ಕೆಪಿಸಿಸಿ ಜವಾಹರ್ ಬಾಲ್ ಮಂಚ್ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಜಿ. ದಾದಾಪೀರ್ ನೇಮಕ.

ಚಿತ್ರದುರ್ಗ ಸೆ. 12

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜವಾಹರ್ ಬಾಲ್ ಮಂಚ್‍ನ ಜಿಲ್ಲಾಧ್ಯಕ್ಷರಾಗಿ ಜಿ.ದಾದಾಪೀರ್ ರವರನ್ನು ಜವಾಹರ ಬಾಲ್ ಮಂಚ್‍ನ ರಾಜ್ಯಧ್ಯಕ್ಷರಾದ ಹೆಚ್.ಜೆ. ಮೈನದ್ದೀನ್ ನೇಮಕ ಮಾಡಿದ್ದು ಅದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ವಿತರಣೆ ಮಾಡಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲ್, ಜವಹರಬಾಲ್‍ಮಂಚ್ ರಾಷ್ಟ್ರೀಯ ಅಧ್ಯಕ್ಷರಾದ ಜೆ.ವಿ. ಹರಿರವರ ಆದೇಶದ ಮೇರೆಗೆ ಚಿತ್ರದುರ್ಗ ಜವಾಹರ್‍ಬಾಲ್‍ಮಂಚ್‍ನ ಜಿಲ್ಲಾಧ್ಯಕ್ಷರಾಗಿ ಜಿ.ದಾದಾಪೀರ್ ರವರನ್ನು ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಜಿಲ್ಲಾಧ್ಯಕ್ಷರಾಗಿ ಜಿ.ದಾದಾಪೀರ್‍ರವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಎಂ.ಕೆ.ತಾಜ್‍ಪೀರ್ 140 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಪಡೆದುಕೊಂಡರು ಖುಷಿ ಪಡಬೇಕು. ದೇಶದ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ್ದು, ಕಾಂಗ್ರೆಸ್ ಪಕ್ಷ ಅನೇಕ ವರ್ಷಗಳಿಂದಲೂ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧುಗೌಡ, ವಾಸಿಂ, ರಹಿಮಾನ್, ಉಮೇಶ್, ಅಬಿದ್ ಉಸೇನ್ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *