ಇಂದಿನ ವಿಶೇಷ: ಭಗ್ನಪ್ರೇಮದಿಂದ ಸಿಟ್ಟು, ಸಂತಾನದ ಕುರಿತಾದ ಚಿಂತನೆ, ದೈವಭಕ್ತಿಯಿಂದ ಕಾರ್ಯಸಿದ್ಧಿ ಹಾಗೂ ಮನಃಶಾಂತಿಗೆ ತುಸು ಧಕ್ಕೆ ಉಂಟಾಗುವ ಸಾಧ್ಯತೆಗಳಿದ್ದು, ಶನಿವಾರದ ದಿನದಂದು ದ್ವಾದಶ ರಾಶಿಗಳ ಫಲಾಫಲಗಳು ಇಲ್ಲಿವೆ.
ಇಂದಿನ ಪಂಚಾಂಗ
- ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
- ಆಯನ/ಋತು: ದಕ್ಷಿಣಾಯನ, ವರ್ಷ ಋತು
- ಮಾಸ: ಭಾದ್ರಪದ (ಚಾಂದ್ರಮಾನ), ಸಿಂಹ (ಸೌರಮಾನ)
- ಪಕ್ಷ / ತಿಥಿ / ವಾರ: ಶುಕ್ಲ ಪಕ್ಷ, ನವಮೀ ತಿಥಿ, ಶನಿವಾರ
- ನಕ್ಷತ್ರ: ಉತ್ತರಾಫಲ್ಗುಣೀ (ಮಹಾನಕ್ಷತ್ರ), ಮೂಲಾ (ನಿತ್ಯನಕ್ಷತ್ರ)
- ಯೋಗ / ಕರಣ: ಆಯುಷ್ಮಾನ್ ಯೋಗ, ಬವ ಕರಣ
- ಸೂರ್ಯೋದಯ / ಸೂರ್ಯಾಸ್ತ: 06:09 AM – 06:16 PM
- ರಾಹು ಕಾಲ: 09:12 – 10:42
- ಯಮಗಂಡ ಕಾಲ: 13:44 – 15:15
- ಗುಳಿಕ ಕಾಲ: 06:10 – 07:41
ದ್ವಾದಶ ರಾಶಿಗಳ ದಿನಭವಿಷ್ಯ
ಮೇಷ ರಾಶಿ: ಇಂದು ನಿಮ್ಮ ಮಾತಿನ ಮೇಲೆ ಸಂಪೂರ್ಣ ಹಿಡಿತವಿರಲಿ. ಬೆಲೆಬಾಳುವ ವಸ್ತುಗಳು ಕಳುವಾಗುವ ಸಾಧ್ಯತೆಗಳಿರುವುದರಿಂದ ಎಚ್ಚರ ವಹಿಸಿ. ನಿಮ್ಮ ಕಳೆದುಹೋದ ವಸ್ತು ಮರಳಿ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಬಂಧುಮಿತ್ರರ ನೆರವಿನಿಂದ ಸಾಲದ ಬಾಧೆ ಕಡಿಮೆಯಾಗಲಿದೆ. ನಿಮ್ಮ ಬಗ್ಗೆ ಅಪಪ್ರಚಾರಗಳು ನಡೆಯುವ ಸಾಧ್ಯತೆ ಇದೆ.
ವೃಷಭ ರಾಶಿ: ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ವಂಚನೆಗೊಳಗಾಗುವ ಸಾಧ್ಯತೆ ಇದೆ. ಕಳೆದುಹೋದ ವಸ್ತುಗಳು ಕೈಸೇರಲಿವೆ. ರಾಜಕೀಯ ಪ್ರೇರಿತ ಚರ್ಚೆಗಳಿಂದ ದೂರವಿರುವುದು ಉತ್ತಮ. ಇಷ್ಟವಿಲ್ಲದಿದ್ದರೂ ಕೆಲವು ಅನಿವಾರ್ಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ನಷ್ಟಗಳು ಎದುರಾಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನ ಹರಿಸುವುದು ಒಳಿತು.
ಮಿಥುನ ರಾಶಿ: ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಮನಸ್ಸಿನಲ್ಲಿ ನೆಮ್ಮದಿ ನೆಲೆಸಲಿದೆ. ಹೊಸ ವಾಹನ ಖರೀದಿಸುವ ಯೋಚನೆ ಇದ್ದರೆ ಹಿರಿಯರು ಹಾಗೂ ಆಪ್ತರ ಸಲಹೆ ಪಡೆಯಿರಿ. ಸಾಲ ಮಾಡುವ ಮುನ್ನ ನಿಮ್ಮ ಆದಾಯದ ಬಗ್ಗೆ ಅರಿವಿರಲಿ. ಮಹತ್ವದ ಕಾರ್ಯಗಳಲ್ಲಿ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಮನೋಭಾವ ಬೇಡ.
ಕರ್ಕಾಟಕ ರಾಶಿ: ಅನಗತ್ಯ ವಿವಾದಗಳಿಂದ ಅಂತರ ಕಾಯ್ದುಕೊಳ್ಳಿ. ಹೊಸ ಉದ್ಯೋಗ ಅಥವಾ ವ್ಯವಹಾರ ಆರಂಭಿಸಲು ಯಂತ್ರೋಪಕರಣಗಳ ಬಳಕೆಯತ್ತ ಗಮನ ಹರಿಸುವಿರಿ. ಪರದೇಶದಲ್ಲಿ ನೆಲೆಸಿರುವವರಿಗೆ ಸಣ್ಣಪುಟ್ಟ ಸಂಕಷ್ಟಗಳು ಎದುರಾಗಬಹುದು. ಕಾನೂನು ವಿಚಾರಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಮಾತನಾಡದಿರಿ. ಪೂರ್ವಯೋಜಿತ ಕೆಲಸಗಳಿಗೆ ಸರಿಯಾಗಿ ಸಮಯ ಹೊಂದಿಸಿಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಸಿಂಹ ರಾಶಿ: ನಿಮಗೆ ಇಷ್ಟವಾಗದ ವಿಚಾರಗಳ ವಿರುದ್ಧ ಧೈರ್ಯವಾಗಿ ದನಿ ಎತ್ತುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡವು ತುಸು ಕಷ್ಟವೆನಿಸಬಹುದು. ಉದ್ಯೋಗ ಬದಲಾವಣೆಯ ಕುರಿತು ಸ್ನೇಹಿತರೊಡನೆ ಚರ್ಚಿಸಿ ಮಾರ್ಗದರ್ಶನ ಪಡೆಯುವಿರಿ. ಸ್ವಾರ್ಥವನ್ನು ಬದಿಗಿಟ್ಟು ಕೆಲಸ ಮಾಡಲು ಇದು ಸೂಕ್ತ ಸಮಯ. ಸಹೋದರನ ಆರೋಗ್ಯದ ಬಗ್ಗೆ ಗಮನಹರಿಸಿ.
ಕನ್ಯಾ ರಾಶಿ: ಭೂಮಿ ಅಥವಾ ನಿವೇಶನ ಖರೀದಿಯ ಯೋಗವಿದ್ದರೂ ಆರ್ಥಿಕ ಹೊಂದಾಣಿಕೆ ಸವಾಲಾಗಬಹುದು. ದುಬಾರಿ ವಸ್ತುಗಳ ಖರೀದಿಯನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ನಿಮ್ಮ ಸಮಯಪ್ರಜ್ಞೆಗೆ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಅನಿರೀಕ್ಷಿತವಾಗಿ ಆರ್ಥಿಕ ನೆರವು ದೊರೆಯುವ ಮೂಲಕ ಕಷ್ಟಗಳು ದೂರವಾಗಲಿವೆ. ಇತರರೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳುವಿರಿ.
ತುಲಾ ರಾಶಿ: ಸಹೋದ್ಯೋಗಿಗಳ ಬೆಂಬಲದಿಂದ ಇಂದಿನ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನಿರೀಕ್ಷಿತ ಉದ್ಯೋಗಾವಕಾಶಗಳು ಒದಗಿಬರಲಿದ್ದು, ಮನೆಯಲ್ಲಿ ಸಕಾರಾತ್ಮಕ ಚರ್ಚೆಗಳು ನಡೆಯಲಿವೆ. ಇತರರ ಮಾತುಗಳಿಂದ ನಿಮ್ಮ ಮನಸ್ಸಿಗೆ ಘಾಸಿಯಾಗಬಹುದು, ಆದರೆ ಸಂಗಾತಿಯ ಸಾಂತ್ವನ ನಿಮಗೆ ನೆಮ್ಮದಿ ನೀಡಲಿದೆ. ಅಪರಿಚಿತ ಕರೆಗಳನ್ನು ನಿರ್ಲಕ್ಷಿಸುವುದು ಒಳಿತು.
ವೃಶ್ಚಿಕ ರಾಶಿ: ಸಕಾರಾತ್ಮಕ ವ್ಯಕ್ತಿಗಳ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ. ಸಮಸ್ಯೆಗಳಿಗೆ ನಿಧಾನವಾಗಿ ಪರಿಹಾರ ದೊರೆಯಲಿದೆ. ಪರರ ವಸ್ತುಗಳನ್ನು ಅವರಿಗೆ ಮರಳಿಸಿ. ಅರ್ಧಕ್ಕೆ ನಿಂತುಹೋಗಿದ್ದ ಕೆಲಸಗಳು ಬಂಧುಗಳ ನೆರವಿನಿಂದ ಮರುಚಾಲನೆ ಪಡೆಯಲಿವೆ. ಸಣ್ಣಪುಟ್ಟ ಉದ್ಯಮ ನಡೆಸುವವರು ಸಿಕ್ಕ ಅವಕಾಶಗಳನ್ನು ಕೈಚೆಲ್ಲದೆ ಕೆಲಸ ಮಾಡಿಕೊಡುವುದು ಉತ್ತಮ.
ಧನು ರಾಶಿ: ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ಬೇಸರ ಕಾಡಬಹುದು. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ, ಇಲ್ಲವಾದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಸಣ್ಣ ತಪ್ಪುಗಳು ದೊಡ್ಡ ಅಪವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ನಿಮ್ಮ ಜ್ಞಾನದ ಬಗ್ಗೆ ಅಹಂಕಾರ ಪ್ರದರ್ಶಿಸದಿರಿ.
ಮಕರ ರಾಶಿ: ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸುವಿರಿ. ನಿಮ್ಮಲ್ಲಿರುವ ಕೆಲವು ದುರಭ್ಯಾಸಗಳನ್ನು ತಿದ್ದಿಕೊಳ್ಳಲು ಇದು ಸಕಾಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಾರ್ವಜನಿಕವಾಗಿ ಗೌರವ ಹೆಚ್ಚಲಿದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ಲಭಿಸುವ ಸಾಧ್ಯತೆ ಇದೆ. ನಿಮ್ಮ ವಾಕ್ಚಾತುರ್ಯವು ಇತರರನ್ನು ಆಕರ್ಷಿಸಲಿದೆ.
ಕುಂಭ ರಾಶಿ: ಹೊಸ ಆಲೋಚನೆಗಳಿಂದ ಮಾನಸಿಕ ಹಿತ ಸಿಗಲಿದೆ. ಸ್ನೇಹಿತರಿಂದ ಆರ್ಥಿಕ ನೆರವು ಪಡೆಯುವ ನಿರೀಕ್ಷೆಯಿದೆ. ಇಂದು ಕಚೇರಿಯಲ್ಲಿ ಕೆಲಸ ಮಾಡಲು ನಿರಾಸಕ್ತಿ ಮೂಡಬಹುದು. ವಿನಾಕಾರಣ ಇತರರ ಮೇಲೆ ಕೋಪಗೊಳ್ಳುವುದನ್ನು ತಪ್ಪಿಸಿ. ಇತರರನ್ನು ಪ್ರಶಂಸಿಸುವ ನಿಮ್ಮ ಗುಣವು ಮೆಚ್ಚುಗೆಗೆ ಪಾತ್ರವಾಗಲಿದೆ.
ಮೀನ ರಾಶಿ: ನಿಮ್ಮ ಆಶಾವಾದಿ ಚಿಂತನೆಗಳಿಗೆ ಸಕಾರಾತ್ಮಕ ಫಲ ಸಿಗಲಿದೆ. ಸಣ್ಣಪುಟ್ಟ ಸಮಸ್ಯೆಗಳ ಕುರಿತೇ ಹೆಚ್ಚು ಆಲೋಚನೆ ಮಾಡುತ್ತಾ ಕೂರುವಿರಿ. ನಾಯಕತ್ವ ವಹಿಸಲು ಹಿಂದೇಟು ಹಾಕುವಿರಿ. ಎಲ್ಲದಕ್ಕೂ ಇತರರನ್ನು ಹೊಣೆ ಮಾಡುವ ಬದಲು, ಮೌನವಾಗಿ ನಿಮ್ಮ ಕಾರ್ಯ ಸಾಧಿಸಿಕೊಳ್ಳುವುದು ಜಾಣತನ. ಸಂಗಾತಿಯಿಂದ ನಕಾರಾತ್ಮಕ ಆಲೋಚನೆಗಳು ಬರಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j