‘ಭಾರತ ಮತ್ತೆ ಅಖಂಡವಾಗಲೇಬೇಕು’: ಚಿತ್ರದುರ್ಗದಲ್ಲಿ ಪಂಜಿನ ಮೆರವಣಿಗೆಯ ಮೂಲಕ ಜಾಗೃತಿ ಮೂಡಿಸಿದ ಹಿಂದೂ ಜಾಗರಣಾ ವೇದಿಕೆ.

ಚಿತ್ರದುರ್ಗ ಆ. 14

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಅಖಂಡ ಭಾರತ ಸಂಕಲ್ಪ ದಿನ ನಿಮಿತ್ತ ನಗರದಲ್ಲಿ ಗುರುವಾರ ರಾತ್ರಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು. ಈ ಸಂಘಟನೆಯ ಕಾರ್ಯಕರ್ತರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇಶದ ಪರಂಪರೆ, ಸಮಗ್ರತೆ, ಏಕತೆ, ಅಹಿಂಸಾ ತತ್ವ, ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಪರಂಪರೆ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮುಂದಿನ ಪೀಳಿಗೆಗೆ ದೇಶವನ್ನು ಭಾರತವಾಗಿಯೇ ಉಳಿಸಬೇಕಾದರೆ, ನೆಮ್ಮದಿಯ ಬದುಕು ಸಾಗಿಸಬೇಕಾದರೆ ಭಾರತಕ್ಕಾಗಿ ಬದುಕನ್ನು ಬಲಿಕೊಟ್ಟ ದೇಶಭಕ್ತರ ಬಲಿದಾನ ಸಾರ್ಥಕವಾಗಬೇಕಾದರೆ ಭಾರತ ಮತ್ತೆ ಅಖಂಡವಾಗಲೇಬೇಕು ದೇಶ ವಿಭಜನೆ, ಸ್ವಾರ್ಥ, ಅಧಿಕಾರದ ದುರಾಸೆ, ದುರ್ಬಲ ನಾಯಕತ್ವದ ಮೂರ್ಖ ನಿರ್ಣಯದ ಪಾಪದ ಫಲವೇ ಅಖಂಡವಾಗಿದ್ದ ಭಾರತವನ್ನು ತುಂಡರಿಸಿದೆ. ಜಗತ್ತಿನ ಅಶಾಂತಿಗೆ ಕಾರಣವಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಹುಟ್ಟಿಗೆ ಕಾರಣವೇ ಅಂದಿನ ನಾಯಕರು. ಇದು ಕೇವಲ ಭಾರತವನ್ನು ಭಗ್ನಗೊಳಿಸಿದ ಘಟನೆ ಮಾತ್ರವಲ್ಲ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಲಕ್ಷಾಂತರ ಹುತಾತ್ಮ ದೇಶ ಭಕ್ತರಿಗೆ ಎಸಗಿದ ಮಹಾದ್ರೋಹ ಎಂದು ದೂರಿದರು.

ನಮಗೆ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕ ಸಂಭ್ರಮ ಒಂದೆಡೆಯಾದರೆ, ಅದಕ್ಕಿಂತ ಮುಂಚಿನ ದಿನ ಅಂದರೆ ಆಗಸ್ಟ್ 14 ರಂದು ನಮ್ಮ ತಾಯಿ ಭಾರತಾಂಬೆಯ ಅಂಗಚ್ಛೇದನವಾಗಿ ಪಾಕಿಸ್ತಾನ ಎಂಬ ದೇಶ ಬೇರೆಯಾಯಿತು ಎಂಬ ದುಃಖದ ನೆನಪು ನಮ್ಮನ್ನು ಕಾಡುತ್ತದೆ. ಸ್ವಾತಂತ್ರ್ಯದ ಹೆಸರಿನಲ್ಲಿ ಧರ್ಮದ ಆಧಾರದ ಮೇಲೆ ನಮ್ಮ ದೇಶವನ್ನು ತುಂಡು ಮಾಡಲಾಯಿತು. ಲಕ್ಷಾಂತರ ಜನರು ತಮ್ಮ ಮನೆ-ಮನಗಳನ್ನು ಕಳೆದುಕೊಂಡು ಪ್ರಾಣತ್ಯಾಗ ಮಾಡಬೇಕಾಗಿ ಬಂತು ಎಂದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ ‘ಅಖಂಡ ಭಾರತ’ ಎನ್ನುವುದು ಕೇವಲ ಭೂಪಟವಲ್ಲ. ಅದು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಹರಡಿಕೊಂಡಿರುವ ಸಾಂಸ್ಕೃತಿಕ ಭವ್ಯತೆ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಶ್ರೀಲಂಕಾ-ಇವೆಲ್ಲವೂ ಒಂದಾನೊಂದು ಕಾಲದಲ್ಲಿ ನಮ್ಮ ಸಾಂಸ್ಕೃತಿಕ ಅಖಂಡತೆಯ ಭಾಗವಾಗಿದ್ದವು. ತಕ್ಷಶಿಲೆಯ ವಿಶ್ವವಿದ್ಯಾಲಯ ಸಿಂಧೂ ನದಿಯ ನಾಗರಿಕತೆ, ಕರಾಚಿಯ ಹಿಂಗಳಾಜ್ ಮಾತಾ ಮಂದಿರ, ಢಾಕಾದ ಧಾಕೇಶ್ವರಿ ದೇವಸ್ಥಾನ-ಇವೆಲ್ಲವೂ ನಮ್ಮ ಇತಿಹಾಸ ಅಸ್ಥಿತೆಯ ಬೇರುಗಳಾಗಿವೆ. ಇವುಗಳನ್ನು ನಮ್ಮಿಂದ ಭೌಗೋಳಿಕವಾಗಿ ಪ್ರತ್ಯೇಕಿಸಬಹುದು, ಆದರೆ ನಮ್ಮ ಹೃದಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿಯ ಮಾಜಿ ಆಧ್ಯಕ್ಷರಾದ ಏ.ಮುರಳಿ ಮಾತನಾಡಿ, ಇಂದು ನಾವು ಕೇವಲ ಹಳೆಯ ಇತಿಹಾಸವನ್ನು ನೆನಪಿಸಿಕೊಳ್ಳುತ್ತಿಲ್ಲ. ಭವಿಷ್ಯದಲ್ಲಿ ನಮ್ಮ ದೇಶವನ್ನು ಮತ್ತೆ ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಒಂದುಗೂಡಿಸುವ ಸಂಕಲ್ಪವನ್ನು ಮಾಡುತ್ತಿದ್ದೇವೆ.


ಡಾ. ಶ್ಯಾಮಪ್ರಸಾದ್ ಮುಖರ್ಜಿಯವರು ಅಖಂಡ ಭಾರತ ಕನಸು ಕಂಡಿದ್ದರು. ಇಂದು ಭಾರತವು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗುತ್ತಿದೆ. ಅಖಂಡ ಭಾರತದ ನಿರ್ಮಾಣ ಎಂದರೆ ಕೇವಲ ಗಡಿಗಳನ್ನು ವಿಸ್ತರಿಸುವುದಲ್ಲ; ಬದಲಿಗೆ ನಮ್ಮ ಸನಾತನ ಸಂಸ್ಕೃತಿ, ಭ್ರಾತೃತ್ವ, ಶಾಂತಿ ಮತ್ತು ಅಧ್ಯಾತ್ಮದ ಮೂಲಕ ಎಲ್ಲರನ್ನೂ ಒಂದುಗೂಡಿಸುವುದಾಗಿದೆ. ಬನ್ನಿ. ನಾವೆಲ್ಲರೂ ಒಟ್ಟಾಗಿ ಸಂಕಲ್ಪ ಮಾಡೋಣ. ನಮ್ಮ ದೇಶದ ಒಗ್ಗಟ್ಟನ್ನು ಕಾಪಾಡೋಣ. ಜಾತಿ, ಧರ್ಮ, ಭಾಷೆಗಳ ಭೇದ ಮರೆತು ‘ಭಾರತೀಯರು’ ಎಂಬ ಹೆಮ್ಮೆಯಿಂದ ಬದುಕೋಣ. ನಮ್ಮ ತಾಯಿ ಭಾರತಾಂಬೆಗೆ ಕಳೆದುಹೋದ ವೈಭವ ವನ್ನು ಮರಳಿ ತಂದುಕೊಡಲು ಶ್ರಮಿಸೋಣ ಎಂದ ಅವರು. ಹೊರ ರಾಷ್ಟ್ರಗಳು ಹಣಬಲ, ಶಸ್ತ್ರಬಲ ದಿಂದ ಜಗತ್ತನ್ನು ಗೆಲ್ಲಲು ಹೊರಟರೆ ಭಾರತ ದೇಶ ಆದ್ಯಾತ್ಮದ ಪರಂಪರೆಯಲ್ಲಿ ಗೆಲ್ಲಲು ಹೊರಟರುವ ದೇಶ ನಮ್ಮದು. ಈ ದೇಶದ ಇತಿಹಾಸ ಕೇಳಿದರೆ ಮೈಮನ ರೋಮಾಂಚನಗೊಳ್ಳುತ್ತದೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಬೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಓಂಕಾರ್, ಬಿಜೆಪಿ ಮುಖಂಡರಾಧ ಸಂಪತ್ವಕುಮಾರ್ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೇಖಾ, ಲೀಲಾಧರ್ ಠಾಕೂರ್, ಮಂಜುನಾಥ್, ರುದ್ರೇಶ್, ಸತೀಶ್ ಪೂಜಾರಿ ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *