ಚಿತ್ರದುರ್ಗದಲ್ಲಿ ಸೆ.5–6ರಂದು ಶೃತಿ ಎಸ್. ಹೆಗಡೆ ಅವರ ‘ಚಿತ್ರ ಕಲರವ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ.

ಚಿತ್ರದುರ್ಗ ಸೆ. 03

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಧನ ಸಹಾಯದಡಿಯಲ್ಲಿ ಶ್ರೀಮತಿ ಶೃತಿ ಎಸ್ ಹೆಗಡೆಯವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಚಿತ್ರ ಕಲರವ ಸೆ. 5 ಮತ್ತು 6 ರಂದು ನಗರದ ಪತ್ರಿಕಾ ಭವನದ ಬಿ.ವಿ.ವೃಕುಂಠರಾಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸೆ, 5ರ ಶ£ನಿವಾರ ಸಂಜೆ 5 ಗಂಟೆಗೆ ಚಿತ್ರ ಕಲರವದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಬಿ.ಎಂ.ಗುರುನಾಥ್ ನೆಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಲಲಿತಕಲಾ ಆಕಾಡೆಮಿಯ ಸದಸ್ಯರಾದ ಸಿ ಕಣ್ಮೇಶ್ ವಹಿಸಲಿದ್ದಾರೆ. ಚಿನ್ಮೂಲಾದ್ರಿ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾ ಪುತ್ತೂರ್‍ಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ಚಿತ್ರಕಲಾವಿದರಾದ ನಾಗರಾಜ್ ಬೇದ್ರೇ, ಹಾಗೂ ನವೀನ್ ಬೇದ್ರೇ ಭಾಗವಹಿಸಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಈ ಚಿತ್ರ ಕಲರವದಲ್ಲಿ ಶ್ರೀಮತಿ ಶೃತಿ ಎಸ್ ಹೆಗಡೆಯವರ ರಚನೆ ಮಾಡಿದ ಯಕ್ಷಗಾನ,ಸಂಸ್ಕೃತಿ,ಪರಂಪರೆ , ಪ್ರಕೃತಿ ಸಂಬಂಧಿತ ಚಿತ್ರಗಳು ಪ್ರದರ್ಶನವಾಗಲಿವೆ.

Leave a Reply

Your email address will not be published. Required fields are marked *