ನೂರನೇ ವರ್ಷದ ಸಂಭ್ರಮ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಿಂದ ಹೈಟೆಕ್ ಸಮುದಾಯ ಭವನಕ್ಕೆ ಶಂಕುಸ್ಥಾಪನೆ.

ಚಿತ್ರದುರ್ಗ ಆ. 14

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ ನಗರದ ಮಧ್ಯದಲ್ಲಿರುವ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ವತಿಯಿಂದ ಹೈಟೆಕ್ ಸಹಕಾರ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಶುಕ್ರವಾರ ಅದರ ಭೂಮಿ ಪೂಜೆಯನ್ನು ಸೊಸೈಟಿಯ ಆವರಣದಲ್ಲಿ ಆದರ ಆಡಳಿತ ಮಂಡಳಿಯ ಸದಸ್ಯರು ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ಈ ಸೊಸೈಟಿ 1912ರಲ್ಲಿ ಪ್ರಾರಂಭವಾಗಿ ನೂರು ವರ್ಷಗಳನ್ನು ಪೂರೈಸಿದೆ, ಇದರ ಸವಿನೆನಪಿಗಾಗಿ ಈ ಸಮುದಾಯ ಭವನವನ್ನು 195X33 ಅಡಿ ಅಳತೆಯಲ್ಲಿ ಸುಮಾರು 2 ರಿಂದ 3ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮವಾಗಿ ಆಗಿದೆ, ಇದ್ದಲ್ಲದೆ ನಮ್ಮ ಸೊಸೈಟಿಯೂ ರಾಜ್ಯದಲ್ಲಿಯೇ ಎರಡನೇ ಹಳೆಯದಾದ ಸೊಸೈಟಿಯಾಗಿದೆ. ಈಗಾಗಲೇ ಶೇ.70 ರಷ್ಟು ಕೆಲಸವಾಗಿದ್ದು ಇನ್ನೂ ಶೇ.30 ರಷ್ಟು ಮಾತ್ರ ಕೆಲಸವಾಗಬೇಕಿದೆ 2027ರ ಜನವರಿಯಲ್ಲಿ ಇದನ್ನು ಪ್ರಾರಂಭ ಮಾಡಲಾಗುವುದು ಎಂದರು.


ಜಿಲ್ಲೆಯ ಸಚಿವರಾದ ಟಿ.ರಘುಮೂರ್ತಿ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ ಹಾಗೂ ಡಿಸಿಸಿ ಬ್ಯಾಂಕ್‍ನ ಇಲಿಯಾಜ್‍ವುಲ್ಲಾ ಷರೀಫ್ ರವರ ಸಹಕಾರದೊಂದಿಗೆ ಈ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ ಇದಕ್ಕಾಗಿ ಡಿಸಿಸಿ ಬ್ಯಾಂಕ್ ನಲ್ಲಿ 2 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯಲಾಗಿದೆ, ಈ ಸಮುದಾಯ ಭವನದಲ್ಲಿ ಉತ್ತಮವಾದ ಹಾಲ್, ಡೈನಿಂಗ್ ಹಾಲ್, 7 ಕೊಠಡಿ, ಕಿಚನ್ ರೂ. 10 ಜನರ ಲಿಫ್ಟ್ ಸೆಂಟರ್ ಎ.ಸಿ.ಯನ್ನು ಆಳವಡಿಸ ಲಾಗಿದೆ. ಕಾಮಗಾರಿಯನ್ನು ಇ.ಟೆಂಡರ್ ಮೂಲಕ ಕರೆಯಲಾಗಿದ್ದು ಉತ್ತಮವಾದ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ತಿಳಿಸಿ ಈ ಸಮುದಾಯ ಭವನ ನಿರ್ಮಾಣಕ್ಕೆ ನಮ್ಮ ಸೊಸೈಟಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಹಾ ಸಂಪೂರ್ಣವಾದ ಸಹಕಾರವನ್ನು ನೀಡಿದ್ದಾರೆ
ಎಂದು ಜಯ್ಯಣ್ಣ ತಿಳಿಸಿದರು.


ಈ ಸಂದರ್ಭದಲ್ಲಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಉಪಾಧ್ಯಕ್ಷರಾದ ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ನಿರ್ದೇಶಕರುಗಳಾದ ಸಿ.ಹೆಚ್.ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸ ಮೂರ್ತಿ, ಲಿಯಾಕತ್ ಆಲಿಖಾನ್, ಸಾಧಿಕ್ ಬಾಷ, ಸುರೇಶ್ ಕುಮಾರ್ ಬಾಫ್ನಾ, ಜೆ,ಆರ್ ಹರೀಶ್, ಜೆ.ನಿಶಾನಿ ಧಶರಥ್ ಓ ತಿಪ್ಪೇಸ್ವಾಮಿ, ಆರ್.ಚಂದ್ರಪ್ಪ, ಶ್ರೀಮತಿ ಎ.ಚಂಪಕ ನಾಮ ನಿರ್ದೇಶಕರಾದ ಪಿ.ಷಬ್ಬೀರ್ ಕೆ.ದೊರೆಸ್ವಾಮಿ, ಸಿ.ಕೆ.ಸತ್ಯಮೂರ್ತಿ, ಆರ್ಥಿಕ ಸಲಹೆಗಾರರಾದ ಮೊಹಮ್ಮದ್ ನಯೀಮ್, ಪ್ರಬಾರಿ ಕಾರ್ಯದರ್ಶಿ ಮಂಜುನಾಥ್ ಗೌಡ, ಉಪಸ್ಥಿತರಿದ್ದರು,

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *