ರಕ್ಷಾ ಬಂಧನದ ಪವಿತ್ರ ಬಂಧಕ್ಕೆ ಸಾಕ್ಷಿಯಾದ ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆ.

ಚಿತ್ರದುರ್ಗ ಆ. 28

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಧರ್ಮಶಾಲಾ ರಸ್ತೆಯಲ್ಲಿನ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಶಾಲೆಯಲ್ಲಿನ ಮಕ್ಕಳಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಸಲಹಾ ಸಮಿತಿಯ ನಿರ್ದೇಶಕರಾದ ಪುಕರಾಜ್ ಆಗ್ನೀಹೋತ್ರ ಚೌಹಾನ್ ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಭರವಸೆಯನ್ನು ಸಾರುವ ಅತ್ಯಂತ ಮಹತ್ವದ ಹಬ್ಬವಾಗಿದೆ. ‘ರಕ್ಷಾ ಬಂಧನ’ ಅಂದರೆ ರಕ್ಷಣೆಯ ಗಂಟು ಎಂದರ್ಥ. ಇದು ಅಣ್ಣ-ತಮ್ಮಂದಿರ ಮತ್ತು ಅಕ್ಕ-ತಂಗಿಯರ ಅತಿಯಾದ ಪ್ರೀತಿಯನ್ನು ತೋರಿಸು ತ್ತದೆ.ಈ ದಿನ ಸಹೋದರಿಯು ತನ್ನ ಸಹೋದರನ ಬಲಕೈಯ ಮಣಿಕಟ್ಟಿಗೆ ಪವಿತ್ರವಾದ ‘ರಾಖಿ’ ಕಟ್ಟುತ್ತಾಳೆ. ಇದು ಸಹೋದರನ ಯೋಗಕ್ಷೇಮ ಮತ್ತು ದೀರ್ಘಯುಷುಗಾಗಿ ಮಾಡುವ ಪ್ರಾರ್ಥನೆಯಾಗಿದೆ. ರಾಖಿ ಕಟ್ಟಿಸಿಕೊಂಡ ಸಹೋದರು ತನ್ನ ಸಹೋದರಿಯನ್ನು ಕಷ್ಟಗಳಿಂದ ರಕ್ಷಿಸುವುದಾಗಿ ಮತ್ತು ಸದಾ ಬೆಂಬಲವಾಗಿ ನಿಲ್ಲುವುದಾಗಿ ವಚನ ನೀಡುತ್ತಾನೆ. ಈ ಹಬ್ಬವು ಕೇವಲ ರಕ್ತಸಂಬಂಧಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸ್ನೇಹಿತರು ಮತ್ತು ಸಮಾಜದ ಇತರರ ನಡುವೆಯೂ ರಕ್ಷಣೆ ಮತ್ತು ಸೌಹಾರ್ದತೆಯ ಭಾವನೆಯನ್ನು ಇದು ಬೆಸೆಯುತ್ತದೆ ಎಂದು ತಿಳಿಸಿದರು. ರಕ್ಷಾ ಬಂಧನವು ಪ್ರೀತಿ, ಕಾಳಜಿ ಮತ್ತು ಗೌರವದ ಸಾಟಿಯಿಲ್ಲದ ಬಂಧವನ್ನು ಸಂಕೇತಿಸುತ್ತದೆ. ಆದರೆ ವಿಶಾಲ ದೃಷ್ಟಿಕೋನದಲ್ಲಿ ರಾಖಿ ಹಬ್ಬ (ರಕ್ಷಾ ಬಂಧನ) ಸಾರ್ವತ್ರಿಕ ಸಹೋದರತ್ವ ಮತ್ತು ಸಹೋದರಿ ಯತೆಯ ಆಂತರಿಕ ಸಂದೇಶವನ್ನು ರವಾನಿಸುತ್ತದೆ. ಹೀಗಾಗಿ ರಾಖಿ ಹಬ್ಬವು ಸಾಮಾಜಿಕ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಸಂದೇಶವನ್ನು ನೀಡುತ್ತದೆ, ಇದು ಸಕಾರಾತ್ಮಕ ಗುಣಗಳನ್ನು ಪೋಷಿಸುವ ಅಗತ್ಯವನ್ನು, ಆಲೋಚನೆ, ಮಾತು ಮತ್ತು ಕಾರ್ಯದಲ್ಲಿ ಶುದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಶಾಂತಿಲಾಲ್, ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್, ಕಾರ್ಯದರ್ಶಿ ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಸುರೇಸ್ ಪಟಿಯಾರ್, ನಿರ್ದೆಶಕರಾದ ಜುವೇರಿಲಾಲ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾದ ನಾಜಿಮಾ ಸ್ವಲೇಹ, ಫ್ರೌಢಶಾಲಾ ಮುಖ್ಯ ಶಿಕ್ಷಕರಾದ ಜನಕರೆಡ್ಡಿ, ವ್ಯವಸ್ಥಾಪಕರಾದ ವಿಜಯಕುಮಾರ್, ಕಲಾವಿದರಾದ ನಾಗರಾಜ್ ಬೇದ್ರೇ ಭಾಗವಹಿಸಿದ್ದರು, ಶಾಲೆಯಲ್ಲಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *