ಸಾರ್ವಜನಿಕ ವಲಯದ ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ಖಾಲಿ ಇರುವ ಒಟ್ಟು 1,576 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಕರ್ನಾಟಕದಲ್ಲಿಯೇ 120ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 27, 2026
- ಅಧಿಕೃತ ವೆಬ್ಸೈಟ್: sbi.co.in
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ವಿವಿಧ ಹುದ್ದೆಗಳು ಮತ್ತು ಅವುಗಳಿಗೆ ಅಗತ್ಯವಿರುವ ವಿದ್ಯಾರ್ಹತೆಯ ವಿವರಗಳು ಇಲ್ಲಿವೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ಅಗತ್ಯ ವಿದ್ಯಾರ್ಹತೆ |
|---|---|---|
| ಜ್ಯೂನಿಯರ್ ಅಸೋಸಿಯೇಟ್ | 1,538 | ಯಾವುದೇ ಪದವಿ |
| ಡೆಪ್ಯುಟಿ ಮ್ಯಾನೇಜರ್ | 30 | ಬಿಇ, ಎಂಇ, ಎಂ.ಎಸ್ಸಿ, ಎಂಸಿಎ |
| ಡೆಪ್ಯುಟಿ ವೈಸ್ ಪ್ರೆಸಿಡೆಂಟ್ | 4 | ಬಿಇ, ಎಂಇ, ಎಂ.ಎಸ್ಸಿ, ಎಂಸಿಎ |
| ಮ್ಯಾನೇಜರ್ | 2 | ಎಂಬಿಎ / ಪಿಜಿಡಿಎಂ / ಪಿಜಿಡಿಬಿಎಂ |
| ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್ | 1 | ಪದವಿ, ಬಿಇ, ಎಂಇ, ಎಂಸಿಎ |
| ವೈಸ್ ಪ್ರೆಸಿಡೆಂಟ್ | 1 | ಪದವಿ, ಬಿಇ, ಎಂಇ, ಎಂಸಿಎ |
ವಯೋಮಿತಿ ಮತ್ತು ಸಡಿಲಿಕೆ
ಅಭ್ಯರ್ಥಿಗಳ ವಯಸ್ಸು ಹುದ್ದೆಗಳಿಗೆ ಅನುಗುಣವಾಗಿ 20 ರಿಂದ 48 ವರ್ಷಗಳ ಒಳಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಈ ಕೆಳಗಿನಂತೆ ಸಡಿಲಿಕೆ ಇರುತ್ತದೆ:
- ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ
- ಎಸ್ಸಿ/ಎಸ್ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷ
- ಪಿಡಬ್ಲ್ಯುಬಿಡಿ (PwBD) ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷ
ಅರ್ಜಿ ಶುಲ್ಕದ ವಿವರ
- ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ: 750 ರೂ. (ಆನ್ಲೈನ್ ಮೂಲಕ ಪಾವತಿಸಬೇಕು)
- ಎಸ್ಸಿ / ಎಸ್ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ (ಉಚಿತ)
ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಸ್ಪೆಷಲಿಸ್ಟ್ ಆಫೀಸರ್ (ಕಾಂಟ್ರಾಕ್ಟ್) ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆ (ಸೆಪ್ಟೆಂಬರ್ನಲ್ಲಿ ನಡೆಯುವ ಸಾಧ್ಯತೆ)
- ಆನ್ಲೈನ್ ಮುಖ್ಯ ಪರೀಕ್ಷೆ (ಅಕ್ಟೋಬರ್ / ನವೆಂಬರ್ನಲ್ಲಿ ನಡೆಯುವ ಸಾಧ್ಯತೆ)
- ಸ್ಥಳೀಯ ಭಾಷಾ ಪರೀಕ್ಷೆ (Local Language Proficiency Test)
- ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
- ಶಾರ್ಟ್ ಲಿಸ್ಟ್ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
- ಎಸ್ಬಿಐ ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆಯಲ್ಲಿ ನೀಡಲಾದ ಲಿಂಕ್ಗೆ ಭೇಟಿ ನೀಡಿ
- ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://ibpsreg.ibps.in/sbijasrdjl26/) - ನಿಮ್ಮ ಹೆಸರನ್ನು ನೋಂದಾಯಿಸಿ, ಬಳಿಕ ಲಾಗಿನ್ ಆಗಿ.
- ಅಪ್ಲಿಕೇಷನ್ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು ಮತ್ತು ಸರಿಯಾದ ಅಳತೆಯ ಫೋಟೋವನ್ನು ಅಪ್ಲೋಡ್ ಮಾಡಿ.
- ಅನ್ವಯವಾಗುವವರು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಒಮ್ಮೆ ಪರಿಶೀಲಿಸಿ, ಎಲ್ಲವೂ ಸರಿಯಾಗಿದ್ದರೆ Submit ಬಟನ್ ಕ್ಲಿಕ್ ಮಾಡಿ.