ಜೈವಿಕ ಇಂಧನ ಭವಿಷ್ಯದ ಇಂಧನದ ಮೂಲ – ಜೈವಿಕ ಇಂಧನ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಿ.ಎಲ್.ಕುಲಕರ್ಣಿ ಎ.ಸಿ.ಎಫ್,
ದಿನಾಂಕ 18 ಆಗಸ್ಟ್ 2026 –
ವರದಿ ಮತ್ತು ಫೋಟೋ : ಕುಮಾರ್.ಜಿ.ಎನ್ – 9945712918
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು, ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ, ರೀಚ್ ಸಂಸ್ಥೆ ಹಾಗೂ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರ, ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಸರ್ಕಾರಿ ಪ್ರೌಢಶಾಲೆ, ಸೀಮಿಕೇರಿಯಲ್ಲಿ ಜೈವಿಕ ಇಂಧನ ಮಾಹಿತಿ, ತಿಳುವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಡಿ.ಎಲ್.ಕುಲಕರ್ಣಿ, ಎ.ಸಿ.ಎಫ್‌ರವರು ಜೈವಿಕ ಇಂಧನ ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಿದರು. ನಂತರ, ಉದ್ಘಾಟನಾ ಭಾಷಣ ಮಾಡುತ್ತಾ ಜೈವಿಕ ಇಂಧನವು ಭವಿಷ್ಯದ ಪ್ರಮುಖ ಇಂಧನದ ಮೂಲವಾಗಿದ್ದು, ದೇಶದಲ್ಲಿ ಜೈವಿಕ ಇಂಧನದ ಬಳಕೆ, ಉತ್ಪಾದನೆ ಹಾಗೂ ಸಂಶೋಧನೆಗೆ ಹೆಚ್ಚಿನ ವೇಗ ನೀಡಬೇಕಾಗಿದೆ, ಇಂದಿನ ದಿನಮಾನದಲ್ಲಿ ವಾತಾವರಣ ಬದಲಾವಣೆ ನೋಡ್ತಾ ಇದ್ದೀರಾ ಮಳೆಗಾಲದಲ್ಲಿ ಚಳಿಗಾಲ ಚಳಿಗಾಲದಲ್ಲಿ ಬೇಸಿಗೆ ಕಾಲ ಈಗ ಮಳೆ ಬೇಕು ಬೆಳೆಗಳು ಒಣಗುತ್ತೆ ಹೀಗೆಲ್ಲಾ ಆಗುವುದಕ್ಕೆ ಕಾರಣ ಮಳೆ ಬಾರದಿರುವುದು ಮಳೆ ಬಾರದಿರುವುದಕ್ಕೆ ಕಾರಣ ಗಿಡಮರಗಳನ್ನು ಬೆಳೆಸಿರುವುದು ಉಳಿಸದಿರುವುದು.

ಹಾಗಾಗಿ ಎಲ್ಲರೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅನ್ನುವ ವೇದವಾಕ್ಯದಿಂದ ನಾವೆಲ್ಲರೂ ಪರಿಸರವನ್ನ ಅರಣ್ಯವನ್ನ ಉಳಿಸಿ ಬೆಳೆಸಬೇಕು ಎಂದು ಕರೆ ಕೊಟ್ಟರು. ಅದರಲ್ಲೂ ನಾವು ಅರಣ್ಯದಲ್ಲಿ ಬೆಳೆಸಿರುವಂತಹ ಜೈವಿಕ ಇಂಧನ ಗಿಡಮರಗಳು ಬೇವು, ಹೊಂಗೆ ಇವುಗಳನ್ನ ಬೆಳೆಸಿದ್ದೀವಿ ಅವುಗಳಲ್ಲಿ ಬರುವಂತಹ ಉತ್ಪನ್ನಗಳನ್ನ ಸದುಪಯೋಗಪಡಿಸಿಕೊಳ್ಳುವಲ್ಲಿ ಜನ ಸಮುದಾಯಗಳು ಸಹಕರಿಸಬೇಕು ಅದನ್ನ ರಾಷ್ಟ್ರದ ಒಪ್ಪಂದವಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಕಿವಿ ಮಾತು ಹೇಳಿದರು.

ಡಾ.ಭಾರತಿ ಮೇಟಿರವರು ಜೈವಿಕ ಇಂಧನ ಕುರಿತು ಉಪನ್ಯಾಸ ನೀಡಿದರು. ಭೂಗರ್ಭದಲ್ಲಿರುವ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ಖಾಲಿ ಆಗಬಹುದು ಇವೆಲ್ಲ ನಿರಂತರವಲ್ಲ, ಮುಗಿದು ಹೋಗಬಹುದಾದ ದಿನಗಳು ಹತ್ತಿರ ಬಂದಿದೆ. ಹಾಗಾಗಿ ನಾವೆಲ್ಲರೂ ಜೈವಿಕ ಇಂಧನ ಸಸ್ಯಗಳ ಸಂರಕ್ಷಣೆಗೆ ಕೈಜೋಡಿಸಬೇಕೆಂದು ತಿಳಿಸಿದರು. ವಿದ್ಯಾಗಿರಿಯಲ್ಲಿ ಬಿ.ವಿ.ವಿ.ಎಸ್ ಕಾಲೇಜ್‌ನ ಪ್ರಾತ್ಯಕ್ಷಿತ ಕೇಂದ್ರದಲ್ಲಿ ಜೈವಿಕ ಇಂಧನ ತಯಾರಿಸುತ್ತಿದ್ದು ಬಳಕೆ ಮಾಡಲು ಉತ್ತೇಜಿಸುತ್ತಿದ್ದೇವೆ. ಸರ್ಕಾರಿ ವಾಹನಗಳು ಸಾರಿಗೆ ಹಾಗೂ ಇತರೆ ಗಾಡಿಗಳಲ್ಲೂ ಕೂಡ ಬಳಕೆಯಾಗುತ್ತಿದೆ. ಇದರಿಂದ ಹೆಚ್ಚಿನ ವಾಯು ಮಾಲಿನ್ಯ ತಡೆಯಲು ಸಾಧ್ಯವಾಗುತ್ತಿದೆ. ಬೇರೆ ದೇಶಗಳ ಮೇಲೆ ಅವಲಂಬನೆ ತಪ್ಪಿಸಲು ಜೈವಿಕ ಇಂಧನವು ಪ್ರಮುಖ ಪಾತ್ರ ವಹಿಸಲಿದೆ. ಜೈವಿಕ ಇಂಧನದ ಪ್ರಾತ್ಯಕ್ಷಿತೆಯನ್ನು ಮಕ್ಕಳಿಗೆ ಡೆಮೋ ನೀಡುವ ಮೂಲಕ ಅರಿವನ್ನು ನೀಡಿದರು.

ಜಿ.ಎನ್.ಸಿಂಹ, ನಿರ್ದೇಶಕರು, ರೀಚ್ ಸಂಸ್ಥೆರವರು ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 10ರಂದು ಆಚರಿಸಲಾಗತ್ತೆ. ಇದರ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಇತರೆ ಇಲಾಖೆಗಳು ಜೈವಿಕ ಇಂಧನ ಕುರಿತು ಅರಿವು ಹಾಗೂ ಪ್ರಾಮುಖ್ಯತೆ ಕುರಿತು ಒತ್ತು ನೀಡುವುದಾಗಿದೆ. ಜೈವಿಕ ಇಂಧನ ಸಸಿಗಳ ಸಂರಕ್ಷಣೆಗೆ ಪೂರಕವಾಗಿ ಪರಿಸರ ಗೀತೆ ಹಾಡಿ ಜೈವಿಕ ಇಂಧನ ಭವಿಷ್ಯದ ಇಂಧನ ಎಂದು ಘೋಷವಾಕ್ಯ ತಿಳಿಸಿಕೊಟ್ಟರು. ನಂತರ ಸ್ವಪ್ನ ಕುಬಣ್ಣ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮುರನಾಳರವರು ಈ ಒಂದು ಜೈವಿಕ ಇಂಧನದ ಬಗ್ಗೆ ಭಾರತಿರವರಿಂದ ಬಹಳಷ್ಟು ತಿಳಿದುಕೊಂಡAತಾಯ್ತು ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಬೇವು ಹೊಂಗೆಗಳAತ ಜೈವಿಕ ಇಂಧನ ಸಸಿಗಳನ್ನ ನೆಟ್ಟು ಸಂರಕ್ಷಿಸಲು ಆದ್ಯತೆ ಕೊಡುತ್ತೇವೆಂದು ಇದರಲ್ಲಿ ಇಷ್ಟೊಂದು ಅನುಕೂಲಗಳಿದೆ ಅದರಲ್ಲೂ ಉಪ ಉತ್ಪನ್ನಗಳಿಂದಲೂ ಆದಾಯವಿದೆ ಎಂಬುದು ಗೊತ್ತಾಯಿತು ಎಂದು ತಿಳಿಸಿದರು.
ನಂತರ ಎಂ.ಎಸ್.ಹಿರೇಮಠ್, ಮುಖ್ಯಗುರುಗಳು ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಇತ್ತೀಚಿನ ದಿನಮಾನದಲ್ಲಿ ಉಪನ್ಯಾಸಕರು ಹೇಳಿದ ಹಾಗೆ ನವೀಕರಿಸಬಹುದಾದ ಇಂಧನ ಒತ್ತು ಕೊಡಬೇಕು. ನಮ್ಮ ವಿದ್ಯಾರ್ಥಿಗಳನ್ನು ಡಾ.ಭಾರತಿ ಮೇಟಿರವರ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ಕರೆದುಕೊಂಡು ಹೋಗಿ ಮಾಹಿತಿ ತಿಳಿದುಕೊಂಡು ಬರುತ್ತೇವೆಂದು ತಿಳಿಸುತ್ತಾ ಮಾತುಗಳಿಗೆ ವಿರಾಮ ಕೊಟ್ಟರು. ಕಾರ್ಯಕ್ರಮ ಆಯೋಜನೆ ಸುಧಾ ಚುಮ್ಮನಕಟ್ಟಿ. ರೀಚ್ ಸಂಸ್ಥೆ, ಎಲ್.ಯಸ್.ಬೀಳಗಿ ಶಿಕ್ಷಕರು, ನಿರೂಪಣೆ ಮಾಡಿದರು. ಐ.ಆರ್.ಸುರಪುರ, ಶಿಕ್ಷಕರು, ವಂದನಾರ್ಪಣೆ ಮಾಡಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j