ಚಿತ್ರದುರ್ಗ ಆ. 5
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತರಿಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಪರಿಹಾರಗಳನ್ನು ಒದಗಿಸಲು ಬದ್ಧರಾಗಿರುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನೂತನ ಸಚಿವರಾದ ಟಿ.ರಘುಮೂರ್ತಿ ಭರವಸೆ ನೀಡಿದರು.
ಹಿರಿಯೂರು ತಾಲ್ಲೂಕಿನ ಆನೆಸಿಂದ್ರಿ ಗ್ರಾಮ ಬಳಿ ಸಚಿವ ಟಿ ರಘುಮೂರ್ತಿ ಮಾಧ್ಯಮದವರೊಂದಿಗೆ ಮಾತನಾಡಿ ಜಿಲ್ಲೆಯ ಜನರ ಕಷ್ಟ ಅರಿತು ಸಹಾಯಕ್ಕೆ ಸಿಎಂ ಡಿಕೆಶಿ ಸೂಚನೆ ನೂತನ ಸಚಿವಗಿರಿಯಲ್ಲೇ ಕಾಲಹರಣ ಮಾಡದಂತೆ ಸೂಚನೆಜಿಲ್ಲೆಯಲ್ಲಿ ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಬಿತ್ತನೆ ಮಾಡದವರಿಗೂ ಶೇ.25ರಷ್ಟು ವಿಮೆ ಪರಿಹಾರಕ್ಕೆ ಕ್ರಮಮಳೆ ಇಲ್ಲದೆ ಬೆಳೆ ಹಾನಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಬರ ನಿರ್ವಹಣೆಗೆ ರಾಜ್ಯ, ಕೇಂದ್ರದಿಂದ ಸಹಾಯದ ಕೆಲಸ ಸಿಗಬೇಕಿದೆ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಯೋಜನೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಯಶಸ್ವಿಯಾಗಿದ್ದು, ಈವರೆಗೆ ಸುಮಾರು 2.35 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 3 ಲಕ್ಷಕ್ಕೂ ಹೆಚ್ಚು ರೈತರಿದ್ದು, ಅವರಲ್ಲಿ ಸುಮಾರು 1,90,000 ಕೃಷಿ ಕ್ಷೇತ್ರಕ್ಕೆ ಸೇರಿದ ರೈತರು ಹಾಗೂ 45,000 ತೋಟಗಾರಿಕೆ ಕ್ಷೇತ್ರದ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಚಳ್ಳಕೆರೆಯಲ್ಲಿ ಶಾಸಕರಾಗಿ ನಡೆಸಿದ ಸಭೆಗಳು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ ಒಂದು ತಿಂಗಳಿನಿಂದ ನಡೆಸಿದ ನಿರಂತರ ಜಾಗೃತಿ ಅಭಿಯಾನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಬಿತ್ತನೆ ಮಾಡಿದ ಹಾಗೂ ಬಿತ್ತನೆ ಮಾಡದ ಎರಡೂ ಪರಿಸ್ಥಿತಿಯ ರೈತರಿಗೆ ಈ ವಿಮೆಯಿಂದ ಅನುಕೂಲವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಎಲ್ಲಾ ಹೆಚ್ಚುವರಿ ನೆರವನ್ನು ರೈತರಿಗೆ ತಲುಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದ ಅವರು, ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಹೆಚ್ಚಿನ ರೈತರಿಗೆ ಬೆಳೆ ವಿಮೆಯ ಸುರಕ್ಷತೆ ಸಿಗುವಂತೆ ಮಾಡಲಾಗುವುದು. ಬಿತ್ತನೆ ಮಾಡಿರುವ ಹಾಗೂ ಬಿತ್ತನೆ ಮಾಡದ (ಬಿತ್ತನೆವಿಫಲಗೊಂಡ/ತಡೆಹಿಡಿದ)ಎರಡೂ ಮಾದರಿಯ ರೈತರಿಗೆ ಈ ವಿಮೆಯಿಂದ ಅನುಕೂಲ ವಾಗಲಿದೆ ಎಂದು ಸಚಿವರು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಒತ್ತಡ ಹಾಕುತ್ತೇನೆ ಕೇಂದ್ರ ಸರ್ಕಾರ 5300 ಕೋಟಿ ರೂ. ಘೋಷಿಸಿತ್ತು ನಿರೀಕ್ಷೆ ಇರಲಿ, ರಾಜ್ಯ ಸರ್ಕಾರ ಹಣ ನೀಡಲಿ ಎಂದು ಒತ್ತಾಯಿಸುತ್ತೇವೆ. ಶೀಘ್ರಗತಿಯಲ್ಲಿ ಭದ್ರಾ ನೀರು ಹರಿಸುವ ಕೆಲಸ ಹನಿ ನೀರಾವರಿ ಹೊರತುಪಡಿಸಿ ಶೀಘ್ರ ಕೆರೆಗೆ ನೀರಿ ತುಂಬುವ ಕೆಲಸ ಮಾಡುತ್ತೇವೆ ಎಂದು ಸಚಿವ ರಘುಮೂರ್ತಿ ಭರವಸೆಯನ್ನು ನೀಡಿದರು.
ಸಚಿವ ಸ್ಥಾನ ಕೈತಪ್ಪಿದವರಲ್ಲಿ ಅಸಮಾಧಾನ ಸ್ಪೋಟ ವಿಚಾರ ಅರ್ಹರು, ಆಕಾಂಕ್ಷಿಗಳಿಗೆ ಅಸಮಾಧಾನ ಖಂಡಿತ ಆಗುತ್ತದೆ ಅರ್ಹ ಶಾಸಕರಿಗೆ ಅಸಮಾಧಾನ ಆಗುತ್ತದೆ ಇದರ ಬಗ್ಗೆ ಸಿಎಂ ಮತ್ತು ಹೈಕಮಾಂಡ್‍ನಿಂದ ಸರಿಪಡಿಸುವ ಕೆಲಸ ವಾಗುತ್ತದೆ ಎಂದ ಸಚಿವರು ಖಾತೆ ಬಗ್ಗೆ ನಿರೀಕ್ಷೆ ಇಲ್ಲ, ಯಾವ ಖಾತೆ ಕೊಟ್ಟರೂ ನಿರ್ವಹಿಸುವೆ ಜನರ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ ವಾಲ್ಮೀಕಿ ನಿಗಮ ಹಗರಣದ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ವರಿಷ್ಠರು ಕಾನೂನು ಸಲಹೆ ಪಡೆದು ವರಿಷ್ಠರಿಂದ ಸಂಪುಟಕ್ಕೆ ಸೇರ್ಪಡೆ ಮಾಡಿರಬಹುದು ಇದರ ಬಗ್ಗೆ ಪೂರ್ಣ ಮಾಹಿತಿ ನನಗೆ ಇನ್ನೂ ಗೊತ್ತಿಲ್ಲ ಯಾರೇ ಪ್ರಶ್ನಿಸಿದರೂ ಉತ್ತರಿಸುವ ಮಾಹಿತಿ ವರಿಷ್ಠರ ಬಳಿಯಿದೆ ಎಂದು ತಿಳಿಸಿ ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಇಲ್ಲದ ಗೊಂದಲ ಇದೆ ಖಂಡಿತ ವರಿಷ್ಠರು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದರು.