ಚಿತ್ರದುರ್ಗ ಆ. 5
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಾವಿರ ಪದಗಳಲ್ಲಿ ವಿಶ್ಲೇಷಣೆ ಮಾಡಬಹುದಾದುದನ್ನು ಒಂದು ಛಾಯಾಚಿತ್ರ ತಿಳಿಸುವುದರಿಂದ ಛಾಯಾಚಿತ್ರ ಕ್ಕಿರುವ ಶಕ್ತಿ ಎಂತಹದು ಎಂಬುದನ್ನು ತಿಳಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಗುರುನಾಥ್ ತಿಳಿಸಿದರು.
ಚಿತ್ರದುರ್ಗ ನಗರದ ಹೂರ ವಲಯದ ಎಂ.ಕೆ.ಹಟ್ಟಿಯಲ್ಲಿನ ಎಸ್‍ಜೆಎಂ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಕಲಾವಿದ ಜವಳಿ ಶಾಂತಕುಮಾರ ಅವರ ಏಕವ್ಯಕ್ತಿ ಕಲಾ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಸಾವಿರ ಪದಗಳು ತಿಳಿಸುವುದನ್ನು ಒಂದು ಛಾಯಾಚಿತ್ರ ಹೇಳುವುದಲ್ಲದೆ ನಮ್ಮ ಮನದಲ್ಲಿ ಬಹಳ ಕಾಲ ಉಳಿಯು ತ್ತದೆ. ಚಿತ್ರಕಲಾವಿದರ ಶ್ರಮ ಮತ್ತು ಶ್ರದ್ದೆ ಅತ್ಯಂತ ಪ್ರಶಂಸನೀಯ ಚಿತ್ರಕಲಾವಿದರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಚಿತ್ರವನ್ನು ಬರೆಯುವಾಗ ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿ ಸಬೇಕಾಗುತ್ತದೆ. ಹಾಗಾಗಿ ಅವರ ಶ್ರಮ ಮತ್ತು ಶ್ರದ್ದೆ ಅತ್ಯಂತ ಪ್ರಶಂಸನೀಯ ಎಂದರು.
ಮುರುಘಾ ಮಠದ ಸಿಇಓ ಚೆಲುವರಾಜ್ ಮಾತನಾಡಿ ಚಿತ್ರ ಕಲಾವಿದರ ಕೆಲಸ ಸವಾಲಿನ ಕೆಲಸವಾಗಿದ್ದು, ಅವರು ಎಲೆಮರೆಯ ಕಾಯಿಯಂತೆ ಕೆಲಸ ನಿರ್ವಹಿಸುತ್ತಾರೆ ಅವರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನನಗೆ ಚಿತ್ರಗಳನ್ನು ನೋಡಿ ಸಂತೋಷ ಮತ್ತು ನೋವು ಎರಡು ಆಯಿತು. ಕೆಲವು ಚಿತ್ರಗಳು ಜೀವನವನ್ನು ಸುಂದರವಾಗಿಸಿ, ಮನಸ್ಸನ್ನು ಉಲ್ಲಾಸಗೊಳಿಸಿದರೆ, ಮತ್ತೆ ಕೆಲವು ಮನಸ್ಸಿಗೆ ನೋವನ್ನು ನೀಡುತ್ತದೆ. ಇದೇ ಛಾಯಾಚಿತ್ರಕ್ಕಿರುವ ಶಕ್ತಿ ಇಂದಿನ ಎ.ಐ. ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೃತ್ತಿಪರ ಚಿತ್ರಕಲಾವಿದರಿಗೆ ಸತ್ಯಸಂಧತೆ ಮತ್ತು ಧೈರ್ಯ ಅತ್ಯಂತ ಪ್ರಮುಖವಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಚಿತ್ರಕಲಾವಿದರು ಈ ಕ್ಷೇತ್ರಕ್ಕೆ ಬರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ರಾಜೇಶ್ ಕಲಾಕೃತಿಗಳುಳ್ಳ ಕ್ಯಾಟ್‍ಲಾಗ್ ಬಿಡುಗಡೆಗೊಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ ಬಿ. ಆರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಏನ್.ಎಂ.ಪುಷ್ಪವಲ್ಲಿ, ಚಿತ್ರಕಲಾವಿದರಾದ ನಾಗರಾಜ್ ಬೇದ್ರೆ, ಜವಳಿ ಶಾಂತಕುಮಾರ ಭಾಗವಹಿಸಿದ್ದರು. ದೀಪ್ತಿ, ಕೆ. ಎಸ್, ಪ್ರಾರ್ಥಿಸಿದರೆ ಆಶಾರಾಣಿ ಸ್ವಾಗತಿಸಿದರು, ಶಿಕ್ಷಕರಾದ ಅನಿತ. ಎಸ್ ಕಾರ್ಯಕ್ರಮ ನಿರೂಪಿ ಸಿದರು, ಶಿಲ್ಪ ವಂದಿಸಿದರು.
ಈ ಸಂದರ್ಭದಲ್ಲಿ ಶಾಂತ ಕುಮಾರ್‍ರವರು ರಚಿಸಿದ ತೈಲ ವರ್ಣ ಹಾಗೂ ಜಲ ವರ್ಣದ 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು. ಮಕ್ಕಳು, ಶಿಕ್ಷಕರು, ಪೋಷಕರು ಚಿತ್ರಕಲಾ ಪ್ರದರ್ಶನವನ್ನು ವೀಕ್ಷಿಸಿ ಆಸ್ವಾದಿಸಿದರು.