
ಚಿತ್ರದುರ್ಗ, (ಫೆ.10) : ನಗರದ ಧರ್ಮ ಶಾಲಾ ರಸ್ತೆಯ ನಿವಾಸಿ,ಅರ್ಚಕ ದೇವರಾಜ್ ಭಟ್ (53) ಶುಕ್ರವಾರ ಮುಂಜಾನೆ 2:30 ಕ್ಕೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ 4:30 ಕ್ಕೆ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಗರದ ಪ್ರಮುಖ ದೇವಾಲಯಗಳಾದ ಆನೆ ಬಾಗಿಲ ವೆಂಕಟರಮಣ ಸ್ವಾಮಿ ದೇವಾಲಯ, ಕೆಳಗೋಟೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ವಾಸವಿ ವಿದ್ಯಾಸಂಸ್ಥೆ ಬಳಿಯಿರುವ ಯೋಗಾನರಸಿಂಹ ಸ್ವಾಮಿ ದೇವಾಲಯಗಳ ಅರ್ಚಕರಾಗಿ, ವಾರಕ್ಕೊಮ್ಮೆ ಬೆಟ್ಟದ ಮೇಲಿನ ಗೋಪಾಲಸ್ವಾಮಿ ದೇವಾಲಯಗಳಲ್ಲಿ, ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪಿಸುತ್ತಿದ್ದ ಹಿಂದೂ ಮಹಾಗಣಪತಿಯ ಮತ್ತು ಹೊರಕೇರಿದೇವರ ಪುರ ( HD ಪುರ) ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ(ರಥೋತ್ಸವದ) ಎಲ್ಲಾ ರೀತಿಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದರು.
The post ಅರ್ಚಕ ದೇವರಾಜ್ ಭಟ್ ನಿಧನ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/l7dzZtX
via IFTTT