ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸೆಪ್ಟೆಂಬರ್ 14: ಪಾಲಿಗೆ ಮುಂಗಾರು ಮುಗಿಲಲ್ಲಿ ಉಳಿಯುತ್ತಿತ್ತು. ಹಿಂಗಾರು ಕೈಹಿಡಿದರೆ ಬದುಕೆಂಬ ಸ್ಥಿತಿ ಸಾಮಾನ್ಯವಾಗಿತ್ತು. ಈ ಕಾರಣಕ್ಕೆ ಇಲ್ಲಿನ ಕೃಷಿಕರುಇಬ್ಬನಿ ನಂಬಿ ಕಡ್ಲೆ, ಈರುಳ್ಳಿ ಅಂತಹ ಬೆಳೆ ಬೆಳೆಯುವ ಬುದ್ಧಿವಂತಿಕೆ ಹೊಂದಿದ್ದರು.ಈಗ ನೀರು ಯಥೆಚ್ಚವಾಗಿ ಹರಿಯುತ್ತಿದೆ. ಈ ಸಂದರ್ಭ ಅನ್ನದಾತರು ನೀರನ್ನು ಮಿತ ಬಳಕೆಮಾಡಬೇಕು ಎಂದು ತಿಳಿಸಿದರು.

ಭದ್ರೆ ಜಿಲ್ಲೆ ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ಬಂಗಾರದ ಬೆಳೆ ಬೆಳೆಯಲು ಅವಕಾಶದ ಬಾಗಿಲು ತೆರೆಯಲಿದೆ. ಇತಿಹಾಸ ಸೃಷ್ಟಿಸುವ ಕಾಲಘಟ್ಟ, ವೈಭವ ಮರುಕಳಿಸಲಿದೆ. ಕೆರೆಗಳ ತವರೂರು ಆಗಿರುವ ಚಿತ್ರದುರ್ಗ ಜಿಲ್ಲೆ ಹಸಿರಿನಿಂದ ಕಂಗೊಳಿಸಲಿದೆ ಎಂದರು.
ಸಿಹಿ ಹಂಚಿಕೆಗೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಜನರ ಬಹುವರ್ಷಗಳ ಕಾಲದ ಕನಸು ಈಡೇರಿದೆ. ಅನೇಕ ಅಡ್ಡಿ ಆತಂಕಗಳನ್ನು ದಾಟಿಕೊಂಡು ಭದ್ರೆ ನೀರು ಜಿಲ್ಲೆ ಪ್ರವೇಶಿಸಿದೆ ಎಂದು ತಿಳಿಸಿದರು.
ಅಬ್ಬಿನಹೊಳಲು ಬಳಿ ಭೂಮಿ ನೀಡಲು ವಿರೋಧಿಸಿದ್ದ ರೈತರ ಮನವೊಲಿಸುವಲ್ಲಿ ನಾನು ಸೇರಿ ಅನೇಕರು ಶ್ರಮಪಟ್ಟಿದ್ದೇವು. ಹೆಗ್ಗಡೆಹಳ್ಳಿ ಸಮೀಪ ಬೃಹತ್ ಬಂಡೆ ನೀರು ಹರಿಯಲು ಅಡ್ಡಿಯಾಗಿತ್ತು. ಅದನ್ನು ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆ ಆಗದ ರೀತಿ ಸ್ಫೋಟಗೊಳಿಸುವ ಸವಾಲು ಯಶಸ್ವಿಗೊಳಿಸಿದ್ದು, ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಡಿ.ಕೆ.ಶಿವಕುಮಾರ್ ಬದ್ಧತೆ ನಿಜಕ್ಕೂ ಸ್ಮರಣೀಯ. ಅವರು ಈಗ ಮುಖ್ಯಮಂತ್ರಿಯಾಗಿ ಗೋನೂರಿಗೆ ಪೂಜೆ ಸಲ್ಲಿಸಲು ಸೆ.24ಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರಾ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಬಸವ ಭೃಂಗೇಶ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಸಿಹಿ ವಿತರಣೆ ದಾಸೋಹಿಗಳಾದ ಗೋಡೆಮನೆ ಹನುಮಂತಪ್ಪ, ತಾಪಂ ಇಒ ವೈ.ರವಿಕುಮಾರ್, ಮಾಜಿ ಸದಸ್ಯ ಎಚ್.ಆಂಜನೇಯ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ನಿರಂಜನ್, ಎಚ್.ಲಕ್ಷö್ಮಣ್, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ
ಜೋಗಿಮಟ್ಟಿ ಈ.ಮಹೇಶಬಾಬು, ಪ್ರಹ್ಲಾದ್, ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು, ನಿರ್ದೇಶಕ ಕೋಗುಂಡೆ ಮಠ, ಟಿ.ಎಂ.ಪ್ರದೀಪ್‌ಕುಮಾರ್, ಫಣಿಯಪ್ಪ, ಕೆಪಿಎಂ ಗಣೇಶಯ್ಯ, ಆನಂದ್, ಇಂಜಿನಿಯರ್ ಗಂಗೇಶ್, ಆರ್‌ಎನ್ ಶೆಟ್ಟಿ ಕಂಪನಿಯ ಇಂಜಿನಿಯರ್‌ಗಳು ಭೋವಿಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಹಾಗೂ ಸಿಬ್ಬಂದಿ ಇದ್ದರು.