಿ ದೇವಾಲಯ ಸೇವಾ ಸಮಿತಿಯವರು ಕೋರಿದ್ದಾರೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j