ಶ್ರಾವಣ ಶುಕ್ರವಾರದ ಸಂಭ್ರಮ: ಚಿತ್ರದುರ್ಗದ ವಿವಿಧ ದೇವಾಲಯಗಳಲ್ಲಿ ಅಮ್ಮನವರಿಗೆ ವಿಶೇಷ ಪೂಜೆ.

ಚಿತ್ರದುರ್ಗ ಆ. 28

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶ್ರಾವಣ ಮಾಸದ ಮೂರನೇ ಶುಕ್ರವಾರವಾದ ಇಂದು ನಗರದ ವಿವಿಧ ದೇವಾಲಯಗಳಲ್ಲಿ ಅಮ್ಮನವರಿಗೆ ವಿವಿಧ ರೀತಿಯ ಆಲಂಕಾರ, ವಿಶೇಷವಾದ ಪೂಜೆಗಳನ್ನು ನಡೆಸಲಾಯಿತು.

ಬೆಟ್ಟದ ಮೇಲಿನ ಏಕನಾಥೇಶ್ವರಿ ಅಮ್ಮನವರಿಗೆ ಶ್ರಾವಣ ಶುಕ್ರವಾರದ ಅಂಗವಾಗಿ ಮೆಕ್ಕೇಜೋಳ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು, ದೊಡ್ಡಪೇಟೆಯಲ್ಲಿನ ಉಚ್ಚಂಗಿ ಯಲ್ಲಮ್ಮ ದೇವಿಗೆ ವಿವಿಧ ಬಣ್ಣದ ಶಾವಂತಿಗೆ, ಹೊಂಬಾಳೆ ಹೊಗಳಿಂದ ಆಲಂಕಾರವನ್ನು ಮಾಡಲಾಗಿತ್ತು,

ನಗರದ ಕೆಳಗೋಟೆಯ ಕೊಲ್ಲಪುರದ ಮಹಾಲಕ್ಷ್ಮೀ ಅಮ್ಮನವರನ್ನು ಕಮಲದಲ್ಲಿ ಕೂರಿಸಿದ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗಿ ತಲೆಗೆ ಕೀರಿಟವನ್ನು ಧರಿಸಿ ಅಮ್ಮನವರ ಕೈಯಿಂದ ಹಣ ಸುರಿಯುವಂತೆ ಮಾಡಲಾಗಿತ್ತು, ಹೊಳಲ್ಕೆರೆ ರಸ್ತೆಯ ಬರೆಗೇರಮ್ಮ ದೇವಿಗೆ ಶ್ರಾವಣ ಶುಕ್ರವಾರದ ಅಂಗವಾಗಿ ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಿ ತಲೆಗೆ ಬಂಗಾರ ಕೀರೀಟ ಕೈಯಲ್ಲಿ ತ್ರಿಶೂಲ ಹಿಡಿದು ಹೊಂಬಾಳೆಯನ್ನು ಧರಿಸಲಾಗಿತ್ತು, ಐಯನ್ಯಹಳ್ಳಿ ಕರುಬಹಟ್ಟಿಯ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಬೆಣ್ಣೆಯ ಅಲಂಕಾರವನ್ನು ಮಾಡಲಾಗಿತ್ತು,

ಗೌರಸಂದ್ರ ಮಾರಮ್ಮ ದೇವಿಗೂ ಸಹಾ ಶ್ರಾವಣ ಮಾಸದ ಶ್ರುಕ್ರವಾರದ ಅಂಗವಾಗಿ ಸೇವಂತಿಗೆ, ಕನಕಬಾರ, ಗೋರಟೆ ಸೇರಿದಂತೆ ವಿವಿಧ ಹೊಗಳಿಂದ ಆಲಂಕಾರವನ್ನು ಮಾಡಲಾಗಿತ್ತು. ಈ ಎಲ್ಲಾ ದೇವಾಲಯಗಳಲ್ಲಿಯೂ ಸಹಾ ಭಕ್ತಾಧಿಗಳು ಆಗಮಿಸುವುದರ ಮೂಲಕ ಪೂಜೆಯನ್ನು ಮಾಡಿಸಿ ಅಮ್ಮನವರ ಆರ್ಶಿವಾದವನ್ನು ಪಡೆದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *